

ಸರ್ಕಾರಿ ನೌಕರರು ವಿಶೇಶವಾಗಿ ಆರೋಗ್ಯ,ಕಂದಾಯ ಮತ್ತು ಪೊಲೀಸ್ ಇಲಾಖೆಯ ನೌಕರರ ಮಹತ್ವ,ಪ್ರಾಮುಖ್ಯತೆ ಈಗ ಸಮಾಜದ ಗಮನಕ್ಕೆ ಬರುತ್ತಿದೆ. ಪೊಲೀಸರಿಗೆ ಅಧಿಕಾರ ಕೊಟ್ಟರೆ ಏನು ಮಾಡಬಲ್ಲರು ಎನ್ನುವುದಕ್ಕೂ ಈಗಲೇ ಸಾಕ್ಷಿಗಳೂ ಸಿಗುತ್ತಿವೆ. ಪೊಲೀಸ್ ಕ್ರೌರ್ಯ, ಮತಾಂಧರ ಮಂಗಾಟವನ್ನು ಮೀರಿಸುವಂಥದ್ದು ಎನ್ನುವ ಟೀಕೆಗಳೂ ವ್ಯಕ್ತವಾಗುತ್ತಿವೆ.
ಈ ಸಂದರ್ಭದಲ್ಲಿ ಸಮಾಜ,ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸಮಾಡುವ ಪೊಲೀಸರಲ್ಲಿ ಸ್ವಯಂ ಜಾಗೃತಿಯ ಮೂಲಕ ಮಾದರಿಯಾದ ಹೊನ್ನಾವರದ ಪಿ.ಎಸ್.ಐ. ಶಶಿಕುಮಾರ ಒಂದು ಉತ್ತಮ ಮಾದರಿಯಾಗಿದ್ದಾರೆ. ಎರಡು ಜನ ಮಕ್ಕಳು, ಕುಟುಂಬದ ಶಶಿಕುಮಾರ ಕುಟುಂಬದಿಂದ ದೂರ ಉಳಿದು ವಸತಿಗೃಹದಲ್ಲೇ ವಾಸ್ತವ್ಯಮಾಡಿ ಕುಟುಂಬವನ್ನು ದೂರದಿಂದ ನೋಡುತ್ತಾ ಕೊರೋನಾ ವಿಸ್ತರಣೆಗೆ ತಡೆ ಒಡ್ಡುತ್ತಿರುವುದು ಪೊಲೀಸರು ಅನುಸರಿಸಬಹುದಾದ ಮಾದರಿಯಾಗಿದೆ.
ಇದೇ ಮಾದರಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೂ ಅನುಸರಣಾಯೋಗ್ಯ. ಪೊಲೀಸರ ಪಿತ್ತ ನೆತ್ತಿಗೇರಿರುವ ವಿದ್ಯಮಾನಗಳ ನಡುವೆ ಪೊಲೀಸರಿಗೆ ಸಂಯಮ, ವಿಶ್ರಾಂತಿ, ಸಾರ್ವಜನಿಕ ವಿಶ್ವಾಸದ ಪ್ರಾಮುಖ್ಯತೆಯನ್ನು ಪೊಲೀಸ್ ಮಹಾನಿರ್ಧೇಶಕರೇ ಹೇಳಿದ ಮೇಲೂ ಪೊಲೀಸರು ಜನರನ್ನು ಹೊಡೆಯುತ್ತಿರುವುದು ಯಾರೂ ಸಮರ್ಥಿಸುವ ಕೆಲಸವಲ್ಲ.
ಶಿರಸಿ ವಿದ್ಯಾರ್ಥಿನಿಯೊಬ್ಬಳು ವಿದೇಶದಿಂದ ಭಾರತಕ್ಕೆ ಬರದೆ ದೇಶಪ್ರೇಮ ಮೆರೆದ ರೀತಿ ಭಾರತದಿಂದ ಹೊರಗಿದ್ದು, ಹೊರನಡೆದು,ಹೊರಗೇ ಇರುವ ಕೆಲವು ಕಾಲ ಸ್ವದೇಶಕ್ಕೆ ಮರಳದಿದ್ದರೆ ನಮ್ಮ ಭಾರತ ಕರೋನಾ ಮುಕ್ತವಾಗಿರುವ ಅವಕಾಶವಿತ್ತು. ಇದು ಈಗಲೂ ಹೊರದೇಶದಲ್ಲಿರುವ ಭಾರತೀಯರಿಗೆ ಅನುಸರಣಾಯೊಗ್ಯ ಮಾದರಿಯೆ. ಇದರ ಮಧ್ಯೆ ಮನೆಮನೆಗೆ ಅಗತ್ಯ ಸಾಮಗ್ರಿ, ಆರೊಗ್ಯ ತಪಾಸಣೆ ಒದಗಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಮಾದರಿ ದೇಶಕ್ಕೆ ಸದಾ ಅನುಕರಣಾಯೊಗ್ಯ.
