covid19- todays special ಕರೋನಾ ಇಂದಿನ ವಿಶೇಷ- ಕೋವಿಡ್ ಲಕ್ಷಣಗಳಿಲ್ಲದವರಲ್ಲೂ ಕರೋನಾ ಪತ್ತೆ!


ಸಹಜ ತಿಳುವಳಿಕೆಯಂತೆ ಜ್ವರ, ನೆಗಡಿ ಇತ್ಯಾದಿ ಸಾಮಾನ್ಯ ಅನಾರೋಗ್ಯದ ಲಕ್ಷಣಗಳೂ ಇಲ್ಲದ ವ್ಯಕ್ತಿಗಳಲ್ಲಿ ಕರೋನಾ ಪತ್ತೆಯಾಗಿರುವ ಪ್ರಕರಣಗಳು ಇಂದು ಕೇರಳದಲ್ಲಿ ಪತ್ತೆಯಾಗಿವೆ.
ಒಬ್ಬಳು ಯುವತಿ ಮತ್ತು ವೃದ್ಧರೊಬ್ಬರು ಇತ್ತೀಚಿನ ತಮ್ಮ ಪ್ರವಾಸದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಕಾರಂಟೈನ್ ಆಗಿದ್ದರು. ಇವರ ಕಾರಂಟೈನ್ ಅವಧಿಯ 14-28 ದಿವಸಗಳ ಮಧ್ಯೆ ಈ ಇಬ್ಬರಿಗೂ ಜ್ವರ, ನೆಗಡಿ, ಗಂಟಲುಕೆರೆತ ಇತ್ಯಾದಿ ಕರೋನಾ ರೋಗ ಲಕ್ಷಣಗಳು ಕಾಣಲಿಲ್ಲ! ಅದರೆ ಕೋವಿಡ್ ಪರೀಕ್ಷೆಯಲ್ಲಿ ಈ ಇಬ್ಬರಿಗೂ ಕರೋನಾ ಪಾಸಿಟಿವ್ ವರದಿ ಬಂದಿದೆ.
ಈ ಬಗ್ಗೆ ಕೇರಳ ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದು ಕರೋನಾ ಸಹಜ ಲಕ್ಷಣಗಳು ಇಲ್ಲದ ವ್ಯಕ್ತಿಗಳಲ್ಲೂ ಕರೋನಾ ಸೋಂಕು ಇರಬಹುದು ಎನ್ನುವುದಕ್ಕೆ ಈ ಪ್ರಕರಣಗಳು ಉದಾಹರಣೆ ಹಾಗಾಗಿ ಜನರು ತಮ್ಮ ಆರೋಗ್ಯ, ಸಹಜತೆ ಬಗ್ಗೆ ಪರೀಕ್ಷೆಗೊಳಪಡಬೇಕಾದ ಅಗತ್ಯವಿದೆ ಎಂದಿದ್ದಾರೆ.

ದೇಶ,ರಾಜ್ಯದಲ್ಲಿ ಕರೋನಾ ಸೋಂಕು ವಿಸ್ತರಣೆ, ಉತ್ತರ ಕನ್ನಡದಲ್ಲಿ ನಿಯಂತ್ರಣ,ಸೇವಾ ಕಾರ್ಯ ಮುಂದುವರಿಕೆ

