

ಸಿದ್ಧಾಪುರ ಸೇರಿದಂತೆ ಮಲೆನಾಡಿನಲ್ಲಿ ಹೊಳೆಹಬ್ಬ ಎಂಬ ಆಚರಣೆ ಒಂದಿದೆ.
ಕೆಲವು ಭಾಗಗಳಲ್ಲಿ ಪ್ರತಿವರ್ಷ ಹೊಳೆಹಬ್ಬ ಆಚರಿಸುವುದು ರೂಢಿ. ಆದರೆ ಸಿದ್ಧಾಪುರ ತಾಲೂಕಿನ ಕೋಲಶಿರ್ಸಿಯಲ್ಲಿ ಗ್ರಾಮದ ಮಾರಿಕಾಂಬಾ ಜಾತ್ರೆಯ ಹಿಂದಿನ ವರ್ಷ ಹೊಳೆಹಬ್ಬ ಆಚರಿಸುವುದು ಸಂಪ್ರದಾಯ.
ಕಳೆದ ಏಳುವರ್ಷಗಳ ಹಿಂದೆ ಹೊಳೆಹಬ್ಬ ನಡೆದು 6 ವರ್ಷಗಳ ಕೆಳಗೆ ಕೋಲಶಿರ್ಸಿಯಲ್ಲಿ ಮಾರಿಕಾಂಬಾ ಜಾತ್ರೆ ನಡೆದಿತ್ತು.
ಆ ಮಾರಿಕಾಂಬಾ ಜಾತ್ರೆಯ ಹಿಂದಿನ ವರ್ಷ 9 ವರ್ಷಗಳ ನಂತರ ಹೊಳೆಹಬ್ಬ ಆಚರಿಸಲಾಗಿತ್ತು. ಇಂಥ ಹಿನ್ನೆಲೆಯ ಈ ದಶಕದ ಮೊದಲ ಹೊಳೆಹಬ್ಬ ಇಂದು ಸಂಪನ್ನವಾಯಿತು.
ಊರ ಹೊರಗಿನ ಕಬ್ಬಿನಹೊಳೆ ಸೇತುವೆ ಬಳಿ ಬಂದ ಗ್ರಾಮಸ್ಥರು ಮತ್ತವರ ಹಿತೈಶಿಗಳು ಶಾಸ್ತ್ರೋಕ್ತವಾಗಿ ಹೊಳೆಯಲ್ಲಿ ಬಡಿಗರ ಮೂಲಕ ಮಣ್ಣಿನ ಮೂರ್ತಿ ಮಾಡಿಸಿ ಪೂಜೆ ನೆರವೇರಿಸಿದರು. ಹೊಳೆಅಮ್ಮನನ್ನು ಪೂಜಿಸಲು ಶೃಂಗರಿಸಿದ್ದ ಕಟ್ಟೆಯಲ್ಲಿ ರೂಢಿ-ಸಂಪ್ರದಾಯಗಳಂತೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಪೂಜೆ ನೆರವೇರಿಸಲಾಯಿತು.
ಸಹಸ್ರಾರು ಜನರು ಸೇರಿದ್ದ ಈ ಹೊಳೆಹಬ್ಬದ ನಂತರ ಮುಂದಿನ ಮಾರಿಕಾಂಬಾ ಜಾತ್ರೆಗೆ ತಯಾರಿ, ಸಿದ್ಧತೆ ಪ್ರಾರಂಭವಾಗುತ್ತದೆ. ಸಾಮೂಹಿಕ ಅನ್ನಸಂತರ್ಪಣೆಯ ನಂತರ ಮುಕ್ತಾಯವಾಗುವ ಇಂದಿನ ಕಾರ್ಯಕ್ರಮ ಮತ್ತೆ ಕನಿಷ್ಟ 5 ವರ್ಷಗಳಿಗೊಮ್ಮೆ ಅಥವಾ 7,9 ವರ್ಷಗಳ ನಡುವೆ ಮುಂದುವರಿಯುವುದೂ ಸಾಮಾನ್ಯ. ಕೋಲಶಿರ್ಸಿಯ ಗ್ರಾಮಸ್ಥರು, ಪರ ಊರುಗಳಲ್ಲಿರುವ ಉದ್ಯೋಗಿಗಳು, ಹೆಣ್ಣುಮಕ್ಕಳು ಎಲ್ಲಾ ಸಂಬಂಧಿಗಳು ಬಂದು ಸಂಬ್ರಮಿಸುವ ಹೊಳೆಹಬ್ಬ ಇಂದು ವಿದ್ಯುಕ್ತವಾಗಿ ಮುಕ್ತಾಯವಾಗಿದೆ.
ಈ ಹೊಳೆಹಬ್ಬದ ಅಂಗವಾಗಿ ಕಲ್ಲೂರಿನ ಡೊಳ್ಳಿನ ತಂಡ ಹಾಗೂ ಕೋಲಶಿರ್ಸಿಯ ಆಸಕ್ತರು ಡೊಳ್ಳುಕುಣಿತ ಮಾಡಿ ಜನರನ್ನು ರಂಜಿಸಿದರು.
ಪ್ರಭಾಕರಭಟ್ ಹೇಳಿಕೆಗೆಮಹತ್ವವಿಲ್ಲ,
ಪೊಲೀಸ್ ವೈಫಲ್ಯ ಆಗಿಲ್ಲ
ಮಂಗಳೂರಿನ ಘಟನೆಯಲ್ಲಿ ಪೊಲೀಸ್ ವೈಫಲ್ಯ ಆಗಿಲ್ಲ ಹೀಗೆ ಪೊಲೀಸರ ಮೇಲೆ ಗೂಬೆ ಕೂಡ್ರಿಸುವವರಿಂದ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವ ಅಪಾಯವಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಕೊರ್ಲಕೈ ಗ್ರಾಮ ಪಂಚಾಯತ್ ಕಟ್ಟಡ ಉದ್ಘಾಟನೆ ವೇಳೆ ಮಾತನಾಡಿದ ಅವರು ಗೊಂದಲ ಹುಟ್ಟಿಸುವ ಉದ್ದೇಶದ ಕೆಲವರು ಇಂಥ ಕೃತ್ಯಗಳಲ್ಲಿ ತೊಡಗಿದ್ದಾರೆ ಅವರ ಹುಟ್ಟಡಗಿಸಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಜವಾಬ್ಧಾರಿ ನಮ್ಮ ಮೇಲಿದೆ ಎಂದರು.




