
ಎಲ್ಲಿ ಭಕ್ತರಿದ್ದಾರೆಯೋ ಅಲ್ಲಿ ಲಭ್ಯವಾಗುವವ ಶ್ರೀವಿಷ್ಣು. ಪರಮಾತ್ಮನನ್ನು ಸಾವಿರ ಸಲ ಭಕ್ತಿಯಿಂದ ಕರೆಯುವುದೇ ವಿಷ್ಣು ಸಹಸ್ರನಾಮ. ದ್ವಾಪರ ಯುಗದಲ್ಲಿ ಕೃಷ್ಣಾ ಎಂದರೆ ಸಾಕಾಗಿತ್ತು, ಕೃಷ್ಣ ಸಿಗುತ್ತಿದ್ದ. ಆದರೆ ಕಲಿಯುಗದಲ್ಲಿ ಹರಿನಾಮವ ನೆನೆದರೆ ಮಾತ್ರ ಕೃಷ್ಣ ಲಭಿಸುತ್ತಾನೆ ಎಂದು ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಹೇಳಿದ್ದಾರೆ. ಅವರು ಪಟ್ಟಣದ ಪ್ರಶಾಂತಿ ವಿದ್ಯಾಲಯ ಆವರಣದ ಸಾಯಿಕಿರಣ ಸಭಾಭವನದಲ್ಲಿ ವಿಷ್ಣುಸಹಸ್ರನಾಮ ಮಹತ್ವ ಕುರಿತು ವಿಶೇಷ ಅಧ್ಯಾತ್ಮ ಪ್ರವಚನ ನೀಡುತ್ತಿದ್ದರು.
ವಿಷ್ಣು ಸಹಸ್ರನಾಮವನ್ನು ವೇದವ್ಯಾಸರು ನೀಡಿದರು. ಅದನ್ನು ಭೀಷ್ಮಾಚಾರ್ಯರು ಪಸರಿಸಿದರು. ವಿಷ್ಣುಸಹಸ್ರನಾಮ ಪಾರಾಯಣದ ಮೂಲಕ ಮಹಾವಿಷ್ಣುವಿನ ಉಪಾಸನೆ ಮಾಡಿದರೆ ಎಲ್ಲಾ ಬಯಕೆ ಸಿದ್ಧಿಯಾಗುವುದಲ್ಲದೇ ದೈವಿಕ ಆನಂದದ ಅನುಭವ ತರುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಜನನ ಮರಣ ಚಕ್ರದಿಂದ ಬಿಡುಗಡೆ ಮಾಡುವ ಸ್ತೋತ್ರ ವಿಷ್ಣು ಸಹಸ್ರನಾಮ ಎಂದು ಅವರು ವಿವರಿಸಿದರು.
ಪ್ರಶಾಂತಿ ವಿದ್ಯಾ ಸಂಸ್ಥೆಗಳ ಪ್ರಧಾನ ಟ್ರಸ್ಟಿ ಆರ್.ಜಿ.ಪೈ ಮಂಜೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಾವು ಉದ್ಯೋಗ, ಹಣ, ಸಂಪತ್ತನ್ನು ಬಯಸುತ್ತೇವೆ. ನಾವು ಲಕ್ಷ್ಮೀನಾರಾಯಣನನ್ನು ಆರಾಧಿಸಿದರೆ ಲಕ್ಷ್ಮಿ ನೆಲೆಸುತ್ತಾಳೆ ಎಂದರು.
ಗೋಸ್ವರ್ಗ ನಿರ್ಮಾಣದ ಮೂಲಕ ಶ್ರೀರಾಘವೇಶ್ವರಭಾರತೀ ಶ್ರೀ ಸಿದ್ದಾಪುರಕ್ಕೆ ಪ್ರಪಂಚ ಭೂಪಟದಲ್ಲಿ ಹೆಸರು ತಂದುಕೊಟ್ಟಿದ್ದಾರೆ. ಇದೀಗ ಅವರ ಶ್ರೀಮಠದಿಂದ “ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್” ಸ್ಥಾಪಕ ಡಾ.ಪಾರ್ಥಸಾರಥಿಯವರಿಂದ ಅಧ್ಯಾತ್ಮ ಪ್ರವಚನ ಏರ್ಪಡಿಸುತ್ತಿರುವುದು ಸ್ವಾಗತಾರ್ಹ ಎಂದರು.
