

ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಲಿರುವ ಶಿವರಾಮ ಹೆಬ್ಬಾರ್ ಇಂದು ಸಂಪುಟದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಲಾರಿ ಕ್ಲೀನರ್ ನಿಂದ ವೃತ್ತಿ ಜೀವನ ಪ್ರಾರಂಭಿಸಿದ್ದ ಹೆಬ್ಬಾರ್ ನಂತರ ಲಾರಿಮಾಲಿಕ,ಎ.ಪಿ.ಎಂ.ಸಿ. ಅಧ್ಯಕ್ಷ, ನಂತರ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ, ಆನಂತರ ಶಾಸಕ ಎರಡು ಅವಧಿಗಳಲ್ಲಿ ಮೂರುಬಾರಿ ಶಾಸಕರಾದ ಶಿವರಾಮ ಹೆಬ್ಬಾರ್ ಈಗ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಸಂಪುಟದರ್ಜೆ ಸಚಿವರಾಗಿದ್ದಾರೆ.ರಾಜ್ಯ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಶಿವರಾಮ ಹೆಬ್ಬಾರ್ ಅಭಿಮಾನಿಗಳು ಯಲ್ಲಾಪುರದಲ್ಲಿ ಪಟಾಕಿ ಸಿಡಿಸಿ ಸಂಬ್ರಮಿಸಿದರು.


ನಾಡಬಂದೂಕಿನೊಂದಿಗೆ ವ್ಯಕ್ತಿಯೊಬ್ಬನ ಬಂಧನ
ಅಕ್ರಮ ಬಂದೂಕು ಹೊಂದಿದ್ದ ಎನ್ನುವ ಆರೋಪದ ಮೇಲೆ (siddapur)ತಾಲೂಕಿನ ಶಿವಳಮನೆ ಗ್ರಾಮಗ ಕಲಗದ್ದೆಯ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
