

ಸಿದ್ಧಾಪುರ ತಾಲೂಕಿನ ಬೇಡ್ಕಣಿ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ಧೇಶಕ ಸ್ಥಾನಗಳಿಗೆ ಎಲ್ಲಾ 12 ಸದಸ್ಯರೂ ಅವಿರೋಧವಾಗಿ ಆಯ್ಕೆಯಾಗಿ ದಾಖಲೆ ಮಾಡಿದ್ದಾರೆ.
ಸಹಕಾರಿ ನಿಯಮದಂತೆ ಈ ಸಂಘದ ನಿರ್ಧೇಶಕ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿವಸವಾದ ಶನಿವಾರ ಅನೇಕ ನಾಮಪತ್ರಗಳಿದ್ದವು. ಎರಡು ಕ್ಷೇತ್ರಗಳಿಗೆ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ 2 ಸ್ಥಾನಗಳು ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದವು.
ನಿನ್ನೆ ಸಂಘದಲ್ಲಿ ಸೇರಿದ ಪ್ರಮುಖ ರಾಜಕೀಯ ನಾಯಕರು,ಆಕಾಂಕ್ಷಿಗಳು ಮಾತುಕತೆ ನಡೆಸಿ ಚೀಟಿ ಎತ್ತುವ ಮೂಲಕ ಉಳಿದ ಹತ್ತು ಸ್ಥಾನಗಳಿಗೆ ಚುನಾವಣೆಯಿಲ್ಲದೆ ನಿರ್ಧೇಶಕರನ್ನು ಆಯ್ಕೆಮಾಡಿದರು.
ಸ್ಥಳಿಯ ಮುಖಂಡರಾದ ವಿ.ಎನ್. ನಾಯ್ಕ, ನಾಗರಾಜ್ ನಾಯ್ಕ, ಉಮೇಶ್ ನಾಯ್ಕ ಮತ್ತು ಎ.ಬಿ.ನಾಯ್ಕಕಡಕೇರಿ ಸೇರಿದ ಅನೇಕ ನಾನಾ ಪಕ್ಷಗಳ ಮುಖಂಡರು ಮಾತುಕತೆ ನಡೆಸಿ ಅವಿರೋಧ ಆಯ್ಕೆ ಮಾಡುವಲ್ಲಿ ಯಶಸ್ವಿಯಾದರು.
ಉಮೇಶ್ ನಾಯ್ಕ ವಿಶೇಶ- ಬೇಡ್ಕಣಿ ಗ್ರಾ.ಪಂ. ಉಪಾಧ್ಯಕ್ಷ ಉಮೇಶ್ ನಾಯ್ಕ ಅವಿರೋಧ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಿ, ಆಯ್ಕೆಯಾದರೂ ನಿರ್ಧೇಶಕ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡುವ ಮೂಲಕ ಗಮನ ಸೆಳೆದಿದ್ದಾರೆ. ಪ್ರಮುಖರ ನಿರ್ಣಯದಂತೆ ಚೀಟಿ ಎತ್ತಿ ಆಯ್ಕೆಮಾಡುವ ಪ್ರಕ್ರಿಯೆಯಲ್ಲಿ ಉಮೇಶ್ ನಾಯ್ಕ ಆಯ್ಕೆ ಆದರು. ನಂತರ ಆ ಆಯ್ಕೆಯನ್ನು ತ್ಯಜಿಸುವ ಮೂಲಕ ಚೀಟಿ ಎತ್ತುವ ಮೂಲಕವೇ ಇನ್ನೊಬ್ಬರನ್ನೂ ಆಯ್ಕೆ ಮಾಡಲು ಸಹಕರಿಸಿದರು.ಉಮೇಶ್ ನಾಯ್ಕರ ಈ ನಡೆ ಕುತೂಹಲ ಕೆರಳಿಸುವ ಜೊತೆಗೆ ಮೆಚ್ಚುಗೆಗೂ ಪಾತ್ರವಾಯಿತು.
ಆಲಳ್ಳಿ ಅಂಗನವಾಡಿ ಬಳಿ ಬಂದ ಕಾಳಿಂಗಸರ್ಪ
ಸಿದ್ಧಾಪುರ ತಾಲೂಕಿನ ಇಟಗಿ ಆಲಳ್ಳಿಯ ಅಂಗನವಾಡಿ ಕಟ್ಟಡದ ಬಳಿ ಮುಸ್ಸಂಜೆವೇಳೆ ಬಂದಿದ್ದ 10 ಅಡಿ ಕಾಳಿಂಗ ಸರ್ಪವೊಂದನ್ನು ಹಿಡಿದು ಕಾಡಿಗೆ ಬಿಡಲಾಗಿದೆ. ಅರಣ್ಯ ಇಲಾಖೆಯ ಸಹಕಾರದೊಂದಿಗೆ ಮನೋಹರ್ ಶಿರಸಿ ಈ ಕಾಳಿಂಗವನ್ನು ಕತ್ತಲೆಕಾನಿಗೆ ಬಿಟ್ಟಿದ್ದಾರೆ. ಈ ಕಾಳಿಂಗ ಕೆರೆಹಾವೊಂದನ್ನು ನುಂಗುತಿದ್ದಾಗ ಸೆರೆಯಾಗಿತ್ತು.


