ಕರೋನಾ: ಸರ್ಕಾರದ ದ್ವಂಧ್ವ, ಸಾರ್ವಜನಿಕರ ಉಡಾಫೆ ಗಂಡಾಂತರಕ್ಕೆ ದಾರಿಯಾಗದಿರಲಿ

ದೇಶದಲ್ಲಿ ಕರೋನಾ ವೇಗವಾಗಿ ಹರಡುತ್ತಿದೆ. ರಾಜ್ಯದಲ್ಲಿ ಈ ವರೆಗೆ ಕರೋನಾ ಸೋಂಕಿತರ ಸಂಖ್ಯೆ 54 ನ್ನು ಮುಟ್ಟಿದೆ, ಎರಡುಜನ ಮಕ್ಕಳಿಗೂ ಸೋಂಕು ತಗುಲಿರುವುದು ಪರಿಸ್ಥಿತಿಯ ವಿಕೋಪಕ್ಕೆ ಸಾಕ್ಷಿ.
ಸಮೀಕ್ಷೆಗಳ ಪ್ರಕಾರ ಕರೋನಾ ಸೋಂಕಿತರಲ್ಲಿ ಮೃತರಾದವರಲ್ಲಿ ಪುರುಷರ ಸಂಖ್ಯೆ ಹೆಚ್ಚು.
ಸರ್ಕಾರದ ದ್ವಂದ್ವ-
ಪ್ರಧಾನಿ ಮೋದಿ ಏಫ್ರಿಲ್ 14 ರ ವರೆಗೆ 21 ದಿವಸ ಗೃಹಬಂಧನ ವಿಧಿಸಿದ ಮೇಲೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ರಾತ್ರಿ ಬೆಳಗಾಗುವುದರೊಳಗೆ ಬೆಂಗಳೂರಿಗೆ ಬರುವವರು ಬನ್ನಿ, ಹೊರ ಊರುಗಳಿಗೆ ಹೋಗುವವರು ಹೋಗಿ ಎಂದಿದ್ದು ಅನೇಕ ವಿಪ್ಲವಗಳಿಗೆ ಕಾರಣವಾಗಿದೆ.
ರಗಳೆನಂ1-
ಬೆಂಗಳೂರಿನಲ್ಲಿ ಕರೋನಾ ವಿಸ್ತರಿಸುತ್ತಿರುವ ಅವಧಿಯಲ್ಲಿ ಸರ್ಕಾರ ಬೆಂಗಳೂರಿನ ಜನರನ್ನು ಹೊರಗೆ ಕಳುಹಿಸಿರುವುದು, ಹೊರಗಿನವರನ್ನು ಒಳಗೆ ಬಿಟ್ಟುಕೊಂಡಿರುವುದು ಎರಡೂ ಪ್ರಮಾದಗಳೆ. ಕರೋನಾ ವಿಸ್ತರಿಸುತ್ತಿರುವ ಬೆಂಗಳೂರಿಗೆ ಹೊರ ಊರುಗಳಿಂದ ಬಂದಿರುವವರು ಸೋಂಕು ತಗುಲಿಸಿಕೊಳ್ಳುವ ಅಪಾಯವಿದೆ. ಇದಕ್ಕಿಂತ ದೊಡ್ಡ ಗಂಡಾಂತರವೆಂದರೆ… ಬೆಂಗಳೂರಿನ ನಾನಾ ಪ್ರದೇಶದಲ್ಲಿದ್ದ ಲಕ್ಷಾಂತರ ಜನರು ಕಳೆದ 24 ಗಂಟೆಗಳಲ್ಲಿ ತಮ್ಮ ತಮ್ಮ ಊರು ತಲುಪಿದ್ದಾರೆ. ಹೀಗೆ ರಾತ್ರಿಯಿಂದ ಮತ್ತೊಂದು ರಾತ್ರಿ ಪ್ರಾರಂಭವಾಗುವ ಮೊದಲು ತಾಲೂಕು, ಗ್ರಾಮ ಸೇರಿಕೊಂಡವರು ಕರೋನಾ ಸೋಂಕು ಪೀಡಿತರಾಗಿದ್ದರೆ ಅವರು ಕರೋನಾವನ್ನು ಬೆಂಗಳೂರಿನಿಂದ ರಾಜ್ಯದಾದ್ಯಂತ ವಿಸ್ತರಿಸಿದಂತಲ್ಲವೆ?
