

ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಪ್ರಖರತೆ ಕಡಿಮೆಯಾಗುತ್ತಿರುವಂತೆ ಕರೋನಾ ನಿಯಮ, ನಿಶೇಧಾಜ್ಞೆ ಷರತ್ತುಗಳನ್ನು ಉಲ್ಲಂಘಿಸುವವರ ಪ್ರಮಾಣ ಹೆಚ್ಚುತ್ತಿದೆ.


ಸಿದ್ಧಾಪುರದ ಪೊಲೀಸರು ಇಂದು ಒಟ್ಟೂ 4 ಜನರ ಮೇಲೆ ಪ್ರಕರಣ ದಾಖಲಿಸಿದ್ದು 3 ಜನರು ತಮಿಳುನಾಡಿನಿಂದ ಸಿದ್ದಾಪುರಕ್ಕೆ ಬಂದ ತಾಲೂಕಿನ ಶೀಗೇಹಳ್ಳಿಯ ಜನರಾಗಿದ್ದಾರೆ.
ನಗರದ ಎ.ಪಿ.ಎಂ.ಸಿ. ಇಂದಿರಾನಗರದ ನಿವಾಸಿ, ಚಿಕ್ಕೋಡಿಯ ವಾಸುದೇವ್ ಅಪ್ಪಾಜಿ ಎನ್ನುವವರ ಮೇಲೆ ಪ್ರಕರಣ ದಾಖಲಾಗಿದ್ದು ಇವರು ಚಿಕ್ಕೋಡಿಯಿಂದ ಸಿದ್ದಾಪುರಕ್ಕೆ ಬಂದು ಕಾನೂನು, ನಿಯಮ ಉಲ್ಲಂಘಿಸಿ ವಸತಿ ಸಮಚ್ಛಯದಲ್ಲಿ ತಿರುಗಾಡುತ್ತಿರುವ ಬಗ್ಗೆ ಸ್ಥಳಿಯರು ದೂರಿದ ಹಿನ್ನೆಲೆಯಲ್ಲಿ ಇವರ ಮೇಲೆ ಪ್ರಕರಣ ದಾಖಲಾಗಿದೆ. ಇವರು ಇಲ್ಲಿಯ ಅವರಗುಪ್ಪಾದ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲರಾಗಿದ್ದವರು.
ಶಿರಸಿಯಲ್ಲಿ ಹಾವೇರಿಯಿಂದ ಶಿರಸಿಗೆ ಕೂಲಿಯಾಳುಗಳನ್ನು ಕರೆತರುತಿದ್ದ ಬಾಡಿಗೆ ವಾಹನ ಮಾಲಿಕನೊಬ್ಬನ ಮೇಲೆ ಪ್ರಕರಣ ದಾಖಲಾಗಿದೆ.
