ಸಚಿವ ಮಾಧುಸ್ವಾಮಿ ಬ್ರಷ್ಟರನ್ನು ಮನೆಗೆ ಕಳುಹಿಸುವರೆ?ಸಚಿವರ ಎದುರು ಬೆತ್ತಲಾದ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು

ಸಚಿವರ ಎದುರು ಬೆತ್ತಲಾದ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು
ಉತ್ತರಕನ್ನಡ ಜಿಲ್ಲೆಗೆ ಪ್ರಗತಿಪರಿಶೀಲನೆಗೆ ಬಂದಿದ್ದ ನೀರಾವರಿ ಸಚಿವ ಕೆ.ಮಾಧುಸ್ವಾಮಿ ಎದುರೇ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಲು ತಡವರಿಸಿ,ಉಗಿಸಿಕೊಂಡ ಘಟನೆ ಇಂದು ಕಾರವಾರದಲ್ಲಿ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಭೇಟಿ,ಪ್ರಗತಿಪರಿಶೀಲನೆಗೆ ಬಂದ ಸಚಿವ ಮಾಧುಸ್ವಾಮಿ ಸಣ್ಣ ನೀರಾವರಿ ಇಲಾಖೆಯ ಮಾಹಿತಿ ಕೇಳುವ ಪ್ರಗತಿಪರಿಶೀಲನೆಯ ಸಂದರ್ಭದಲ್ಲಿ ಮುಂಡಗೋಡಿನ ಒಬ್ಬ ಇಂಜಿನಿಯರ್ ಸೇರಿದಂತೆ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಲು ವಿಫಲರಾದರು.
ಈ ದುರ್ನಡತೆ,ಬೇಜವಾಬ್ಧಾರಿಗೆ ತರಾಟೆಗೆ ತೆಗೆದುಕೊಂಡ ನೀರಾವರಿ ಸಚಿವ ಮಾಧುಸ್ವಾಮಿ ಬೇಜವಾಬ್ದಾರಿ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದೇನೆ ನಿಮಗೂ ಅದೇ ಗತಿಯಾಗಲಿದೆ ಎಂದು ಎಚ್ಚರಿಸಿದರು.
ಸಚಿವ ಮಾಧುಸ್ವಾಮಿ ಬ್ರಷ್ಟರನ್ನು ಮನೆಗೆ ಕಳುಹಿಸುವರೆ?
ಉತ್ತರಕನ್ನಡ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿ ಶಿರಸಿ-ಹಳಿಯಾಳಗಳ ನಡುವೆ ಸಂಗೀತ ಕುರ್ಚಿ ಸ್ಫರ್ಧೆಯಂತಾಗಿ ಒಮ್ಮೆ ಶಿರಸಿಗೆ ಸ್ಥಳಾಂತರವಾಗಿ ಮತ್ತೆ ಹಳಿಯಾಳದಲ್ಲಿ ನೆಲೆ ನಿಂತಿರುವುದು ಜಿಲ್ಲೆಯ ವಿಪರ್ಯಾಸ.
ಹೀಗೆ ಜಿಲ್ಲಾ ಕೇಂದ್ರ ಕಾರವಾರದಲ್ಲೂ ಇಲ್ಲ, ಜಿಲ್ಲೆಯ ಕೇಂದ್ರ ಸ್ಥಳ ಶಿರಸಿಯಲ್ಲೂ ಇರದೆ ಸಣ್ಣ ನೀರಾವರಿ ಇಲಾಖೆ ಹಳಿಯಾಳದಲ್ಲಿರುವುದು ಯಾರ ಹಿತಕ್ಕೆ, ಯಾರ ಅನುಕೂಲಕ್ಕೆ ಎನ್ನುವ ಪ್ರಶ್ನೆ ಏಳುವಂತಾಗಿದೆ.
ಸಣ್ಣ ನೀರಾವರಿ ಇಲಾಖೆ ಉತ್ತರಕನ್ನಡ ಜಿಲ್ಲೆಯಲ್ಲಿ ನೂರಾರು ಕೋಟಿ ಕಾಮಗಾರಿ ನಡೆಸಿದೆ. ಅದರಲ್ಲಿ 10 ಕೋಟಿಗಳಿಗೂ ಅಧಿಕ ವಾರ್ಷಿಕ ವೆಚ್ಚದ ಸಿದ್ದಾಪುರದ
ಸಣ್ಣ ನೀರಾವರಿ ಇಲಾಖೆಯ ಯಾವ ಕಾಮಗಾರಿಗಳೂ ಗುಣಮಟ್ಟಕಾಯ್ದುಕೊಂಡಿಲ್ಲ.
