
ಉದ್ಘಾಟನೆ,ಶಂಕುಸ್ಥಾಪನೆ ಶಾಸಕರಿಗೆ ಮನವಿ ನೀಡಿಪರಿಹಾರ ಕೋರಿದ ವಿದ್ಯಾರ್ಥಿಗಳು
ಸರಕಾರಿ ಕಾಲೇಜ್ ಹೆಚ್ಚುವರಿ ಕೊಠಡಿಗೆ ಶಿಲಾನ್ಯಾಸ
ಸಿದ್ಧಾಪುರ ತಾಲೂಕಿನ ಬೇಡ್ಕಣಿ ಸರಕಾರಿ ಪ್ರಥಮದರ್ಜೆ ಕಾಲೇಜ್ಗೆ 4.55ಕೋಟಿರೂ.ವೆಚ್ಚದ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಇಲ್ಲಿಯ ಕಾಲೇಜ್ಗೆ ವಿಶಾಲವಾದ ಜಾಗವಿದೆ ಇಲ್ಲಿ ಸಾಕಷ್ಟು ಸಮಸ್ಯೆ ಇದೆ ಹೊಸ ಜಾಗದಲ್ಲಿ ಯಾವುದೇ ಸಂಸ್ಥೆಪ್ರಾರಂಭವಾದರೂ ಸಮಸ್ಯೆ ಇರುವುದು ಸಹಜ ಇದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಕಾಲೇಜ್ ಪ್ರಾರಂಭವಾದ ನಂತರ ಹೊಸ ಸರಕಾರ ಬಂದಿದ್ದ ಕಾರಣ ಕೆಲವು ಸಮಸ್ಯೆ ಬಗೆಹರಿಸಲು ಆಗಿಲ್ಲ ಇಲ್ಲಿಯ ಬಸ್ಗಳ ಸಮಸ್ಯೆ, ರಸ್ತೆಯ ಸಮಸ್ಯೆ,ಗ್ರಂಥಾಲಯದ ಸಮಸ್ಯೆ ಇದೆ 2 ಕೋಟಿರೂ.ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು ಪುನಃ 4.55ಕೋಟಿರೂ. ವೆಚ್ಚದಲ್ಲಿ ಇನ್ನೂ 10 ಕೊಠಡಿಗಳು ನಿರ್ಮಾಣವಾಗುತ್ತಿವೆ. ಇಲ್ಲಿಯ ಸಮಸ್ಯೆಯನ್ನು ರಾಜಕೀಯವಾಗಿ ಬಳಿಸಿಕೊಳ್ಳುವ ಪ್ರಯತ್ನ ಬೇಡ ಎಲ್ಲರೂ ಸೇರಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ತಾಪಂ ಅಧ್ಯಕ್ಷ ಸುಧೀರ್ ಗೌಡರ್ ಮಾತನಾಡಿದರು.ಸಭೆಯಲ್ಲಿ ಜಿಪಂ ಸದಸ್ಯ ನಾಗರಾಜ ನಾಯ್ಕ,ಎಂ.ಜಿ.ಹೆಗಡೆ ಗೆಜ್ಜೆ,ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಹಸೀಲ್ದಾರ ಗೀತಾ ಸಿ.ಜಿ.,ಪ್ರಾಚಾರ್ಯ ಎಸ್.ಜಿ.ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ಪ್ರೋ.ಅರುಣ ಪ್ರಸಾದ ಸ್ವಾಗತಿಸಿದರು.
ಇದಕ್ಕೂ ಮೊದಲು ಕಾಲೇಜ್ ವಿದ್ಯಾರ್ಥಿಗಳು ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಭೇಟಿ ಮಾಡಿ ಇಲ್ಲಿಯ ಬಸ್ಸಮಸ್ಯೆಯ ಬಗ್ಗೆ,ಗ್ರಂಥಾಲಯ ಇಲ್ಲದಿರುವುದು,ಕ್ಯಾಂಟಿನ್ ಹಾಗೂ ಬಸ್ನಿಲ್ದಾಣದ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಾಗೇರಿ ಇಲ್ಲಿಯ ಸಮಸ್ಯೆಯ ಬಗ್ಗೆ ನನಗೆ ಅರಿವಿದೆ ಇನ್ನು ಕೆಲವೇ ದಿನದಲ್ಲಿ ಇಲ್ಲಿಯ ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.