ಇದು ರಾಜ್ಯ ಸರ್ಕಾರದ ಬೇಜವಾಬ್ಧಾರಿಯ ಒಂದು ದೃಷ್ಟಾಂತವಾದರೆ, ಇಂದು ಅವಶ್ಯವಸ್ತುಗಳ ಖರೀದಿ ಕೇಂದ್ರಗಳನ್ನು ದಿನದ 24 ಗಂಟೆ ತೆರದಿಡಬೇಕೆಂಬ ಹೊಸ ಆದೇಶ ಪ್ರಧಾನಿಯವರ ಗೃಹಬಂಧನ ಆದೇಶದ ವಿರುದ್ಧವಾಗುವುದಿಲ್ಲವೆ?
ಇಂಥದ್ದೇ ದ್ವಂದ್ವ, ಗೊಂದಲಗಳು ಉತ್ತರ ಕನ್ನಡ ಜಿಲ್ಲೆಯಲ್ಲಾದ ಬಗ್ಗೆ ಸಮಾಜಮುಖಿ ಕಳೆದ ಎರಡು ದಿವಸಗಳಿಂದ ಸರ್ಕಾರದ ಗಮನ ಸೆಳೆದಿದೆ. ಜಿಲ್ಲಾಧಿಕಾರಿಗಳು ಒಂದು ಆದೇಶ ಹೊರಡಿಸಿದ ನಂತರ ದಿಢೀರನೆ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳ ಪ್ರಕಟಣೆ ಹೊರಬೀಳುತ್ತದೆ. ತಾಲೂಕಾ ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶ ಪಾಲಿಸುತ್ತಿರುವ ಸಮಯದಲ್ಲಿ ಸರ್ಕಾರ, ಮುಖ್ಯಮಂತ್ರಿಗಳ ಹೊಸ ಪ್ರಕಟಣೆ,ಆದೇಶ ದ್ವಂದ್ವಕ್ಕೆ ಕಾರಣವಾಗುತ್ತಿದೆ. ಇಂಥ ಅನಾಹುತಗಳ ಸಂಧರ್ಭದಲ್ಲಿ ಸರ್ಕಾರ, ಮುಖ್ಯಮಂತ್ರಿ ವಿವೇಚನೆಯಿಂದ ನಡೆದುಕೊಳ್ಳದಿದ್ದರೆ ಅದು ಸರ್ಕಾರದ ವಿಫಲತೆ.
ಒಂದೆಡೆ ಆಡಳಿತಶಾಹಿ,ಸರ್ಕಾರ, ಮುಖ್ಯಮಂತ್ರಿಗಳ ನಡುವಿನ ಸಮನ್ವಯತೆಯ ಕೊರತೆಯ ದೋಷ, ರಗಳೆಯಾದರೆ, ಸಾರ್ವಜನಿಕರು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ರೋಗ ಉಲ್ಬಣ, ತೊಂದರೆಗಳ ಉಲ್ಬಣಕ್ಕೂ ಕಾರಣವಾಗುತ್ತಿದೆ. ಹೊರ ದೇಶ, ಹೊರ ಊರುಗಳಿಂದ ಬಂದವರು ಕನಿಷ್ಟ 15 ದಿವಸ ಸ್ವಯಂ ಗೃಹಬಂಧನ ವಿಧಿಸಿಕೊಳ್ಳಬೇಕು, ಸರ್ಕಾರ ಇಂಥ ಅಲೆಮಾರಿಗಳ ಮಾಹಿತಿ ಸಂಗ್ರಹಿಸಿ, ಅವರನ್ನು ಸಾರ್ವಜನಿಕರೊಂದಿಗೆ ಬೆರೆಯದಂತೆ ಕಟ್ಟುಪಾಡು ವಿಧಿಸಬೇಕು. ಆದರೆ ಬೇಜವಾಬ್ದಾರಿಯ ಆಡಳಿತಗಾರರಿಂದಾಗಿ ಈಗಲೂ ಜನ ಇವುಗಳ ಸೂಕ್ಷ್ಮಜ್ಞತೆ ಅರಿಯದೆ ವರ್ತಿಸುತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಜನ, ವಾಹನಗಳ ಓಡಾಟಕ್ಕೆ ನಿರ್ಬಧವಿಲ್ಲದಂತಾಗಿದೆ. ಯುಗಾದಿಯ ದೇವರ ಪೂಜೆ ಮಾಡಿದವರು, ಬಿಡುವಿನ ದಿನಗಳೆಂದು ಕ್ರಿಕೆಟ್ ಆಡಿದವರೊಂದಿಗೆ ಗ್ರಾಮೀಣ ಭಾರತದ ಜನತೆ ಈವರೆಗೂ ತಮ್ಮ ಓಡಾಟ, ಉಡಾಫೆ ನಿಲ್ಲಿಸಿಲ್ಲ.