ಜನರಿಗೆ ತಿಳಿಸದೆ ಕೆಲವೇ ಜನಪ್ರತಿನಿಧಿಗಳ ಒಪ್ಪಿಗೆ ಮೇರೆಗೆ ನಿರ್ವಹಿಸಿದ ನೂರಾರು ಕೋಟಿ ವೆಚ್ಚದ ಕೆಲವು ಕಾಮಗಾರಿಗಳು ಕಳಪೆ,ಅವೈಜ್ಞಾನಿಕ ಮತ್ತು ನಿರುಪಯುಕ್ತ ಕೆಲಸಗಳಾಗಿವೆ.
ಇದು ಬುದ್ಧಿವಂತ ಜನರು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮಾಜಿ ಕೇಂದ್ರ ಸಚಿವ,ಸಂಸದ ಅನಂತಕುಮಾರ ಹೆಗಡೆಗಳ ಕ್ಷೇತ್ರ. ಈ ಕ್ಷೇತ್ರದಲ್ಲೇ ನೂರಾರು ಕೋಟಿ ಮಂಗಮಾಯ ಮಾಡಿರುವ ಅಧಿಕಾರಿಗಳು ಉಳಿದ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುವ ಕನಿಷ್ಟ ಸಾಧ್ಯತೆಗಳೂ ಇಲ್ಲ. ಹಳಿಯಾಳದಿಂದ ಭಟ್ಕಳದ ವರೆಗೆ ಕಾರವಾರದಿಂದ ಸಿದ್ದಾಪುರ, ಮುಂಡಗೋಡುಗಳ ವರೆಗೆ ಕೆಲವೇ ಜನಪ್ರತಿನಿಧಿಗಳು ಮತ್ತು ಪ್ರಮುಖ ಮುಖಂಡರ ಆಪ್ತರು ಸೇರಿ ನೂರಾರು ಕೋಟಿ ಅನುದಾನ ಹಾಳುಮಾಡಿ ದುಂಡಗಾಗಿದ್ದಾರೆ.
ಶಿರಸಿ,ಯಲ್ಲಾಪುರ ಕ್ಷೇತ್ರಗಳಲ್ಲಂತೂ ಹಳೆಯ ನೂರಾರು ಕೋಟಿ ಅನುದಾನ ವೆಚ್ಚದ ಕಾಮಗಾರಿಗಳಿಗೇ ಮತ್ತೆ ಕೋಟ್ಯಂತರ ಹಣ ನೀಡಿ ಹಗಲುದರೋಡೆ ಮಾಡಲಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳನ್ನು ಬಳಸಿಕೊಂಡು ಪ್ರಭಾವಿಗಳು ನುಂಗಿದ ಅನುದಾನದ ಮೊತ್ತ ನೂರಾರು ಕೋಟಿ ಸಾರ್ವಜನಿಕರ ತೆರಿಗೆ ಹಣ. ಈ ಹಣ ದುರುಪಯೋಗ ಪಡಿಸಿಕೊಂಡ ಆರೋಪದ ಮೇಲೆ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಅಮಾನತ್ತು ಮಾಡಿಸಿ, ಲೋಕಾಯುಕ್ತರೋ,ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ವಿಶೇಷ ಸಮೀತಿಯಿಂದ ತನಿಖೆಗೆ ಒಳಪಡಿಸಿದರೆ ಕೆಲವು ಗೋಮುಖವ್ಯಾಘ್ರಗಳ ಮುಖವಾಡ ಕಳಚುವುದರಲ್ಲಿ ಸಂಶಯಗಳಿಲ್ಲ.
ಸಚಿವ ಮಾಧುಸ್ವಾಮಿ ಸಭೆಯಲ್ಲಿ ಅಧಿಕಾರಿಗಳನ್ನು ತೆಗಳಿ, ನಿಂದಿಸಿ ತೆರಳಿದರೆ ಸಮಸ್ಯೆ ಮತ್ತಷ್ಟು ಉಲ್ಬಣಿಸುವುದೇ ಹೊರತು,ವಾಸ್ತವ, ಸತ್ಯ ದರ್ಶನವಾಗುವುದಿಲ್ಲ. ಉತ್ತರಕನ್ನಡ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಹಿಂದಿನ ಜಲಾನಯನ ಇಲಾಖೆಗಳ ಕಾಮಗಾರಿಗಳ ನೆಪದಲ್ಲಿ ಆಗಿರುವ ಸಾವಿರಾರು ಕೋಟಿ ಕಳಪೆ ಕಾಮಗಾರಿ ಹಗರಣದ ಹಿಂದಿರುವ ತಿಮಿಂಗಿಲಗಳನ್ನು ಹಿಡಿದು ನ್ಯಾಯ ಒದಗಿಸುವ ಕೆಲಸ ಮಾಧುಸ್ವಾಮಿ ಅಥವಾ ಈಗಿನ ಅನರ್ಹ ಸರ್ಕಾರದಿಂದ ಆಗುವುದೆ? ಎನ್ನುವುದೆ ಯಕ್ಷ ಪ್ರಶ್ನೆ. ಸುರಕ್ಷಿತ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ
ನಾಳೆಡಿ.26 ರ ಗ್ರಹಣದ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ.
