
ಅಮಾಸೆ ಹುಡುಗನ ಬಾಯೊಳಗೆ ಕವಳಮನದಲಿ
ತಳಮಳ-ಕಳವಳಮನಸ್ಸು ನಿಗಿನಿಗಿ ಕೆಂಡಮುಖಚರ್ಯೆಯಲಿ ಕುದಿಬಿಂದುಹೃದಯದಲಿ ಮಾನವತೆಇದು ವಿಡಂಬಾರಿ ಕವಿತೆ !
ಆಂತರ್ಯದಲಿ ಗುನುಗುನಿಸಿದ, ಹಂಬಲಿಸಿದ, ಬಯಸಿದಮನುಷ್ಯತ್ವ. .
.ಮಾನವತೆ. . .ಬಂಧುತ್ವಜನಮನದಾಳ ದ್ವೇಷದ ಸಿಕ್ಕು ಬಿಡಿಸುತಬೋಧಿಸಿದನೀತ, ಪ್ರೀತಿಯ ಹೂಗಳ ಅರಳಿಸಿದನೀತ
ಅಕ್ಷರದ ಸಾಂಗತ್ಯ ಇವಗೇಕೆ ಬೇಕು?
ಹೀಗಳೆವರೆನ್ನ ಎನ್ನದೇ, ಬಾಯ್ಬಿಡದೇಬರಸೆಳೆದ ಚಾವಟಿಗೆಯಪಟಾರ್ ಎಂದು ಬೀಸಿದ ಬಿರುಸಿನಲಿಪ್ರಶ್ನಿಸಿದವಗೆ ಬಾಯುತ್ತರ ತಪ್ಪಿಚುಟುಕಿನ ಬಾರೇಟು ಕನ್ನೆತ್ತರು ಗಟ್ಟಿತು
ಅವಮಾನ . . ಅಪಮಾನಗಳ ಮೊಗೆಮೊಗೆದುಸೈರಿಸಿದ ಸಂಚಯಿಸಿದ ಜೋಳಿಗೆಯಲಿ, ಕಂಕುಳ ಪುಸ್ತಕದಲಿಲೇಖನಿಯ ತುದಿ ಮಾತ್ರ ಸವೆಯಲಿಲ್ಲಕಣ್ಣತೇವ ಮಸಿಕುಡಿಕೆಅಕ್ಷಯ ಅಕ್ಷರಕೆ ಸದಾಮುನ್ನುಡಿ ಬರೆಯುತ್ತಲೇ ಹೋದನೀತ! -ಯಮುನಾ ಗಾಂವ್ಕರ್
(ವಿಡಂಬಾರಿಯವರು ಮುಂಡಗೋಡದಲ್ಲಿ ನಡೆದ ಉಕ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದಾಗ)

