

ಕೊರೋನಾಒಂದು ದೊಡ್ಡ ಆಪತ್ತು ಜೊತೆಗೆ ನಮ್ಮ ಶಕ್ತಿ,ಸಾಮರ್ಥ್ಯದ ಮೌಲ್ಯಮಾಪನಕ್ಕೆ ಅವಕಾಶ ಮಾಡಿದ ವಿಪತ್ತು ಎನ್ನುವ ಮೂಲಕ ಸಂಸದ ರಾಹುಲ್ ಗಾಂಧಿ ಕರೋನಾವನ್ನು ನಮ್ಮನ್ನು ಪರೀಕ್ಷಿಸಲು ಬಂದ ಅಕಾಲದ
ಸವಾಲು ಎಂದು ಬಣ್ಣಿಸಿದ್ದಾರೆ.
ಈ ಬಗ್ಗೆ ಮಾಡಿದ ಟ್ವೀಟ್ ನಲ್ಲಿ ಕರೋನಾ ಜಾಗತಿಕ ಆಪತ್ತು ಮನುಕುಲವನ್ನು ಪರರೀಕ್ಷಿಸಲು ಬಂದ ವಿಪತ್ತು ಎನ್ನುವ ಮೂಲಕ ಇದರ ವಿರುದ್ಧ ವಿಜ್ಞಾನಿಗಳು, ಆಡಳಿತದ ಪ್ರಮುಖರು, ವೈದ್ಯರು ಸಮರಸಾರಿದ್ದಾರೆ. ಇಂಥದ್ದೊಂದು ಸವಾಲು ಈ ಶತಮಾನದಲ್ಲಿ ಎದುರಾದುದು ಇದೇ ಮೊದಲು ಎಂದಿದ್ದಾರೆ.
ಸಿದ್ಧಾಪುರ ವರದಿ-
ಜಿಲ್ಲಾ ಕಾಂಗ್ರೆಸ್ ನಿಂದ ಇಂದು ಸಿದ್ಧಾಪುರದಲ್ಲಿ ಆಯ್ಕೆ ಮಾಡಿದ ಬಡ ನೂರು ಕುಟುಂಬಗಳಿಗೆ ಆಹಾರಧಾನ್ಯ ವಿತರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಈ ಕಿಟ್ ಗಳನ್ನು ಫಲಾನುಭವಿಗಳಿಗೆ ವಿತರಿಸಿದರು.ಕಾಂಗ್ರೆಸ್ ನ ಪ್ರಮುಖರು ಉಪಸ್ಥಿತರಿದ್ದರು.



