

ಸಿದ್ಧಾಪುರ ತಾಲೂಕು ನಂಜುಡಪ್ಪ ವರದಿಯ ಪ್ರಕಾರ ಹಿಂದುಳಿದ ತಾಲೂಕು.ಒಂದುಲಕ್ಷ ಮಿಕ್ಕದ ಜನಸಂಖ್ಯೆ, 15 ಸಾವಿರ ಜನರಿರುವ ಗ್ರಾಮಗಳ ಜೊತೆಗಿನ ಪಟ್ಟಣಪಂಚಾಯತ್ ಈ ಊರಿನ ಜನಸಂಖ್ಯೆ, ಜನಸಾಂದ್ರತೆ ತಿಳಿಸುತ್ತದೆ.
ಆದರೆ ಭೌಗೋಳಿಕವಾಗಿ ಈ ತಾಲೂಕು ದೊಡ್ಡದು ಇದರ ಶಿರಸಿ ಬನವಾಸಿ ರಸ್ತೆಯ ಕೊಪ್ಪ ಸಮೀಪದ ಅರೆಹಳ್ಳದಿಂದ ಹಿಡಿದು ಹೊನ್ನಾವರ ಗಡಿಯ ಸಿದ್ಧಾಪುರದ ದುರ್ಗಮ ಹಳ್ಳಿಗಳ ವರೆಗೆ ಇದರ ವ್ಯಾಪ್ತಿ ಬರೊಬ್ಬರಿ 90 ಕಿ.ಮೀ.
90, ನೂರು ಕಿ.ಮೀ. ವ್ಯಾಪ್ತಿ ಉದ್ದಳತೆಯಲ್ಲಿ ಅನೇಕ ಜಿಲ್ಲೆಗಳ ಭಾಗೋಳಿಕ ವ್ಯಾಪ್ತಿಯೇ ಮುಗಿದು ಹೋಗುತ್ತದೆ. ಆದರೆ ಸಿದ್ಧಾಪುರ ಪೂರ್ವದ ಮನಮನೆ ಗಡಿಯಿಂದ ಪಶ್ಚಿಮದ ನಿಲ್ಕುಂದದವರೆಗೆ 70 ಕಿ.ಮೀ. ಈ ಅಂತರವನ್ನು 50 ವರ್ಷದ ಕೆಳಗಿನವರೆಗೂ ಕಾಲ್ನಡಿಗೆಯಲ್ಲೇ ಕ್ರಮಿಸುತ್ತಿದ್ದರು ಎಂದರೆ ಸಿದ್ಧಾಪುರದ ಜನರನ್ನು ಸಾಹಸಿಗಳಲ್ಲ ಎನ್ನಲು ಸಾಧ್ಯವಿಲ್ಲ.
ಇಂಥ ವಿಸ್ತಾರದ ತಾಲೂಕಿನ ಅರೆಹಳ್ಳ ತಾಲೂಕು ಕೇಂದ್ರದಿಂದ ಕಟ್ಟಕಡೆಯ ಹಳ್ಳಿಯಾದರೂ ಅಲ್ಲಿಯ ಪ್ರಾಕೃತಿಕ ವೈಶಿಷ್ಟ್ಯ ಅದ್ಭುತ. ಗ್ರಾಮದ ಎರಡೂ ಕಡೆ ಎತ್ತರದ ಗುಡ್ಡ ಬೆಟ್ಟ ನಡುವೆ ಹರಿಯುವ ಜರಿಯ ನಡುವೆ ಜನವಸತಿ ಅದು ಅರೆಹಳ್ಳ.
ಈ ಅರೆಹಳ್ಳದಲ್ಲಿ 25 ಕ್ಕೂ ಹೆಚ್ಚು ಮನೆಗಳಿವೆ.ಭತ್ತದಗದ್ದೆಗಳೇ ತುಂಬಿರುವ ಈ ಗ್ರಾಮಕ್ಕೂ ಅಡಿಕೆ ತೋಟ ಮೈತುಂಬಿಕೊಳ್ಳುತ್ತಾ ಹಸಿರು ಹೆಚ್ಚಿಸಿದೆ. ಇಂಥ ಗ್ರಾಮದಲ್ಲಿರುವ ಶಾಲೆಯ ಬಾಲಕಿಯ ಮೇಲೆ ಸ್ಥಳಿಯನೇ ಒಬ್ಬ ಏರಿಹೋಗಿ ಈಗ ಕಂಬಿಹಿಂದೆ ಕೂತಿದ್ದಾನೆ. ಈ ಭಾಗದಲ್ಲಿ ಹೀಗೆ ಬಾಲಕಿಯನ್ನು ಬೆದರಿಸಿದ್ದು,ಬೇಟೆಗೆ ಹೋದವರು ಪಕ್ಕದ ಊರಿನ ಮನುಷ್ಯನನ್ನೇ ಕೊಂದದ್ದು ಸೇರಿದ ಅನೇಕ ದುರ್ಘಟನೆಗಳೂ ನಡೆದಿವೆ. ಇಲ್ಲಿಯ ಶಾಲೆ ಪ್ರಶಾಂತ ಪರಿಸರದಲ್ಲಿದ್ದು ಅನೇಕ ಸಾಧಕರಿಗೆ ಕಲಿಸಿದ ಹೆಗ್ಗಳಿಕೆ ಹೊಂದಿದೆ. ಹಿಂದೆ ಇದೇ ಊರಿನ ಯುವತಿಯೊಬ್ಬಳು ತಾಲೂಕಾ ಪಂಚಾಯತ್ ಉಪಾಧ್ಯಕ್ಷರಾಗಿ ಅರೆಹಳ್ಳ ಸಿದ್ಧಾಪುರ ತಾಲೂಕಿನಲ್ಲಿದೆ ಎಂದು ಪರಿಚಯಿಸಿದ್ದರು.
