

(ಸಿದ್ದಾಪುರ:) ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ತಾಲ್ಲೂಕಾಧ್ಯಕ್ಷರಾದ ಪರಮೇಶ್ವರ ಜಿ ಹಸ್ಲರ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ನೌಕರರು ಬಿ.ಪಿ.ಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸದಂತೆ ತಹಸೀಲ್ದಾರ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ನೀಡಿದರು.
ಗ್ರಾಮಪಂಚಾಯತ ಸಿಬ್ಬಂದಿಗಳಾದ ಗುಮಾಸ್ತ,ಕರವಸೂಲಿಗಾರ,ಕ್ಲರ್ಕ್,ಡಾಟಾ ಎಂಟರಿ ಆಪರೇಟರ್,ಸ್ವಚ್ಚತಾಗಾರ,ಜವಾನ ಹಾಗು ನಿರಗಂಟಿ ಪಡೆದಿರುವ ಬಿಪಿಎಲ್ ರೆಷನ್ ಕಾರ್ಡನ್ನು ರದ್ದು ಪಡಿಸುವಂತೆ ಹಾಗು ಸರಂಡರ್ ಮಾಡುವಂತೆ ಸರಕಾರದ ನಿರ್ದೇಶನ ದಲ್ಲಿ ಸೂಚಿಸಿದಂತೆ ಗ್ರಾಮಪಂಚಾಯತದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಾವುಗಳು ಕನಿಷ್ಡ ವೆತನ ಪಡೆಯುತ್ತಿದ್ದು,ಪಂಚಾಯತಕ್ಕೆ ಬರುವ ಎಲ್ಲಾ ಯೊಜನೆಗಳನ್ನು ಅನುಷ್ಟಾನ ಮಾಡುವ ಕಾರ್ಯ ಮಾಡುತ್ತಿದ್ದು ನಮಗೆ ಪ್ರತಿ ತಿಂಗಳು ವೇತನ ಸಿಗುವುದಿಲ್ಲ.ಮೊದಲಿನಂತೆ ತ್ರೈಮಾಸಿಕ ಕಂತು ಬಿಡುಗಡೆಯಾಗುವುದಿಲ್ಲ.ಹೀಗಿರುವಾಗ ಕನಿಷ್ಟ ವೇತನ ಕೂಡ ಪಡೆದು ಜೀವನ ನಿರ್ವಹಣೆ ಮಾಡುತ್ತಿರುವ ನಮ್ಮ ಬಿಪಿಎಲ್ ಪಡಿತರಚೀಟಿಯನ್ನು ರದ್ದುಗೊಳಿಸಿದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಅದ್ದರಿಂದ ಯಾವುದೆ ಕಾರಣಕ್ಕೂ ಪಡಿತರ ಚೀಟಿಯನ್ನು ರದ್ದುಗೊಳಿಸಬಾರದೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಗಂಗಾಧರ ನಾಯ್ಕ, ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣ ನಾಯ್ಕ, ತಾಲ್ಲೂಕಾ ಸಮಿತಿಯ ಉಪಾಧ್ಯಕ್ಷರಾದ ವಸಂತ ನಾಯ್ಕ, ಕಾರ್ಯದರ್ಶಿಯಾದ ರಮೇಶ ನಾಯ್ಕ, ಕೋಶಾಧ್ಯಕ್ಷರಾದ ತೋಟಪ್ಪ ಮಡಿವಾಳ, ಸಂಘಟನಾ ಕಾರ್ಯದರ್ಶಿಯಾದ ಕೇಶವ ನಾಯ್ಕ ಹಾಗೂ ಸಹ ಕಾರ್ಯದರ್ಶಿಯಾದ ಸಂತೋಷ ನಾಯ್ಕ, ವಿವಿಧ ಪದಾಧಿಕಾರಿಗಳು, ಸಿದ್ದಾಪುರ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್, ಸಿಪಾಯಿ, ಸ್ವಚ್ಛತಾಗಾರ ಹಾಗೂ ನೀರುಗಂಟಿಗಳು ಹಾಜರಿದ್ದರು

