

ಇಂದು ದೇಶದಲ್ಲಿ ಸಂಭವಿಸಿದ ಅಪರೂಪದ ಕಂಕಣ ಸೂರ್ಯಗ್ರಹಣವನ್ನು ಸುರಕ್ಷಿತವಾಗಿ ನೋಡುವ ಕಾರ್ಯಕ್ರಮವನ್ನು ಇಲ್ಲಿನ ಎಂ.ಜಿ.ಸಿ. ಮಹಾವಿದ್ಯಾಲಯದ ವಿಜ್ಞಾನ ವಿಭಾಗ ಮತ್ತು ಎನ್. ಎಸ್. ಎಸ್ ಘಟಕ ಜಂಟಿಯಾಗಿ ನಡೆಸಿತು.
ವೀಕ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯೆ ಪ್ರೊ. ಜಯಂತಿ ಶಾನಭಾಗ “ಈಗಾಗಲೇ ಕೆಲವು ಕಡೆ ಸೂರ್ಯಗ್ರಹಣದ ಕುರಿತು ಮೌಢ್ಯ ಕಂದಾಚಾರದ ಹೇಳಿಕೆಗಳು ಪ್ರಕಟವಾಗುತ್ತಿದ್ದವು. ಇದಕ್ಕೆ ಕಿವಿಗೊಡದೆ ಪ್ರಕೃತಿಯಲ್ಲಿ ಸಂಭವಿಸುವ ಅಪರೂಪದ ಒಂದು ಕೌತುಕವನ್ನು ಸಾಮಾನ್ಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೀಕ್ಷಿಸಿದ್ದು ಸಂತೋಷ ತಂದಿದೆ.” ಎಂದರು.
ವಿಜ್ಞಾನ ವಿಭಾಗದ ಉಪನ್ಯಾಸಕ ಪ್ರೊ. ಎಂ. ಎಸ್. ಉಡುಪ ಸೂರ್ಯಗ್ರಹಣದ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು. ಎನ್. ಎಸ್. ಎಸ್ ಘಟಕದ ಕಾರ್ಯಕ್ರಮಾಧಿಕಾರಿ,ವಿಠ್ಠಲ ಭಂಡಾರಿ, ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿ ಸೂರ್ಯಗ್ರಹಣ ವೀಕ್ಷಣೆಯ ಅಗತ್ಯವನ್ನು ವಿವರಿಸಿದರು.
ಎಂ. ಜಿ. ಸಿ ಮಹಾವಿದ್ಯಾಲಯ, ಪ. ಪೂ ಮಹಾವಿದ್ಯಾಲಯ ಹಾಗೂ ಆಯುರ್ವೇದಿಕ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಅಧ್ಯಾಪಕರು, ಸಾರ್ವಜನಿಕರು ಸೇರಿ ಸುಮಾರು 250 ಕ್ಕೂ ಹೆಚ್ಚು ಜನ ಪಾಲ್ಗೊಂಡು ಗ್ರಹಣ ವೀಕ್ಷಿಸಿ ಆನಂದಿಸಿದರು.
ತಂಡಾಗುಂಡಿ-ಗಂಡಾಗುಂಡಿ -04 ಸರ್ವಾನುಮತದಿಂದ ಬಿಲ್‍ಪಾಸ್ ಮಾಡಿಲ್ಲ ಎಂದ ಸದಸ್ಯರು
ಸಿದ್ದಾಪುರ ತಂಡಾಗುಂಡಿ ಗ್ರಾಪಂನಲ್ಲಿ ಕಾಮಗಾರಿಗಳನ್ನು ನಡೆಸುವ ಪೂರ್ವದಲ್ಲಿಯೇ ಬಿಲ್ ಪಾಸ್ ಮಾಡಿರುವ ಕುರಿತು ಗ್ರಾಪಂನ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಪಡೆದುಕೊಳ್ಳಲಾಗಿದೆ ಎಂದು ಅಂದಿನ ಪಿಡಿಒ ಲತಾ ಶೇಟ್ ಹೇಳಿಕೆ ನೀಡಿರುವುದರಲ್ಲಿ ಸತ್ಯಾಂಶ ಇಲ್ಲ ಎಂದು ಗ್ರಾಪಂನ ಮೂರು ಜನ ಸದಸ್ಯರು ಹೇಳಿಕೆ ನೀಡಿದ್ದಾರೆ.