ಸ್ಥಳಿಯ ಆಡಳಿತಗಳು ಜನರ ಚಲನವಲನ ಆಧರಿಸಿ ಜಾಗೃತಿಮಾಡುತಿದ್ದಾರಾದರೂ ಸಾರ್ವಜನಿಕರ ಉಡಾಫೆ, ಬೇಜವಾಬ್ದಾರಿ ಮಾರಣಾಂತಿಕ ಎನ್ನುವ ಎಚ್ಚರವೂ ಬಹುತೇಕರಿಗಿಲ್ಲ. ಕರೋನಾ ಇರಲಿ, ಪ್ರವಾಹ, ಬರ ಇನ್ನಿತರೇ ಪ್ರಕೃತಿ ನಿರ್ಮಿತ ಗಂಡಾಂತರಗಳ ಅವಧಿಯಲ್ಲಿ ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಬೇಕಾದದ್ದು ಅನಿವಾರ್ಯ, ಜೊತೆಗೆ ಆಳುವವರು ಹೆಚ್ಚು ಉತ್ತರದಾಯಿಗಳೂ, ಜವಾಬ್ದಾರರೂ ಆಗಿರಬೇಕು. ಆದರೆ ಅಂತರಾಷ್ಟ್ರೀಯ ವಿಮಾನ ಹಾರಾಟ ನಿಲ್ಲಿಸಲು ವಿಳಂಬ ಮಾಡಿದ ಕೇಂದ್ರ ಸರ್ಕಾರ, ದಿನಕ್ಕೆರಡು ಪ್ರಕಟಣೆಗಳು, ಆದೇಶಗಳಿಂದ ಗೊಂದಲಸೃಷ್ಟಿಸುತ್ತಿರುವ ಮುಖ್ಯಮಂತ್ರಿ ಮತ್ತು ರಾಜ್ಯಸರ್ಕಾರದ ಅಧಿಕಾರಿಗಳು, ಸಾರ್ವಜನಿಕರ ಹುಚ್ಚುತನಕ್ಕೆ ಪ್ರೋತ್ಸಾಹಿಸಿದಂತಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗೃಹಿಸದ ಮುಖ್ಯಮಂತ್ರಿ, ಸರ್ಕಾರ, ವ್ಯವಸ್ಥೆ ಎಲ್ಲವೂ ಸಾರ್ವಜನಿಕ ವ್ಯವಸ್ಥೆಗೆ ಆತಂಕವೆ.
ಈ ಎಲ್ಲಾ ಅವ್ಯವಸ್ಥೆಗಳ ಹಿನ್ನೆಲೆಯಲ್ಲಿ ಜನರ ಜೀವ ಉಳಿಸುವ ಕರ್ತವ್ಯದಿಂದ ಸರ್ಕಾರ ನುಣುಚಿಕೊಳ್ಳುವುದು ಅಕ್ಷಮ್ಯ. ಈಗಲೂ ಸಮಯ, ಮಿತಿ ಮೀರಿಲ್ಲ ಪ್ರಭುತ್ವ ಉತ್ತರದಾಯಿಯಾಗಿ, ಸಾರ್ವಜನಿಕರು ಜವಾಬ್ಧಾರಿಯಿಂದ ಎದುರಿಗಿರುವ ಗಂಡಾಂತರ ಎದುರಿಸದಿದ್ದರೆ ಆದ ಲೋಪ, ಹಾನಿ, ಸಾವು, ನೋವುಗಳ ಹೊಣೆ ಕೂಡಾ ಸರ್ಕಾರವೇ ಹೊರಬೇಕಾಗುತ್ತದೆ.