ಶಿರಸಿಯಲ್ಲಿ ಬಸ್ ನಿಲ್ಧಾಣದ ಬಳಿ ಚಿಂತನ ಉತ್ತರಕನ್ನಡ ಸೂರ್ಯಗ್ರಹಣ ವೀಕ್ಷಣೆಗೆ ಸುರಕ್ಷಿತ ಸಾಧನಗಳ ವ್ಯವಸ್ಥೆ ಮಾಡಿದ್ದು ಆಸಕ್ತರು 8.45 ರ ನಂತರ ಈ ಅನುಕೂಲ ಬಳಸಿಕೊಳ್ಳಬಹುದಾಗಿದೆ.
ಶಾಲೆಗಳಲ್ಲೂ ವ್ಯವಸ್ಥೆ-
ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಗುರುವಾರ ಶಾಲಾ ಕಾಲೇಜುಗಳಿಗೆ ರಜೆ ಘೋಶಿಸಲಾಗಿಲ್ಲ. ಆಯಾ ಶಾಲೆ-ಕಾಲೇಜುಗಳಲ್ಲಿ ಸುರಕ್ಷಿತ ಸಾಧನಗಳನ್ನು ಬಳಸಿ ಸೂರ್ಯಗ್ರಹಣ ವೀಕ್ಷಣೆಗೆ ಅನುಕೂಲಮಾಡಿಕೊಡಲು ಹಿರಿಯ ಅಧಿಕಾರಿಗಳು ಆದೇಶಿಸಿದ್ದಾರೆ.

ಕೇಂದ್ರಕ್ಕೆ ಹೊರಟಿದ್ದ ರಾಜ ರಾಜ್ಯದ ರಾಜನಾದ ಕತೆ
ಇದು ರೈತನಮಗ ದೇವರಾಜ್‍ಸಾಹಸಗಾಥೆ
ಕಳೆದ ಒಂದು ವರ್ಷದಿಂದೀಚೆಗೆ ತಾಲೂಕಾ ಕೃಷಿ ಸಹಾಯಕ ನಿರ್ಧೇಶಕರಾಗಿ ಸೇವೆ ಸಲ್ಲಿಸುತಿದ್ದ ದೇವರಾಜ್ ಈಗ ಕೆ.ಪಿ.ಎಸ್.ಸಿ. ಸ್ಫರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವ ಮೂಲಕ ಸಹಾಯಕ ಕಮೀಷನರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ದೇವರಾಜ್ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಮನೂರು ಹಾಲಗಳಲೆ ರೈತ ಕುಟುಂಬದ ಕುಡಿ. ಭಾರತೀಯ ಆಡಳಿತ ಸೇವೆ ಪರೀಕ್ಷೆ ತೇರ್ಗಡೆಯಾಗಿದ್ದ ದೇವರಾಜ್ 2 ವರ್ಷಗಳ ಕೆಳಗೆ ಅಂತಿಮ ಆಯ್ಕೆಯಲ್ಲಿ ಸ್ಫಲ್ಪ ಅಂಕಗಳ ಅಂತರದಿಂದ ಆಯ್.ಎ.ಎಸ್. ನಿಂದ ವಂಚಿತರಾಗಿದ್ದರು. ನಂತರ ಕೃಷಿ ಸಹಾಯಕ ನಿರ್ಧೇಶಕರಾಗಿ ಸೇವೆಗೆ ಸೇರಿದ್ದ ಅವರು ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆಯ ಪರೀಕ್ಷೆಗಳನ್ನು ಎದುರಿಸುತಿದ್ದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

ಪಿ.ಎಂ.ಶ್ರೀ ಎಲ್.ಕೆ.ಜಿ.ಗೆ ಚಾಲನೆ ನೀಡಿದ ಶಾಸಕ ಭೀಮಣ್ಣ

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರಾರಂಭವಾಗಿರುವ ಪಿ.ಎಮ್.ಶ್ರೀ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *