ಜುಗಾರಿಕ್ರಾಸ್ ಮತ್ತು ಕೋರೋನ

 ಜುಗಾರಿಕ್ರಾಸ್ ……ಮೈಮನಗಳನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಂಡು ತನ್ನನ್ನು ತಾನೇ ಓದಿಸಿಕೊಂಡು ಹೋಗುವಂತ ಕಾದಂಬರಿ .ಅದರಲ್ಲೂ ಮಧ್ಯರಾತ್ರಿಯ ನೀರವತೆಯಲ್ಲಿ ಜುಗಾರಿಕ್ರಾಸ್ನ್ ಕೌತುಕದೊಳಗೆ ನುಸುಳುವುದು ನಿಜಕ್ಕೂ ಮೈ ಜುಮ್ಮೇನಿಸುವ ಅನುಭವ.

ಯಾವುದೇ ಪಾತ್ರವನ್ನು ,ಘಟನೆಯನ್ನು,ಸನ್ನಿವೇಶವನ್ನು,ಅತ್ಯಾಕರ್ಷಕ ವಾಗಿ ರೋಚಕವಾಗಿ ನಮ್ಮ ಮನ ಮುಟ್ಟುವಂತೆ , ನಮ್ಮದೇ ಅನುಭವವೇ ಎನ್ನುವಂತೆ ಕಟ್ಟಿಕೊಡುವುದು  ಬಹುಶಃ ತೇಜಸ್ವಿಯವರಂತ ಮಹಾನ್ ಚೇತನದಿಂದ ಮಾತ್ರ ಸಾಧ್ಯ ಎನಿಸುತ್ತದೆ.
ಫಾರೆಸ್ಟರ್ ನ  ಲಂಚಗುಳಿತನ ಹೂ ಮಾರುವ ಹುಡುಗಿಯ ಸಹಜ ಮುಗ್ಧತೆ , ಸಮಾಜದ ಕ್ರೌರ್ಯ ,ಸುರೇಶ ಮತ್ತು ಗೌರಿಯ ಹುಚ್ಚು ಮನಸ್ಥಿತಿಗಳು ,ಶಾಸ್ತ್ರಿ, ಕುಟ್ಟಿ ,ದೌಲತ್ ರಾಮ್ ನಂತ ಕಳ್ಳರು , ರಾಜಪ್ಪನಂತ ಸ್ನೇಹಿತ , ಕುಂಟರಾಂ ಮತ್ತು  ಶೇಷಪ್ಪ ನಂತಹ    ಆಪದ್ಬಾಂದವರು, ಕ್ರಾಂತಿಕಾರಿ ಗಂಗೂಲಿ ಇನ್ನಿತರರ ಜೊತೆ ,ಗುರುರಾಜ ಕವಿಯ ದ್ವಿಮುಖ ಸಂಧಾನ ಕಾವ್ಯದೊಳಗೆ  ಕಳೆದುಹೋದ ಆ ರತ್ನಮೂಲ ಪದದಂತೆ    ನಾವೂ ಸಹ ಜುಗಾರಿಕ್ರಾ ಸ್ ನ   ಮಾಯಾಬಜಾರ್ ನಲ್ಲಿ ಕಳೆದು ಹೋಗಿಬಿಡುತ್ತೇವೆ. 
ಗೌರಿ ಮತ್ತು ಸುರೇಶ ಜುಗಾರಿ ಕ್ರಾಸ್ ನ ಕುತೂಹಲಕ್ಕೆ ಸಿಕ್ಕಂತೆ ನಾವು ನೀವುಗಳು ಸಹ ಇಂದು corona ಎಂಬ ಮಹಾಮಾರಿ ಕುತೂಹಲಕ್ಕೆ ಬಲಿಯಾಗುತಿದ್ದೇವೆ . ಕುಟ್ಟಿ ದೌಲಟ್ ರಾಮ್ ನಂತೆ ಹೊರದೇಶದಿಂದ ಬಂದವರು ನಮ್ಮನ್ನು ಆ ಸರಪಳಿಯೊಳಗೆ ನಮಗೇ ಅರಿವಿಲ್ಲದಂತೆ ಸಿಲುಕಿಸಿ ಬಿಟ್ಟಿದ್ದಾರೆ. corona ಎಂಬ ಸುಪಾರಿ ಕಿಲ್ಲರ್ ಯಾಮಾರಿಸಿಇಲ್ಲಿ ನಮಗೆ ನೆರವಾಗಲು ಯಾವ ಕುಂಟರಾಮ ಯಾವ ಶೇಷಪ್ಪ ನು ಬರಲಾರ.
