

ಕಳೆದ ವಾರದ ಮಳೆ, ಪ್ರವಾಹಗಳಿಂದ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿಗಳೆಲ್ಲಾ ಪ್ರವಾಹದ ಮಹಾಪೂರದಲ್ಲಿ ಮುಳುಗಿವೆ.
ಈ ಪ್ರವಾಹ ಸಂತೃಸ್ತರ ನೆರವಿಗೆ ಕನ್ನಡ ಚಿತ್ರರಂಗದ ಗಣ್ಯರು ಸೇರಿದಂತೆ ಅನೇಕರು ಕೈಜೋಡಿಸಿದ್ದಾರೆ. ರಾಜ್ಯದಲ್ಲಿ ಏಕವ್ಯಕ್ತಿ ಸರ್ಕಾರದಿಂದಾಗಿ ಜನರಿಗೆ ಸರಿಯಾದ ಸರ್ಕಾರದ ಸ್ಫಂದನ ನೆರವು ದೊರೆಯದ ಅಸಮಧಾನದ ನಡುವೆ ಸೆಲಿಬ್ರಿಟಿಗಳು, ಸಂಘ ಸಂಸ್ಥೆಗಳು ಭಾದಿತರ ಕಣ್ಣೊರೆಸುವ ಕೆಲಸ ಮಾಡುತ್ತಿವೆ.
ಉತ್ತರ ಕರ್ನಾಟಕದಲ್ಲಿ ಸ್ವಂತ ಶಿವರಾಜಕುಮಾರ ಮತ್ತು ಪುನೀತ್ ರಾಜಕುಮಾರ ನೆರವಿಗೆ ಧಾವಿಸಿದ್ದು ನಾವು ಸ್ಟಾರ್‍ಡಮ್ ಅನುಭವಿಸಲು ಕಾರಣ ಕನ್ನಡದ ಜನತೆ ಹಾಗಾಗಿ ನಾವು, ನಮ್ಮ ಅಭಿಮಾನಿಗಳು ಕಷ್ಟದಲ್ಲಿರುವ ಜನರ ಸೇವೆಗೆ ಧಾವಿಸುತ್ತೇವೆ ಎಂದಿದ್ದಾರೆ. ನಟ ವಿಜಯರಾಘವೇಂದ್ರ ಸೇರಿದಂತೆ ಅನೇಕ ನಟ,ನಟಿಯರು ಸಂತೃಸ್ತರ ಜೊತೆಗೆ ನಾವಿದ್ದೇವೆ ಎಂದು ಸಾರಿದ್ದಾರೆ.
ಇನ್ಫೋಸಿಸ್ ಸುಧಾಮೂರ್ತಿ ಸೇರಿದಂತೆ ಪ್ರಮುಖ ಉದ್ಯಮಿಗಳು ಕರ್ನಾಟಕದ ಪ್ರವಾಹ ಸಂತೃಸ್ತರ ನೆರವಿಗೆ ನಿಂತಿದ್ದಾರೆ. ಉತ್ತರಕನ್ನಡದಲ್ಲೂ ಸ್ಥಳಿಯ ಸಂಘ ಸಂಸ್ಥೆಗಳು ಸಂತೃಸ್ತರ ನೆರವಿಗೆ ಬಂದಿವೆ. ಶನಿವಾರ ಜಿಲ್ಲಾ ಕಾಂಗ್ರೆಸ್ ಸಮೀತಿ ಸಂತೃಸ್ತರ ಕೇಂದ್ರಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದೆ.
ಶಿರಸಿ ಎ.ಪಿ.ಎಂ.ಸಿ. ಅಧ್ಯಕ್ಷ ಸುನಿಲ್ ನಾಯ್ಕ ತಂಡ ತಾವು ಸಂಗ್ರಹಿಸಿದ ವಸ್ತುಗಳನ್ನು ಸಂತೃಸ್ತರ ಶಿಬಿರಗಳಿಗೆ ತೆರಳಿ ನೀಡಿದೆ. ಇಂದು ಆಳ್ವಾ ಫೌಂಡೇಶನ್ ಮತ್ತು ಭಾರತೀಯ ವೈದ್ಯಕೀಯ ಸಂಘಗಳು ಸಂತೃಸ್ತರನ್ನು ಸಂದರ್ಶಿಸಿ, ಉಪಚಾರ ನೀಡಿದ್ದಾರೆ.
ಸಿದ್ಧಾಪುರ ತಾ.ಪಂ. ಸದಸ್ಯ ನಾಶಿರ್‍ಖಾನ್ ಸಂತೃಸ್ತರೊಂದಿಗೆ ಕ್ಯಾಂಪ್ ಫೈರ್ ಮಾಡಿ ಹಾಡಿ ರಂಜಿಸುವ ಮೂಲಕ ಸಂತೃಸ್ತರ ಬವಣೆಗೆ ಮನೋರಂಜನೆಯ ಔಷದೋಪಚಾರ ಮಾಡಿದ್ದಾರೆ. ಅಂದಹಾಗೆ ಇಂದು ಮಳೆಯ ಆರ್ಭಟ ತಗ್ಗಿದ್ದು ಉತ್ತರ ಕನ್ನಡ ಜಿಲ್ಲೆಯ ಸಂತೃಸ್ತರ ನಡಿಗೆ ಮನೆಕಡೆಗೆ ಎನ್ನಲಡ್ಡಿಯೇನಿಲ್ಲ.