ವಿದೇಶ, ರಾಜಧಾನಿ, ಪರ ಊರುಗಳಿಂದ ವಲಸೆ,ಮರಳಿ ಬಂದ ಜನತೆ ಕೂಡಾ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಈಗಿನ ಅತಿಪ್ರಮುಖ ಕರ್ತವ್ಯ.

ಭಾರತಕ್ಕೆ ಗೃಹಬಂಧನ, 15 ಸಾವಿರ ಕೋಟಿ ಪ್ಯಾಕೇಜ್ ನಗಣ್ಯ
21 ದಿನಗಳ ವರೆಗೆ ಭಾರತದ ಪ್ರತಿಪ್ರಜೆಗೂ ಗೃಹಬಂಧನ ವಿಧಿಸಿರುವ ಪ್ರಧಾನಮಂತ್ರಿ ಮೋದಿ ಈ 21 ದಿವಸಗಳ ಅವಧಿಯಲ್ಲಿ ಕರೋನಾ ನಿಯಂತ್ರಣವಾಗದಿದ್ದರೆ ಈ ಸಮಯಮಿತಿ ವಿಸ್ತರಿಸುವ ಸುಳಿವನ್ನೂ ನೀಡುವ ಮೂಲಕ ಕರೋನಾ ನಿಯಂತ್ರಣಕ್ಕೆ ಮದ್ದು ಎಂದು ಬಣ್ಣಿಸಿದ್ದಾರೆ.
ಈ ಉಪಕ್ರಮದ ಬಗ್ಗೆ ಸ್ವಾಗತ ವ್ಯಕ್ತವಾಗಿದ್ದರೆ ಪ್ರಧಾನಿ ಮೋದಿ ಭಾರತದ 130 ಕೋಟಿ ಜನರಿಗೆ ಕರೋನಾ ಔಷಧೋಪಚಾರಕ್ಕಾಗಿ 15 ಸಾವಿರ ಕೋಟಿ ಘೋಶಿಸಿರುವುದರ ಬಗ್ಗೆ ವಿರೋಧ ವ್ಯಕ್ತವಾಗಿದೆ.
ಕಳೆದ ವಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದ ಕರೋನಾ ಪರಿಹಾರ ಪ್ಯಾಕೇಜ್ ಆಗಿ ಘೋಶಿರುವ 20 ಸಾವಿರ ಕೋಟಿ ಮುಂದೆ ಇದು ನಗಣ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಕರೋನಾ 2-3 ನೇ ಹಂತದಲ್ಲಿದ್ದು ಮುಂದಿನ ಮೂರುವಾರಗಳಲ್ಲಿ ಸಾಮಾಜಿಕ ಅಂತರ ಕೆಲಸಮಾಡಿದರೆ ಕರೋನಾ ಹಿಮ್ಮೆಟ್ಟಿಸುವ ಸಾಧ್ಯತೆ ನಿಚ್ಚಳವಾಗಿದೆ. ಆದರೆ ಭಾರತದಂಥ ಬೃಹತ್ ರಾಷ್ಟ್ರಕ್ಕೆ 15 ಸಾವಿರ ಕೋಟಿಗಳ ಕರೋನಾ ಪ್ಯಾಕೇಜ್ ಆನೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

2 Comments

  1. ಆಳುವವರ ಅಡ್ಹಾಕ್ ಮತ್ತು ಅಮೆಚೂರ್/ಇಮ್ಮೆಚೂರ್ ನಿರ್ಣಯಗಳ ಕಾರಣದಿಂದ ಸಮಸ್ಯೆಯ ಗಂಭೀರತೆ ಅರಿಯದೆ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಇದೇ ಗೊಂದಲ ಮುಂದುವರಿದಿದೆ. ಇದನ್ನು ನಿಮ್ಮ ಅಂಕಣ ಕರಾರುವಾಕ್ಕಾಗಿ ತಿಳಿಸಿದೆ. ಈಗಲಾದರೂ ಆಳುವವರು ಎಲ್ಲಾ ಸ್ಟೇಕ್ ಹೋಲ್ಡರ್ಸ್ ಅನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನಗಳಲ್ಲಿ ಪ್ರಬುದ್ಧತೆ ತೋರಲಿ.

Leave a Reply

Your email address will not be published. Required fields are marked *