
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನೆರೆ,ಪ್ರವಾಹಪೀಡಿತರಿಗೆ ನೆರವಾಗದ ಸರ್ಕಾರದ ಕ್ರಮವನ್ನು ಖಂಡಿಸಿ, ಶೀಘ್ರ ಪರಿಹಾರ ನೀಡಬೇಕೆಂದು ಒತ್ತಾಯಿಸಲು ತಾಲೂಕಾ ಕಾಂಗ್ರೆಸ್ ನಿಂದ ಇಂದು ಮನವಿ ಅರ್ಪಿಸಲಾಯಿತು. ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸಿಲ್ಧಾರರಿಗೆ ನೀಡಿದ ಕಾಂಗ್ರೆಸ್ ಮುಖಂಡರು ರಾಜ್ಯದ ನೆರೆ,ಪ್ರವಾಹದಿಂದಾಗಿ ಜನತೆ ಕಷ್ಟದಲ್ಲಿದ್ದಾರೆ ಆದರೆ ಸರ್ಕಾರ ಈ ಬಗ್ಗೆ ಸ್ಫಂದಿಸಿಲ್ಲ. ಸರ್ಕಾರ ಶೀಘ್ರ ಸ್ಫಂದಿಸಿ ಪರಿಹಾರ ನೀಡದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.