ವೇದಿಕೆಯಲ್ಲಿ ಹವ್ಯಕಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಮಹಾನಂದಿಗೋಲೋಕದ ಗೌರವಾಧ್ಯಕ್ಷ ಜಿ.ವಿ.ಹೆಗಡೆ ಕಾನಮೂಲೆ ಬೆಂಗಳೂರು ಉಪಸ್ಥಿತರಿದ್ದರು. ಸಿದ್ದಾಪುರದ ನಿವೇದಿತಾ ಮಹಿಳಾ ಮಂಡಳದ ಅಧ್ಯಕ್ಷೆ ಗಾಯತ್ರಿ ಭಟ್ಟ ಹಾಗೂ ಸದಸ್ಯರು, ದೈವಜ್ಞಬ್ರಾಹ್ಮಣ ಶ್ರೀರಾಜರಾಜೇಶ್ವರೀ ಮಹಿಳಾಮಂಡಳದ ಅಧ್ಯಕ್ಷೆ ವಿಜಯಾ ರಾಯಕರ್ ಹಾಗೂ ಸದಸ್ಯರು, ಸಿದ್ದಾಪುರ ಹವ್ಯಕ ಮಂಡಲ ಅಧ್ಯಕ್ಷ ಸುಬ್ರಾಯ ಹೆಗಡೆ ಸುಂಗೋಳಿಮನೆ, ಕಾರ್ಯದರ್ಶಿ ಹರ್ಷ ಭಟ್ಟ ಗುಂಜಗೋಡ ಸೇರಿದಂತೆ ತಾಲೂಕು ಹಾಗೂ ಜಿಲ್ಲೆಯ ನಾನಾ ಭಾಗಗಳ ಆಸ್ತಿಕರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಿದ್ದಾಪುರ ಮಂಡಲದ ವತಿಯಿಂದ ಡಾ.ಪಾರ್ಥಸಾರಥಿಯವರನ್ನು ಗೌರವಿಸಲಾಯಿತು. ಗುರುವಂದನೆ, ವೇದಘೋಷ, ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಿದ್ದಾಪುರ ವಲಯ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಸ್ವಾಗತಿಸಿದರು. ಶಿಕ್ಷಕ ಎಂ.ಜಿ.ಭಟ್ಟ ನಿರ್ವಹಿಸಿದರು. ಗೋಪರಿವಾರದ ಪಿ.ಬಿ.ಹೊಸೂರ ವಂದಿಸಿದರು.
ಸಂವಿಧಾನದ ಆಶಯಗಳ ಈಡೇರಿಕೆಗೆ ಶ್ರಮಿಸಲುಕರೆ
ಸ್ವಾತಂತ್ರ್ಯ,ಸಮಾನತೆ,ಬ್ರಾತೃತ್ವ,ಏಕತೆ, ರಾಷ್ಟ್ರಪ್ರೇಮ, ಅಖಂಡತೆ ಭಾರತದ ಸಂವಿಧಾನದ ಆಶಯಗಳು ಈ ಆಶಯಗಳ ಈಡೇರಿಕೆಗಾಗಿ
ಕೆಲಸಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿರುವ ತಹಸಿಲ್ಧಾರ ಮಂಜುಳಾ ಭಜಂತ್ರಿ ಈ ಆಶಯಗಳ ಈಡೇರಿಕೆಗಾಗಿ ಲಾಗಾಯ್ತಿನಿಂದಲೂ ಮಹನೀಯರು ಶ್ರಮಿಸಿದ್ದಾರೆ ಎಂದಿದ್ದಾರೆ.
ಇಲ್ಲಿಯ ಐತಿಹಾಸಿಕ ನೆಹರೂ ಕ್ರೀಂಡಾಂಗಣದಲ್ಲಿ ಸಾರ್ವಜನಿಕ
ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು,ಪೊಲೀಸರ ಪರೇಡ್ ವೀಕ್ಷಿಸಿದ ಅವರು ಗೌರವವಂದನೆ ಪಡೆದರು.
ಸಂಪಾದಕರ ಅನುಭವ ಕಥನ ಸ್ಮøತಿಯಾಗಿ ಹರಿದಾಗ
ಊರು,ಸಂಬಂಧ,ಜಾತಿ,ಧರ್ಮ ನಿರುಪಯುಕ್ತ ಎನ್ನುವ ಅನುಭವವಾಗಿ, ಅವಮಾನ,ಅಪಮಾನವಾದಾಗಲೆಲ್ಲಾ ಛಲ ಜಾಗೃತವಾಗುತಿತ್ತು. ಸೋಲುವ, ಕಳೆದುಕೊಳ್ಳುವ ಭಯಗಳಿಂದ ಶ್ರಮದಿಂದ ಸಾಧಿಸುವುದು ರೂಢಿಯಾಯಿತು ಎಂದು ತಮ್ಮ ಗೆಲುವಿನ ಗುಟ್ಟನ್ನು ಹೇಳಿದವರು ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ.
