

ನಾವು ವೈರಸ್ಅನ್ನು ಛೇಸ್ ಮಾಡುತ್ತಿದ್ದೇವೆ ಅಂದರೆ ಯಾರಿಗೆ ವೈರಸ್ ತಗುಲಿದೆ ಅವರಿಂದ ಯಾರು ಯಾರಿಗೆ ದಾಟಿದೆ ಎಂಬುದು ನಮ್ಮ ಇಂದಿನ ಪರೀಕ್ಷಾ ವಿಧಾನ…!
ಇದರ ಅರ್ಥ ವೈರಸ್ ನಮ್ಮ ಮುಂದಿದೆ ನಾವು ಆದರ ಹಿಂದೆ ಇದ್ದೇವೆ ಇದರಿಂದ ಕೊವಿಡ್ ಗೆಲ್ಲಲು ಸಾಧ್ಯವಿಲ್ಲ ನಾವು ಮಾಸ್ ಟೆಸ್ಟಿಂಗ್ ಮಾಡುವ ಮೂಲಕ ವೈರಸ್ ಮುಂದಕ್ಕೆ ನಿಲ್ಲಬೇಕಿದೆ…!
ಜೊತೆಗೆ ಬಡವ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಹಣ ರೂಪದ ಅಗತ್ಯ ಪ್ಯಾಕೇಜ್ ಘೋಷಿಸಬೇಕಿದೆ…! ಅದು ಮಾರುಕಟ್ಟೆಯಲ್ಲಿ ಹಣದ ಹರಿಯುವಿಕೆ ಹೆಚ್ಚಿಸುತ್ತದೆ…!
ಕೇಂದ್ರಿಕೃತ ನೀತಿಗಳ ಆಚೆಗೆ ನೈಜವಾದ ವಿಕೇಂದ್ರೀಕೃತ ನೀತಿಗಳನ್ನು ಅನುಸರಿಸಬೇಕಿದೆ…! ಜಿಲ್ಲಾಹಂತವನ್ನು ಕೇಂದ್ರವಾಗಿ ಮಾಡಿ ಅಲ್ಲಿನ ಮಾಹಿತಿಗಳನ್ನು ಆಧರಿಸಿ ಯೋಜನೆ ರೂಪಿಸಬೇಕಿದೆ…!
ಮಾಸ್ ಟೆಸ್ಟಿಂಗ್, ಬಡವರ ಅನ್ನ ಮತ್ತು ಕುಸಿಯುತ್ತಿರುವ ದೇಶದ ಆರ್ಥಿಕತೆ ಎಲ್ಲವನ್ನು ನಿಭಾಯಿಸುವ ಯೋಜನೆ ಇಂದಿನ ಅಗತ್ಯವಾಗಿದೆ..!
ನಮ್ಮ ಬಳಿ ಇರುವ ಸೀಮಿತ ಸಂಪನ್ಮೂಲವನ್ನು ಬಹಳ ಎಚ್ಚರಿಕೆಯಿಂದ ವ್ಯಯಿಸಬೇಕಿದೆ ಇಲ್ಲವಾದರೆ ಮೂರು ತಿಂಗಳಲ್ಲಿ ನಾವು ಕನಿಷ್ಟ ಸಂಪನ್ಮೂಲ ಇಲ್ಲದ ಸ್ಥಿತಿಗೆ ತಲುಪುತ್ತೇವೆ…!
ನಾನು ಇದನ್ನು ಸರ್ಕಾರಕ್ಕೆ ಆರೋಪದ ರೀತಿಯಲ್ಲಿ ಹೇಳುತ್ತಿಲ್ಲ ಸಲಹೆ ನೀಡುತ್ತಿದ್ದೇನೆ ಇಂದು ಹಿಂದೂಸ್ಥಾನ ಒಂದಾಗಿ ಹೋರಾಡಬೇಕಿದೆ ನಮ್ಮ ಪಕ್ಷ ರಾಜಕೀಯ ಆಮೇಲೆ ಮಾಡಿಕೊಳ್ಳೋಣ…!
ಇಂದಿನ ಪತ್ರಿಕಾಗೋಷ್ಟಿಯಲ್ಲಿ #ರಾಹುಲ್ ಗಾಂಧಿ..
