

ಕರೋನಾ ಸೋಕಿನ ಭಯ, ಲಾಕ್‍ಔಟ್ ಹಿನ್ನೆಲೆಗಳಲ್ಲಿ ಕೃಷಿ,ಕೃಷಿ ಉತ್ಫನ್ನಗಳು, ಕೃಷಿ ಸಂಬಂಧಿ ಉದ್ಯಮಗಳು ಹಾನಿಗೊಳಗಾಗಿವೆ. ಮಲೆನಾಡು ಪ್ರದೇಶದಲ್ಲಿ ಬೆಳೆದ ಅನಾನಸ್, ಬಾಳೆ ಬೆಳೆಗಳನ್ನು ಕೇಳುವವರಿಲ್ಲದೆ ಇವುಗಳನ್ನು ಬೆಳೆದ ರೈತ ತಾವು ಬೆಳೆದ ಬೆಳೆ ತಮ್ಮ ಕಣ್ಮುಂದೇ ಹಾಳಾಗುತ್ತಿರುವುದನ್ನು ನೋಡುವಂತಾಗಿದೆ.
ಮಲೆನಾಡಿನ ಶಿರಸಿ, ಸಾಗರ,ಸಿದ್ಧಾಪುರ ಸೇರಿದಂತೆ ಹಲವೆಡೆ ರೈತರು ಬಾಳೆ, ಅನಾನಸ್ ಬೆಳೆದು ಜೀವನೋಪಾಯ ಕಂಡುಕೊಂಡಿದ್ದಾರೆ. ಆದರೆ ಈ ವರ್ಷ ಕರೋನಾ ಭಯ, ಲಾಕ್‍ಔಟ್ ಹಿನ್ನೆಲೆಗಳಲ್ಲಿ ರೈತರು ಬೆಳೆದ ಅನಾನಸ್, ಪಪ್ಪಾಯಿ, ಬಾಳೆ ಬೆಳೆಗಳನ್ನು ಯಾರೂ ಕೇಳುವವರಿಲ್ಲ ಎನ್ನುವಂತಾಗಿದೆ. ಅನಾನಸ್, ಬಾಳೆ, ಪಪ್ಪಾಯಿ ಬೆಳೆದ ರೈತರಿಗೆ ಕರೋನಾದಿಂದ ಮಾರುಕಟ್ಟೆ ಸಮಸ್ಯೆ ತಲೆದೋರಿದೆ. ಈ ಉತ್ಫನ್ನಗಳ ಸಂಸ್ಕರಣೆ ಮಾಡುವ ಸಣ್ಣ ಉದ್ಯಮಗಳೂ ಮುಚ್ಚಿರುವುದರಿಂದ ರೈತರಿಗೆ ತಮ್ಮ ಉತ್ಫನ್ನ ಖರೀದಿಯಾಗದೆ ಹಾನಿಯಾದರೆ, ಈ ಉತ್ಫನ್ನಗಳ ಸಂಸ್ಕರಣ ಘಟಕ ಮುಚ್ಚಿರುವುದರಿಂದ ಉದ್ಯಮಗಳಿಗೂ ಹಾನಿಯಾಗಿದೆ.
ಸಿದ್ಧಾಪುರದಲ್ಲಿ, ಬನವಾಸಿಯಲ್ಲಿ ನಡೆಯುತಿದ್ದ ಹಣ್ಣಿನ ಸಂಸ್ಕರಣ ಘಟಕಗಳು ಹಿಂದಿನ ವರ್ಷದ ವಿಪರೀತ ಮಳೆಗೆ ಹಾನಿ ಅನುಭವಿಸಿದ್ದರೆ, ಈ ವರ್ಷ ಕೋವಿಡ್ ಪರಿಣಾಮ ಬೆಳೆಗಳನ್ನು ಬೆಳೆದ ರೈತ ಮತ್ತು ಕೃಷಿ ಉತ್ಫನ್ನ ಸಂಸ್ಕರಣ ಘಟಕಗಳು ಹಾನಿ ಅನುಭವಿಸುವಂತಾಗಿದೆ.