ಭುವನಗಿರಿಯಲ್ಲಿ ನವರಾತ್ರಿ ಉತ್ಸವ
ಪುಟಾಣಿಗಳ ತಬಲಾ ತರಂಗ, ಮನಸೂರೆಗೊಂಡ ಪ್ರಕಾಶ ಹೆಗಡೆ ಬಾನ್ಸುರಿ ವಾದನ
ಸಿದ್ದಾಪುರ. ತಾಲೂಕಿನ ಭುವನಗಿರಿಯಲ್ಲಿ ಶರನ್ನವರಾತ್ರಿಯ ಅಂಗವಾಗಿ ಸುಷಿರ ಸಂಗೀತ ಪರಿವಾರ ವಿಶೇಷ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಬೆಂಗಳೂರಿನ ಖ್ಯಾತ ತಬಲಾವಾದಕ ಡಾ.ಉದಯರಾಜ ಕರ್ಪೂರ್ ಅವರ 12 ಪುಟಾಣಿ ವಿದ್ಯಾರ್ಥಿಗಳು ತಬಲಾ ತರಂಗ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಿಕೊಟ್ಟು ಪ್ರೇಕ್ಷಕರಿಂದ ಚಪ್ಪಾಳೆಗಿಟ್ಟಿಸಿಕೊಂಡರು.ಗಣಪತಿ ಭಜನ್ ದೊಂದಿಗೆ ಪ್ರಾರಂಭಿಸಿ,ಐಗಿರಿನಂದಿನಿ ಮುಂತಾದ ಭಕ್ತಿ ರಚನೆಗಳನ್ನು ನುಡಿಸಿದರು. ಪ್ರೀತಿ ಪ್ರಸನ್ನ, ಪ್ರಣತಿ, ವೃಷಬ್ ತಮ್ಮ ಹಾಡುಗಾರಿಕೆಯಿಂದ, ಚಿನ್ಮಯ್ ಭಾರದ್ವಾಜ ಹಾರ್ಮೋನಿಯಂನಲ್ಲಿ, ಕಮಲ್ ಕೊಳಲಿನಲ್ಲಿ ಹಾಗೂ ಪ್ರದ್ಯುಮ್ನ ಕರ್ಪೂರ್, ಲಕ್ಷ್ಯ, ಸ್ಕಂದ, ಸುದರ್ಶನ್, ಶಶಾಂಕ, ಪ್ರಣವ ಭಾರದ್ವಾಜ, ಶ್ರೀಕರ ಚತುರ್ವೇದಿ ತಬಲಾದಲ್ಲಿ ಸಾಮೂಹಿಕವಾಗಿ ತಮ್ಮ ಕೌಶಲ ಪ್ರದರ್ಶಿಸಿದರು. ನಂತರ ಆಕಾಶವಾಣಿ ಮತ್ತು ದೂರದರ್ಶನದ ಎ ಗ್ರೇಡ್ ಕಲಾವಿದ ಪಂ.ಪ್ರಕಾಶ ಹೆಗಡೆಯವರ ಕೊಳಲುವಾದನ ಡಾ.ಉದಯರಾಜ ಕರ್ಪೂರ್ ಮತ್ತು ಅವರ ಶಿಷ್ಯ ಶಶಾಂಕ ಹೆಗಡೆಯವರ ತಬಲಾಸಾತ್ ನೊಂದಿಗೆ ಮೇಳೈಸಿ ಪ್ರೇಕ್ಷಕರ ಹೃನ್ಮನ ಸೂರೆಗೊಂಡಿತು.ಇವರು ರಾಗ ದುರ್ಗಾವನ್ನು ಮಧ್ಯಲಯ ಏಕತಾಲ ಹಾಗೂ ದೃತ್ ತೀನ್ ತಾಲ್ ನಲ್ಲಿ ಪ್ರಸ್ತುತಪಡಿಸಿ, ಶ್ರೀರಾಮಚಂದಿರನೆ ಭಜನ್ ದೊಂದಿಗೆ ಕಾರ್ಯಕ್ರಮವನ್ನು ಸಂಪನ್ನ ಗೊಳಿಸಿದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