ಗೌರಿ ಮತ್ತು ಸುರೇಶ ಚಲಿಸುತ್ತಿರುವ ರೈಲಿನಿಂದ ಸುರಂಗದೊಳಗೆ ನೆಗೆದು ಜೀವ ಉಳಿಸಿ ಕೊಂಡಂತೆ ಇಂದು ನಾವು ಚಲಿಸುತ್ತಿರುವ ಬದುಕಿನಿಂದ ಮನೆಯೊಳಗೆ ನೆಗೆದು ಜೀವ ಉಳಿಸಿ ಕೊಳ್ಳಬೇಕಿದೆ. ಸುರೇಶ ತನ್ನ ಉಳಿವಿಗಾಗಿ ತನ್ನ ಸ್ನೇಹಿತ ರಾಜಪ್ಪನನ್ನು ಅನುಮಾನಿಸುವಂತೆ  ಈ corona ದೆಸೆಯಿಂದ ನಾವಿಂದು ನೆಂಟರನ್ನು ಸ್ನೇಹಿತರನ್ನು ಅನುಮಾನಿಸಿ ದೂರ ಉಳಿಯ ಬೇಕಿದೆ .ಹಣ ಐಶಾರಾಮ್ಯದ ಅಮಲಿಂದೆ   ಓಡುತಿದ್ದ ನಮಗೆ corona ದಂತ ಕಿಲ್ಲರ್ಗಳು ಬೆನ್ನತ್ತಿ ಅವುಗಳ ಬಗ್ಗೆ ಇದ್ದ ವ್ಯಾಮೋಹವನ್ನು ಒದ್ದೋಡಿಸಿ ಬಿಟ್ಟಿವೆ . ಗೌರಿ ಮತ್ತು ಸುರೇಶನಂತೆ ಈ ಎಲ್ಲಾ ಗೊಂದಲಗಳಿಂದ ಹೊರಬಂದು ಜೀವ ಉಳಿದರೆ ಸಾಕು ಎನ್ನುವಂತಾಗಿದೆ.
ಸುರೇಶ ಮತ್ತು ಗೌರಿ ತಮಗೆ ತಿಳಿಯದೆ ಮಾದಕ ಪದಾರ್ಥ ಸಾಗಿಸಿದಂತೆ ಇಂದು ಎಷ್ಟೋ ಮಂದಿ ತಮಗೆ ಅರಿವಿಲ್ಲದೆ corona ವೈರಸ್ ಸಾಗಿಸುತ್ತಿದ್ದಾರೆ.ತಿಳಿದೋ ತಿಳಿಯದೆಯೋ  ದೇವಮ್ಮ ನ ಗಂಡನಂತೆ , ಕುಂಟಾರಾಮ ನಂತೆ corona ಎಂಬ ಕೆಂಪು ಹರಳ ಮೋಹಕ್ಕೆ ಸಿಲುಕಿ ಕಣ್ಮರೆ ಯಾಗುತಿದ್ದಾರೆ.ಮೇದರಹಳ್ಳಿಯ ಬಿದಿರು ತೆನೆಗಟ್ಟಿ ನಾಶವಾಗಿದ್ದು ಸ್ವಾಭಾವಿಕವಾದರೆ ಇಂದುನಾವು ನಮ್ಮ ಅರಿವುಗೇಡಿತನದಿಂದ ನಾಶವಾಗುವ ಹಂತ ತಲುಪಿದ್ದೇವೆ. ಬಿದಿರಿನ ಕೆಳಗೆ ಉದುರಿ ಬಿದ್ದಿದ್ದು ರಾಶಿ ರಾಶಿ ತೆನೆಯಷ್ಟೆ ಆದರೆ ಶೇಶಪ್ಪನ ಕನ್ನಡಿಯಲ್ಲೇಕೊ ರಾಶಿ ರಾಶಿ ಹೆಣಗಳು ಕಾಣುತ್ತಿವೆ .ಯಾವುದೋ ವಂಚನೆಯ ವ್ಯೂಹದೊಳಗೆ ಸಿಲುಕಿ ಬಿಟ್ಟಂತೆ ಮನಸು ಕಸಿವಿಸಿ ಗೊಳ್ಳುತ್ತಿದೆ . ನಮ್ಮ ಎಚ್ಚರ ದಲ್ಲಿ ನಾವಿರೋಣ .ಈ ಬದುಕೆಂಬ ಜುಗಾರಿ ಕ್ರಾಸ್ ನಲ್ಲಿ ನಮ್ಮ ಜೀವವೆಂಬ  ಏಲಕ್ಕಿಗೂ  ಒಳ್ಳೆಯ ಬೆಲೆ ಸಿಗಲಿ ಹಾಗೂ ಯಾವ ಕುತಂತ್ರವೂ ಇರದೆ ನಮ್ಮ ದುಡಿಮೆ ನಮ್ಮ ಕೈ ಸೇರಲಿ …..ಕ್ಯಾಪ್ಟನ್ ಖುದ್ದುಸನ ಘಾಟಿ  ಎಕ್ಸ್ ಪ್ರೆಸ್ ನಮಗಾಗಿ ಕಾದಿರುತ್ತದೆ.
