

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮುಂಡಗೋಡಿನ ಬಿ.ಜೆ.ಪಿ.ಮುಖಂಡ ಮತ್ತು ಮಾಜಿ ಶಾಸಕ ವಿ.ಎಸ್ ಪಾಟೀಲ್ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಸದ್ಯದಲ್ಲಿ ಚುನಾವಣೆ ನಡೆಯಲಿರುವ ಯಲ್ಲಾಪುರ ಕ್ಷೇತ್ರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಹಿಂದೆ ಈ ವಾ.ಕ.ರ.ಸಾ.ಸಂಸ್ಥೆಯ ಅಧ್ಯಕ್ಷರಾಗಿದ್ದರು. ಈಗಿನ ಅಧ್ಯಕ್ಷ ವಿ.ಎಸ್.ಪಾಟೀಲ್ ಹಿಂದೆ ಯಲ್ಲಾಪುರ ಕ್ಷೇತ್ರದ ಶಾಸಕರಾಗಿದ್ದರು. ಈಗಲೂ ಅವರು ಉಪಚುನಾವಣೆಯ ಬಿ.ಜೆ.ಪಿ. ಟಿಕೇಟ್ ನ ಪ್ರಬಲ ಆಕಾಂಕ್ಷಿಯಾಗಿದ್ದು ಬಿ.ಜೆ.ಪಿ.ಅನರ್ಹಶಾಸಕ ಹೆಬ್ಬಾರ್ ಅಥವಾ ಅವರ ಕುಟುಂಬಸ್ಥರಿಗೆ ಟಿಕೇಟ್ ನೀಡಿದರೆ ಪಾಟೀಲ್ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗುತಿತ್ತು. ಬಿ.ಜೆ.ಪಿ. ವಿ.ಎಸ್.ಪಾಟೀಲ್ ರನ್ನು ನಿಗಮದ ಅಧ್ಯಕ್ಷರನ್ನಾಗಿಸುವ ಮೂಲಕ ಮಾಜಿ ಶಾಸಕರ ಅಸಮಾಧಾನಕ್ಕೆ ತಣ್ಣಿರು ಎರಚಿದೆ ಎನ್ನಲಾಗುತ್ತಿದೆ.ಪಾಟೀಲ್‍ರೊಂದಿಗೆ ಇತರ 8 ಜನ ಬಿ.ಜೆ.ಪಿ. ಪ್ರಮುಖರನ್ನು ನಾನಾ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇಮಕಾತಿ ಆದೇಶ ಮಾಡಿದ್ದಾರೆ.