ಈ ಎಲ್ಲಾ ರಗಳೆಗಳ ನಡುವೆ ಭಾತರದ ಮೂಲನಿವಾಸಿಗಳ ಮಾಂಸಾಹಾರ ಪದ್ಧತಿಯನ್ನು ಲೇವಡಿಮಾಡುವ ವಿದೇಶಿ ವೈದಿಕ ವಿಕೃತಿ ವೈದಿಕ ಕರೋನಾ ವಾಗಿ ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದೆ. ಸಸ್ಯಹಾರಿಗಳ ಅಗತ್ಯ ಪೂರೈಸಿದಂತೆ ಮಾಂಸಾಹಾರಿಗಳ ಮೀನು, ಮಾಂಸ, ಮೊಟ್ಟೆ, ಒಣಮೀನುಗಳ ಪೂರೈಕೆಗೂ ಜಿಲ್ಲಾಡಳಿತ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಉತ್ತರಕನ್ನಡ ಜಿಲ್ಲೆಯ ಬಹುಸಂಖ್ಯಾತರದ್ದಾಗಿದೆ. ಆದರೆ ಉಳ್ಳವರ ಭಟ್ಟಂಗಿತನ ಮಾಡುತ್ತಾ, ಉತ್ತರಕನ್ನಡ ಶಾಂತ-ಸುವ್ಯವಸ್ಥಿತ,ಸಂಮೃದ್ಧ ಎನ್ನುವ ಪರದೇಶಿ ವೈದಿಕ ವೈರಸ್ ಗಳು ಬೆಂಗಳೂರಿನಲ್ಲಿ ಮಾಂಸ ಖರೀದಿಸುವವರ ಮೇಲೆ ಉರಿದುಕೊಂಡಿರುವುದು ಅವರ ಭಾರತೀಯ ಮೂಲನಿವಾಸಿ ಶೂದ್ರವಿರೋಧದ ಅವಿವೇಕಕ್ಕೆ ಸಾಕ್ಷಿ. ಇವರ ಪರಿವಾರದ ವ್ಯಭಿಚಾರಿ ಸ್ವಾಮಿಯೊಬ್ಬ ಅವರ
ಪರಂಪರೆ ಮಡಿ ಸಮರ್ಥಿಸಿ ಭಾರತದ ಬುಸಂಖ್ಯಾತ ಮೂಲನಿವಾಸಿಗಳ ಪಾಲಿಗೆ ‘ಮಡಿ, ದಿರುವುದು ಅವರ ಅಸಹ್ಯಕರ ರೀತಿ-ನೀತಿಗಳಿಗೆ ದೃಷ್ಟಾಂತ ಒದಗಿಸಿದಂತಾಗಿದೆ.. ಇಂಥ ವಿವೇಕ ಶೂನ್ಯರು ಹಿಂದೂ, ಹಿಂದುತ್ವದ ಹೆಸರಲ್ಲಿ ತಮ್ಮ ವೈದಿಕ ಅಸಹ್ಯವನ್ನು ಪ್ರತಿಪಾದಿಸುವುದು ಇವರ ರೋಗಿಷ್ಟ ಗುಳ್ಳೆನರಿ ಅವಿವೇಕತನಕ್ಕೆ ಸಾಕ್ಷಿ.
ಕರೋನಾ ಹೆಸರಲ್ಲೂ ಮೆರೆಯುತ್ತಿರುವ ವೈದಿಕ ವಿಕೃತಿ ಉತ್ತರಕನ್ನಡ ಸೇರಿದ ಭವ್ಯಭಾರತದ ಶಾಪ, ಪಾಪ ಎನ್ನುವ ಪ್ರತಿಕ್ರೀಯೆ ವ್ಯಕ್ತವಾಗುತ್ತಿರುವುದು ಉತ್ತಮ ಬೆಳವಣಿಗೆ. ಇದೇ ವೈದಿಕ ವೈರಸ್ ಮಂತ್ರ, ಹೋಮ, ಹವನ, ಪೂಜೆಗಳ ಮೂಲಕ ಕರೋನಾ ಹೋಗಲಾಡಿಸುವ ! ಲಾಗಾಯ್ತಿನ ಕಪಟ ನಾಟಕ ಮಾಡುತ್ತಿರುವುದು ವೈದಿಕ ಅವಿವೇಕ, ಅನಾಚಾರ, ಬೂಟಾಟಕೆಗಳಿಗೆ ಸಾಕ್ಷಿಯಾಗಿದೆ. ಅಂದಹಾಗೆ ಈ ಸಮಾಜವಿರೋಧಿ, ಆಶಾಡಭೂತಿ ವೈದಿಕ ಕೃಪಣರ ಸಂಖ್ಯೆ ಪ್ರತಿಶತ 5 ಅಲ್ಲ ಎನ್ನುವುದು ಭಾರತದ ಸೌಂದರ್ಯ. ಸೊಗಸು.



