
ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕರೇ ಆಚರಿಸಿಕೊಳ್ಳುವುದು ಸರಿಯಲ್ಲ, ಇತರ ರಾಷ್ಟ್ರೀಯ ಹಬ್ಬಗಳಂತೆ ಶಿಕ್ಷಕರ ದಿನ ಆಚರಣೆಯನ್ನೂ ಸರ್ಕಾರದಿಂದ ಆಚರಿಸುವುದು ಉತ್ತಮ ಎಂದು ಅಭಿಪ್ರಾಯ ಪಟ್ಟಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಕರ ತೊಂದರೆ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಅರಿವು ತಮಗಿದ್ದು ಇವುಗಳ ನಿವಾರಣೆಗೆ ಪ್ರಯತ್ನಿಸುವ ಜೊತೆಗೆ ಶಿಕ್ಷಕರ ದಿನ ಆಚರಣೆಯನ್ನು ಸರ್ಕಾರದಿಂದಲೇ ಆಚರಿಸಬೇಕೆಂದು ಸರ್ಕಾರಕ್ಕೆ ನಿರ್ಧೇಶಿಸುವುದಾಗಿ ಭರವಸೆ ನೀಡಿದ್ದಾರೆ.
ಇಲ್ಲಿಯ ರಾಘವೇಂದ್ರ ಮಠದಲ್ಲಿ ನಡೆದ ಶಿಕ್ಷಕರ ದಿನೋತ್ಸವ ಮತ್ತು ಗುರು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮೊದಲು ಶಿಕ್ಷಕ, ಶಿಕ್ಷಕಿಯರು ಗಾಯನದ ಮೂಲಕ ರಂಜಿಸಿದರೆ, ಸ್ಥಳಿಯ ಉರ್ದು ಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕವ್ವಾಲಿಯೊಂದಿಗೆ ನೃತ್ಯಮಾಡಿ ರಂಜಿಸಿದರು. ಜನಪ್ರತಿನಿಧಿಗಳು, ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಶಾಲೆಗಳು, ವಿದ್ಯಾರ್ಥಿಗಳು, ಶಿಕ್ಷಕರು, ನಿವೃತ್ತ ಶಿಕ್ಷಕ ಶಿಕ್ಷಕಿಯರು, ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಗೌರವಿಸಿ, ಅಭಿನಂದಿಸಲಾಯಿತು.
ವಿನೂತನ ಗಣೇಶ
ಸಿದ್ದಾಪುರ.ಸೆ,06-
ಪಟ್ಟಣದ ಕೊಂಡ್ಲಿಯ ಜಯಂ ಯುವಕ ಸಂಘ ತನ್ನ 25ನೇ ಗಣೇಶೋತ್ಸವದ ನಿಮಿತ್ತ ವಿನೂತನ ರೀತಿಯ ಗಣೇಶನನ್ನು ಪ್ರತಿಷ್ಠಾಪಿಸಿದೆ. ಗೌರಿ ಗಣೇಶನನ್ನು ಎತ್ತಿ ಹಿಡಿದಿರುವ ಈ ಮೂರ್ತಿಯನ್ನು ಮಾಡಿದವರು ಶಿವಕುಮಾರ ಹಿರೇಮಠ