-ಮನು ಪುರ

ಹಂಬಲ
ನಾ ಸುರಿವ ಮಳೆಯಾಗಿದ್ದರೆಮುಗಿಲಿನಿಂದ ಬೀಳುವಾಗಎದೆಯ ತಟ್ಟಿ, ಹೆಮ್ಮೆಯಿಂದಕೂಗಿ ಹೇಳುತಿದ್ದೆ ,ನನಗೆ ಯಾವುದೇ ಜಾತಿ ಇಲ್ಲವೆಂದು !
ನಾ ಹರಿವ ನೀರಾಗಿದ್ದರೆ,ಉಚ್ಚರ ,ಶ್ವಪಚರ ಮೈಯ್ಯಉಜ್ಜಿ ಉಜ್ಜಿ ತೊಳೆದು,ಇಬ್ಬರ ಕೊಳೆಯ ಜಗಕೆ ತೋರಿ ಸಾಬೀತು ಮಾಡುತಿದ್ದೆಶ್ರೇಷ್ಟತೆಯು  ಹಸಿ ಸುಳ್ಳೆಂದು !
ನಾ ಬೀಸುವ ಗಾಳಿಯಾಗಿದ್ದರೆಉಸಿರಾಡುವಾಗಲಾದರುಒಮ್ಮೆ ಬೆದರಿಕೆಯೊಡ್ಡಿ !ಮನದಟ್ಟು ಮಾಡಿಬಿಡುತಿದ್ದೆ.ಮಾನವತೆಗು  ಮಿಗಿಲಾದ ಯಾವುದೆ “ಧರ್ಮ”ವಿಲ್ಲವೆಂದು!
ನಾ ಸುಡುವ ಬೆಂಕಿಯಾಗಿದ್ದರೆಕಲಿಯುಗದ  ಮುಸುಡಿಗೆಕಪ್ಪುಮಸಿಯಂತಂಟಿರುವಲಿಂಗ ಭೇದದ ಮುಸುಕಹಾಗೆ ಕಿತ್ತರವಿ ಬಿಡುತಿದ್ದೆ ಸುಟ್ಟು ಬೂದಿ ಮಾಡಲೆಂದು 
ನಾ ಉರಿವ ದೀಪವಾಗಿದ್ದರೆಒಮ್ಮೆಯೂ ಆರದೆಎಲ್ಲರ ಎದೆಯೊಳಗೆ ಪ್ರಕಾಶ ಮಾನವಾಗಿಉರಿದುಬಿಡುತಿದ್ದೆಪ್ರೀತಿಯ ಬೆಳಕ ಶಾಶ್ವತವಾಗಿ ಹಂಚಲೆಂದು 
ನಾ ಅಳುವ ಮಗುವಾಗಿದ್ದರೆಬೆಳವಣಿಗೆಯ ದಿಕ್ಕರಿಸಿಜೋರಾಗಿ ಅಳುತ ಖುಷಿಯ ಪಡುತತಾಯ್ಮಡಿಲಲಿ ಬೆಚ್ಚನೆ ಮಲಗಿಬಿಡುತಿದ್ದೆ ಮಲಿನವಾಗದೆಮಗುವಾಗಿಯೆ ಉಳಿಯಲೆಂದು ಮೊದಲು ಮನುಜನಾಗಲೆಂದು

-ಮನು ಪುರ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *