

ಸಿದ್ಧಾಪುರ ಸೇರಿದಂತೆ ನಾಡಿನಾದ್ಯಂತ ಮೂರು ದಿವಸಗಳ ದೀಪಾವಳಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಹಲವೆಡೆ ರವಿವಾರ ಬೂರೆತುಂಬುವ ಮೂಲಕ ಪ್ರಾರಂಭವಾದ ದೀಪಾವಳಿ ಮಂಗಳವಾರದ ವರುಷತೊಡಕಿನ ಮೂಲಕ ಮುಕ್ತಾಯವಾಯಿತು. ಕೆಲವೆಡೆ ರವಿವಾರ ಪ್ರಾರಂಭವಾದ ಬೂರೆನೀರಿನ ಆಚರಣೆಯೊಂದಿಗೆ ಪ್ರಾರಂಭವಾದ ದೀಪಾವಳಿ ಬುಧವಾರ ವರ್ಷತೊಡಕಿನ ಮೂಲಕ ಮುಕ್ತಾಯವಾಗಲಿದೆ.
ಮಲೆನಾಡಿನಲ್ಲಿ ಮರುಪಾಡ್ಯದ ಗೋವಿನಪೂಜೆ, ವರುಷತೊಡಕಿನ ಆಚರಣೆ ವಿಶೇಶ. ಮನೆಮನೆಯಲ್ಲಿ ಸಾಂಪ್ರದಾಯಿಕ ಗೋವಿನ ಪೂಜೆ ನಡೆಸಿದ ರೈತರು ನಂತರ ಸಾಮೂಹಿಕ ಜಾನುವಾರು ಬೆದರಿಸುವುದನ್ನು ಮಾಡಿದರು. ಮಲೆನಾಡಿನಲ್ಲೇ ಆಯಾ ಗ್ರಾಮದ ವಿಶೇಶದಂತೆ ಡೊಳ್ಳುವಾದ್ಯಗಳೊಂದಿಗೆ ಎತ್ತುಗಳ ಮೆರವಣಿಕೆ,ಬೆದರಿಸುವಿಕೆಯ ಆಯಾ ಗ್ರಾಮದ ಸಂಪ್ರದಾಯದಂತೆ ಸೋಮುವಾರ ಮತ್ತು ಮಂಗಳವಾರ ದನ ಬೆದರಿಸುವಿಕೆ ನಡೆದಿದೆ.
ಗಣೇಶ್ ಚತುರ್ಥಿಯಲ್ಲಿ ಸಾಮೂಹಿಕವಾಗಿ ಗೌರಿ ತುಂಬುವಂತೆ ದೀಪಾವಳಿಯಲ್ಲಿ ಸಾಮೂಹಿಕವಾಗಿ ಸಾರ್ವಜನಿಕ ಕೆರೆಯಲ್ಲಿ ಬೂರೆತುಂಬುವ ಸಂಪ್ರದಾಯವೂ ನಡೆಯುತ್ತದೆ. ಸಿದ್ಧಾಪುರದ ಕಾನಗೋಡು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಈ ವರ್ಷವೂ ಸಾಮೂಹಿಕವಾಗಿ ಬೂರಿ ತುಂಬಿ ದನಬೆದರಿಸುವಿಕೆಗಳೂ ನಡೆದವು.





