

ಸಾಮಾಜಿಕನ್ಯಾಯದ ಬದಲು ಸಾಮಾಜಿಕ ಅನ್ಯಾಯದ ಪೋಷಣೆಗೆ ವಿರೋಧ
ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕವಾಗಿ ಸಾಮಾಜಿಕನ್ಯಾಯ ನೀಡಲಾಗಿದ್ದರೂ ಸಾಮಾಜಿಕ ಮೀಸಲಾತಿ ಮತ್ತು ಸರ್ಕಾರಿ ಮೀಸಲಾತಿಗಳ ನಡುವೆ ಈ ದೇಶದ ಬಹುಸಂಖ್ಯಾತ ಹಿಂದುಳಿದವರ್ಗಗಳು ಸಾಮಾಜಿಕನ್ಯಾಯ ಪಡೆಯದ ವ್ಯವಸ್ಥೆ ಬಲಗೊಳಿಸುವ ದಿಸೆಯಲ್ಲಿ ದೇಶದ ವಿದ್ಯಮಾನಗಳು ನಡೆಯುತ್ತಿವೆ.
ಉತ್ತರಕನ್ನಡ ಜಿಲ್ಲೆಯಲ್ಲಂತೂ ಮೂಲನಿವಾಸಿ, ಬಹುಸಂಖ್ಯಾತ ಹಿಂದುಳಿದವರ್ಗಗಳಿಗೆ ಸಾಮಾಜಿಕ ನ್ಯಾಯದ ಬದಲು ಸಾಮಾಜಿಕ ಅನ್ಯಾಯ ಎಸಗಲಾಗುತ್ತಿದೆ ಎಂದು ನಿವೃತ್ತ ಉಪ ಅರಣ್ಯಸಂರಕ್ಷಣಾಧಿಕಾರಿ ಯು.ಡಿ.ನಾಯ್ಕ ಹೇಳಿದರು.
ಈಡಿಗ, ದೀವರು, ಬಿಲ್ಲವ ನಾಮಧಾರಿ ನೌಕರರ ಸಂಘದ ವಾರ್ಷಿಕೋತ್ಸವದಲ್ಲಿ
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾರಾಯಣ ಗುರುಗಳ ಧ್ಯೇಯದ ನೀವು ಜಾತಿ ಕಟ್ಟುತ್ತೀರಿ ಎಂದು ಆರೋಪಿಸಿದರೆ, ನಾರಾಯಣ ಗುರುಗಳು ಅನ್ಯಾಯಕ್ಕೊಳಗಾದ ನಮ್ಮ ಸಮೂದಾಯದೊಂದಿಗೇ ಈ ದೇಶವಾಸಿಗಳ ಪರ ಧ್ವನಿ ಎತ್ತಿದ್ದರು. ಶೋಷಿತವರ್ಗಗಳು ಇಡಿಯಾಗಿ ಅಥವಾ ಬಿಡಿ,ಬಿಡಿಯಾಗಿ ಸಂಘಟಿತಗೊಳ್ಳುವುದು, ಸಾಮಾಜಿಕ ನ್ಯಾಯ ಕೇಳುವುದು ಗುರುಗಳ ಸಿದ್ಧಾಂತಕ್ಕೆ ಪೂರವಾಗಿಯೇ ಇದೆ ಎಂದು ಸಮರ್ಥಿಸಬೇಕು ಎಂದರು.
ಸಾಧಕರಾದ ಚನ್ನಬಸಪ್ಪ ಕೆ.,ದೇವರಾಜ್ ಆರ್. ನಿವೃತ್ತರಾದ ಯು.ಡಿ.ನಾಯ್ಕ, ಉಮೇಶ್ ಟಪಾಲು ರನ್ನು ಸನ್ಮಾನಿಸಿ,ಗೌರವಿಸಲಾಯಿತು. ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.