ವಿಶ್ವದಾದ್ಯಂತ ಕರೋನಾ ತನ್ನ ಅಟ್ಟಹಾಸ ಮೆರೆಯುತ್ತಿರುವಂತೆ ಭಾರತದಲ್ಲೂ ದಿನದಿಂದ ದಿನಕ್ಕೆ ಕೋವಿಡ್ -19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ದೇಶದ ಕೆಲವು ರಾಜ್ಯಗಳು, ರಾಜ್ಯದ ಕೆಲವು ಜಿಲ್ಲೆಗಳು ಕರೋನಾ ಮುಕ್ತವಾಗಿದ್ದರೂ ಬಹುತೇಕ ಹೆಚ್ಚು ಜಿಲ್ಲೆ,ರಾಜ್ಯಗಳಲ್ಲಿ ಕೋವಿಡ್ ರುದ್ರನರ್ತನ ನಡೆಯುತ್ತಿದೆ. ಈ ಅಪಾಯದ ಸ್ಥಿತಿಯಲ್ಲಿ ರಾಜ್ಯದಲ್ಲಿ ಕರೋನಾ ಸೋಂಕಿತ
ಟಾಪ್ 5 ಜಿಲ್ಲೆಗಳಲ್ಲಿ ಒಂದಾಗಿದ್ದ ಉತ್ತರಕನ್ನಡದಲ್ಲಿ 8 ಜನ ಕರೋನಾ ಸೋಂಕಿತರಲ್ಲಿ 2 ಜನರು ಸಂಪೂರ್ಣ ಗುಣಮುಖರಾಗುವ ಮೂಲಕ ಮನೆಗೆ ಮರಳಿದ್ದಾರೆ.
ಹೊರದೇಶಗಳಿಂದ ಮಂಗಳೂರು, ಭಟ್ಕಳಕ್ಕೆ ಬಂದು ಚಿಕಿತ್ಸೆ ಪಡೆದಿದ್ದ ಉತ್ತರಕನ್ನಡ ಜಿಲ್ಲೆಯ ಒಟ್ಟೂ 8 ಜನರಲ್ಲಿ ಎರಡು ಜನರು ಗುಣಮುಖರಾಗಿರುವುದು ಜಿಲ್ಲೆಯ ಜನರ ನಿರಾಳಕ್ಕೆ ಕಾರಣವಾಗಿದೆ. ಜಿಲ್ಲೆಯ ಭಟ್ಕಳ ಬಿಟ್ಟರೆ ಬೇರೆ ತಾಲೂಕುಗಳಲ್ಲಿ ಕೋವಿಡ್ ಸೋಂಕಿತರಿರದಿರುವುದು ಸಮಾಧಾನಕ್ಕೆ ಕಾರಣವಾಗಿದೆ. ಆದರೆ ಜಿಲ್ಲೆಯಾದ್ಯಂತ ನಡೆಯುತ್ತಿರುವ ಲಾಕ್‍ಡೌನ್ ಜನರ ನೆಮ್ಮದಿ ಕಸಿದಿದೆ. ಸಿದ್ಧಾಪುರ ತಾಲೂಕಿನಲ್ಲಿ ಭಯಹುಟ್ಟಿಸಿದ್ದ ಮಂಗನಕಾಯಿಲೆ ಕೂಡಾ ನಿಧಾನವಾಗಿ ನಿಯಂತ್ರಣಕ್ಕೆ ಬಂದಿದ್ದು ಕರೋನಾ, ಮಂಗನಕಾಯಿಲೆಯಿಂದ ಭಯಭೀತರಾದ ಸ್ಥಳಿಯರು ನಿಟ್ಟುಸಿರು ಬಿಡುವಂತಾಗಿದೆ.
ಈ ಸ್ಥಿತಿಯ ನಡುವೆ ಜನರು, ಸಂಘ ಸಂಸ್ಥೆಗಳು, ಪಕ್ಷಗಳ ಸೇವಾ ಕಾರ್ಯ ಮುಂದುವರಿದಿದೆ. ಜಿಲ್ಲೆಯ ಕಾಂಗ್ರೆಸ್ ಸಮೀತಿ ಜಿಲ್ಲೆಯ ಎಲ್ಲಾ ಬ್ಲಾಕ್ ಗಳಿಗೆ ಆಯಾ ತಾಲೂಕುಗಳಲ್ಲಿ ಸೇವೆಯಲ್ಲಿರುವ ಸಿಬ್ಬಂದಿಗಳಿಗೆ ಆಹಾರಕಿಟ್ ವಿತರಿಸಿದೆ.
ಶಿರಸಿಯಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮೀತಿ ಕಛೇರಿಯಲ್ಲಿ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ, ಕೋವಿಡ್ ಟಾಸ್ಕ್ ಫೋರ್ಸ್ ಜಿಲ್ಲಾ ಉಸ್ತುವಾರಿ ಸತೀಶ್ ಶೈಲ್ ಎಲ್ಲಾ ತಾಲೂಕಾ ಅಧ್ಯಕ್ಷರಿಗೆ ಕಿಟ್ ವಿತರಿಸಿದರು.
ತಾಲೂಕಾ ಕಾಂಗ್ರೆಸ್ ಘಟಕದಿಂದ ಸಿದ್ದಾಪುರದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಕಿಟ್ ವಿತರಿಸಲಾಯಿತು. ಮುಖ್ಯಮಂತ್ರಿಗಳ ಕೋವಿಡ್19 ಪರಿಹಾರ ನಿಧಿಗೆ ಸಿದ್ದಾಪುರದ ಉದ್ಯಮಿ ಹಾಲಪ್ಪ ಗೌಡರ್ 5ಸಾವಿರ ಧನ ಸಹಾಯ ನೀಡಿದರು.
ಪೊಲೀಸ್ ಸಿಬ್ಬಂದಿಗಳಿಗೆ ಫುಡ್ ಕಿಟ್ ನೀಡಿಕೆ
ಸಿದ್ದಾಪುರ.ಏ,06-
ಸ್ಥಳೀಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊರೋನ ವೈರಸ್ ತಡೆಗಟ್ಟುವ ಲಾಕ್‍ಡೌನ್ ಕುರಿತಾಗಿ ನಿರಂತರ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಹಣ್ಣು, ಶುದ್ಧನೀರು,ತಂಪು ಪಾನೀಯ ಮುಂತಾದವುಗಳಿರುವ ಫುಡ್ ಕಿಟ್‍ನ್ನು ನೀಡಲಾಯಿತು.
ಪಕ್ಷದ ಧುರೀಣರಾದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಎ.ಪಿ.ಎಂ.ಸಿ.ಅಧ್ಯಕ್ಷ ಕೆ.ಜಿ.ನಾಗರಾಜ, ತಾಲೂಕು ಪಂಚಾಯತ ಅಧ್ಯಕ್ಷ ಸುಧೀರ್ ಗೌಡರ್, ಕೋಲಸಿರ್ಸಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಕೆ.ಆರ್.ವಿನಾಯಕ ಹಾಗೂ ಲೋಕೇಶ ನಾಯ್ಕ, ಎಲ್.ಬಿ.ರವಿ ಮುಂತಾದವರು ಪಿಐ ಪ್ರಕಾಶ್ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಕಿಟ್ ನೀಡಿದರು.
ಕಾಂಗ್ರೆಸ್ ಧುರೀಣ ಆರ್.ವಿ.ದೇಶಪಾಂಡೆಯವರ ಸೂಚನೆಯ ಮೇರೆಗೆ ಲೋಕ ಕಲ್ಯಾಣಾರ್ಥವಾಗಿ ರವಿವಾರ ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಶೇಷಪೂಜೆ ಸಲ್ಲಿಸಲಾಗಿದೆ ಎಂದು ಕೆ.ಜಿ.ನಾಗರಾಜ ತಿಳಿಸಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

2 Comments

Leave a Reply

Your email address will not be published. Required fields are marked *