ಈ ಗ್ರಾಮಕ್ಕೆ ಈ ವರ್ಷದ ಮಳೆ, ಪ್ರವಾಹಗಳ ತೊಂದರೆ ಬಾಧಿಸಿದೆ.
ಈ ಶಾಲೆಗೆ ಸುತ್ತಮುತ್ತಲ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಬಹುತೇಕ ನಡೆದೇ ಶಾಲೆಗೆ ಬರುತ್ತಾರೆ.ಇಂಥ ಅನಿವಾರ್ಯತೆಯಲ್ಲಿ ಸುಮಾರು 2.5 ಕಿ.ಮೀ ಇರುವ ಕಾನಸೂರು,ದೇವೀಸರ ಅರೆಹಳ್ಳ, ರಸ್ತೆ ಸಂಪೂರ್ಣ ಹಾಳಾಗಿದೆ. ದ್ವಿಚಕ್ರವಾಹನ, ಕಾಲ್ನಡಿಗೆಯಲ್ಲೇ ತೆರಳಲು ಅಯೋಗ್ಯವಾಗಿರುವ ರಸ್ತೆಯಲ್ಲಿ ಬೇರೆ ವಾಹನಗಳು ತೆರಳಲು ಸಾಧ್ಯವೆ? ಹಾಗಾಗಿ ಈ ಅರೆಹಳ್ಳ-ದೇವೀಸರ,ಕಾನಸೂರು ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿ ಎನ್ನುವುದು ಈ ಗ್ರಾಮಕ್ಕೆ ತಾಕಿಕೊಂಡಿರುವ ಅನೇಕ ಹಳ್ಳಿಗಳ ಜನರ ಬೇಡಿಕೆ.
ಅದ್ಭುತ ಪ್ರಾಕೃತಿಕ ಸಂಪತ್ತು, ಒಳ್ಳೆಯ ಜನ, ಉತ್ತಮಶಾಲೆ ಎಲ್ಲಾ ಇದ್ದೂ ದೂರದ ಗಡಿಯ ಗ್ರಾಮ ಎನ್ನುವ ಆರೋಪಕ್ಕೆ ಗುರಿಯಾಗಿರುವ ಅರೆಹಳ್ಳವನ್ನು ಸಮಗ್ರ ಅಭಿವೃದ್ಧಿಯ ಮೂಲಕ ಸಿದ್ಧಾಪುರಕ್ಕೆ ಹತ್ತಿರ ಮಾಡಬೇಕಾದ ಜವಾಬ್ಧಾರಿ ಇಲ್ಲಿಯ ಜನಪ್ರತಿನಿಧಿಗಳ ಮೇಲಿದೆ.
ಅಂದಹಾಗೆ ಈ ಗ್ರಾಮದ ಮುಖವನ್ನು ಈ ವರೆಗೆ ರಾಜ್ಯ ಸಾರಿಗೆ ಸಂಸ್ಥೆ ವಾಹನಗಳು ನೋಡಿಲ್ಲ, ಸಾರ್ವಜನಿಕರು ಕಾಲ್ನಡಿಗೆ ಅಥವಾ ಬಾಡಿಗೆ ಬೈಕ್, ವಾಹನ ಅವಲಂಬಿಸಿ ದೂರದ ಸಿದ್ಧಾಪುರ,ಶಿರಸಿಗಳನ್ನು ಓಡಾಡಬೇಕು. ಸ್ಥಳಿಯ ಶಾಸಕ,ಸಂಸದರು ಪ್ರತಿ ಚುನಾವಣೆಯಲ್ಲಿ ಈ ಗ್ರಾಮಕ್ಕೆ ಬರುತ್ತಾರೆ ಎನ್ನುವುದು ಈ ಗ್ರಾಮಸ್ಥರ ಆರೋಪ.
ರಾಯಲ್ ಎನಪಿಲ್ಡ್ ಬುಲೆಟ್ ಕಳ್ಳನ ಸೆರೆ
ಕಳೆದ 2ವರ್ಷಗಳ ಹಿಂದೆ ಸಿದ್ಧಾಪುರ ವಿಜಯಬ್ಯಾಂಕ್ ಬಳಿ ನಿಲ್ಲಿಸಿದ್ದ ರಾಯಲ್ ಎಲಪೀಲ್ಡ್ ಮೋಟಾರ್ ಸೈಕಲ್ ಸೇರಿದಂತೆ ಇನ್ನೊಂದು ಮೋಟಾರ್ ಸೈಕಲ್ ಗಳನ್ನು ಕದ್ದಿದ್ದ ಕಳ್ಳನನ್ನು ಸಿದ್ಧಾಪುರ ಪೊಲೀಸರು ಬಂಧಿಸಿ,ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಮಹಮದ್ ಸಜ್ಜದ ಮಹ ಮದ್ ಯೂನಸ್ ಬದ್ರಿಯಾ ಕಾಲೋನಿ ಭಟ್ಳಳ ವಾಸದ ಈ ಕಳ್ಳ ಮೊಟಾರ್ ಸೈಕಲ್ ಕದ್ದು ಸಾಗಿಸಿದ್ದ ಎನ್ನಲಾಗಿದೆ.