ಈ ಬಗ್ಗೆ ಪ್ರತಿಕ್ರೀಯಿಸಿದ ಉದ್ಯಮಿ ವಿಜಯ ಪ್ರಭು ಇದೇ ತಿಂಗಳು ಪ್ರಾರಂಭವಾಗಿದ್ದ ನಮ್ಮ ಉದ್ದಿಮೆ ಈ ವಾರ ಮುಚ್ಚಿದೆ. ಕಳೆದ ವರ್ಷ ಮಳೆಯಿಂದ ಉತ್ಪಾದನೆ ನಿಲ್ಲಿಸಿದ ನಾವು ಈ ವರ್ಷ ಸರ್ಕಾರದ ಆದೇಶ, ಕರೋನಾ ಭಯಗಳ ಹಿನ್ನೆಲೆಯಲ್ಲಿ ಹಾನಿ ಅನುಭವಿಸುವಂತಾಗಿದೆ. ರೈತರ ಬೆಳೆ ಖರೀದಿ,ಸಂಸ್ಕರಣೆ ಹಿನ್ನೆಲೆಯಲ್ಲಿ ಸರ್ಕಾರ ಅನುಕೂಲ ಮಾಡಿಕೊಡಬೇಕು. ಮೂರುತಿಂಗಳ ಸಾಲ,ಬಡ್ಡಿ ತುಂಬುವ ಸಮಯಮಿತಿ ವಿಸ್ತರಣೆ ಸಣ್ಣ ಉದ್ದಿಮೆಗಳಿಗೆ ಹಾನಿ. ಎನ್ನುತ್ತಾರೆ.
ರೈತರ ಬೆಳೆ ಖರೀದಿ, ಸುರಕ್ಷತೆಯಲ್ಲಿ ಅವುಗಳ ಸಂಸ್ಕರಣೆಗೆ ಅವಕಾಶ ನೀಡಿದರೆ ರೈತರು, ಕೃಷಿ ಸಂಬಂಧಿ ಉತ್ಪಾದನೆಗಳಿಗೆ ಅನುಕೂಲವಾಗುತ್ತದೆ. ದೊಡ್ಡ ನಗರಗಳಿಗೆ ರಫ್ತಾಗುವ ಕೃಷಿ ಉತ್ಫನ್ನಗಳ ಸಾಗಾಟವನ್ನು ನಿಲ್ಲಿಸಲಾಗಿದೆ. ಸ್ಥಳಿಯ ಕೃಷಿ ಸಂಸ್ಕರಣ ಉದ್ದಿಮೆಗಳೂ ಸ್ಥಗಿತಗೊಂಡಿರುವುದರಿಂದ ರೈತರು, ಸಣ್ಣ ಉದ್ದಿಮೆಗಳಿಗೂ ಹಾನಿಯಾಗಿದೆ. ಇದು ಅನೇಕರ ಆರ್ಥಿಕ ಹಾನಿಗೂ ಕಾರಣವಾಗಿರುವುದು ಮುಂದಿನ ತೊಂದರೆಯ ಮನ್ಸೂಚನೆಯಂತಿದೆ.
ಕರೋನಾ: ಮೂರು ತಿಂಗಳು ನಿಲ್ಲೋಣಾ
ಕರೋನಾ ತೊಂದರೆ, ರಗಳೆಗಳ ಹಿನ್ನೆಲೆಯಲ್ಲಿ ಬ್ಯಾಂಕ್, ಸಹಕಾರಿ ಸಂಘ, ಹಣಕಾಸು ಸಂಸ್ಥೆಗಳಲ್ಲಿ ವ್ಯವಹರಿಸುವ ಜನರ ಸಾಲಮರುಪಾವತಿ,ಬಡ್ಡಿ ಆಕರಣೆಗಳಿಗೆಜೂನ್ 30 ರ ವರೆಗೆ ಕಾಲಾವಕಾಶ ವಿಸ್ತರಿಸಲು ಸರ್ಕಾರ ಆದೇಶಿಸಿದೆ. ಹಿಂದಿನ ನಿಯಮಗಳ ಪ್ರಕಾರ ಶೂನ್ಯ ಬಡ್ಡಿಸರದ ಬೆಳೆಸಾಲ, ರೈತರು,ಕೃಷಿ ಸಂಬಂಧಿ ವ್ಯವಹಾರಗಳ ಸಾಲ,ಬಡ್ಡಿ ಭರಣಕ್ಕೆ ಮಾ.30 ಅಂತಿಮ ಗಡುವಾಗಿತ್ತು. ಇಂದು ರಾಜ್ಯ ವಿಧಾನಸಭೆಯ ನಿರ್ಣಯದಂತೆ ಈ ಎಲ್ಲಾ ವ್ಯಹಾರಗಳಿಗೆ ಜೂನ್ 30 ರ ವರೆಗೆ ಸಮಯಮಿತಿ ವಿಸ್ತರಿಸಲಾಗಿದೆ. ಈ ಮೂರು ತಿಂಗಳ ಅವಧಿಯ ಸರ್ಕಾರದ ಅನುಕೂಲ, ರಿಯಾಯತಿ, ಸಬ್ಸಿಡಿ ಸೌಲಭ್ಯಗಳನ್ನು ಮುಂದಿನ ಮೂರು ತಿಂಗಳವೆರೆಗೆ ವಿಸ್ತರಿಸಲಾಗಿದೆ. ಇದರ ಜೊತೆಗೇ ಬ್ಯಾಂಕ್, ಹಣಕಾಸು ಸಂಸ್ಥೆಗಳ ವೈಯಕ್ತಿಕ ವ್ಯವಹಾರದ ಇಎಂ.ಐ. ಗಳನ್ನು ಜೂನ್ ವರೆಗೆ ಕಾಲಾವಕಾಶ ನೀಡಿ ಭರಣ ಮಾಡಿಕೊಳ್ಳಲು ಸರ್ಕಾರ ನಿರ್ಧೇಶಿಸಿ ಪ್ರಕಟಣೆ ಹೊರಡಿಸಿದೆ.
ಕೋಮುವಾದಿ ಮೋದಿ,ಮತ್ತು
ಎಳಸು ರಾಹುಲ್ (6 ವರ್ಷಗಳ ಹಿಂದೆ ಬರೆದ ಲೇಖನ)
ಗುಜರಾತ್‍ನ ಮೋದಿ ಸಮಾಜವಾದಿ, ಜಾತ್ಯಾತೀತ ಭಾರತದ ಪ್ರಧಾನಿಯಾಗಿದ್ದಾರೆ.
ಮೋದಿ ಆರ್.ಎಸ್.ಎಸ್.ನ ಕಟ್ಟಾ ಕಾರ್ಯಕರ್ತರಾಗಿದ್ದವರು. ಗುಜರಾತ್‍ನಲ್ಲಿ ಸ್ನೇಹಿತರು, ವಿರೋಧಿಗಳೆನ್ನದೆ ತನ್ನೊಡನೆ ಭಿನ್ನಾಭಿಪ್ರಾಯ ಹೊಂದಿದವರನ್ನು ಹಿಂದೆ-ಮುಂದೆ ನೋಡದೆತೆರೆಮರೆಗೆ ಸರಿಸಿದವರು.
ಮೋದಿ ಮಹಾನ್ ದೇಶಪ್ರೇಮಿ ಎಂದು ಮಾಧ್ಯಮಗಳು ಟಾಂ. ಟಾಂ. ಹೊಡೆದವು, ಹಾಗಾದರೆ, ಮೋದಿ ಹೇಗೆ ದೇಶಪ್ರೇಮಿ ಎಂಬುದನ್ನು ತೋರಿಸಿಲ್ಲ. ಸದಾ ಶ್ರೀಮಂತರು, ಪಟ್ಟಭದ್ರರು, ಜಾತಿವಾದಿಗಳು, ಧರ್ಮಾಂಧರ ಪರವಾಗಿ ಭಟ್ಟಂಗಿತನ ಮಾಡುತ್ತಾ ಸರಳ-ಸಜ್ಜನ, ಸಮಾಜವಾದಿ ಜಾತ್ಯಾತೀತರನ್ನು ದುಷ್ಟರೆಂಬಂತೆ ಬಿಂಬಿಸುತ್ತಾ ಶ್ರೀರಾಮನಂಥ ಬ್ರಾಹ್ಮಣ ಗುಲಾಮರನ್ನು ಬೆಂಬಲಿಸಿ ಪ್ರೋತ್ಸಾಹಿಸುವ ಹಿಂದೂ ಕೋಮುವಾದಿ ಆರ್.ಎಸ್. ಎಸ್.ಉಗ್ರರ ಸಂಘಟನೆಯಲ್ಲಿದ್ದ ಕಾರಣಕ್ಕೆ ಮೋದಿ ದೇಶಪ್ರೇಮಿಯಾಗಲು ಹೇಗೆ ಸಾಧ್ಯ?



