

ಐದು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದುಮಾಡಿ ವೈರಲ್ ಆಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಟೀಕೆಗಳ ಸುರಿಮಳೆಯೇ ಕೇಳಿಬರುತ್ತಿದೆ. ಅವರನ್ನು ಸಂಸದ ಸ್ಥಾನದಿಂದ ಕಿತ್ತುಹಾಕಬೇಕೆಂದು ಪ್ರಧಾನಿಯನ್ನು ಜನರು ಒತ್ತಾಯಿಸುತ್ತಿದ್ದಾರೆ.

ಬೆಂಗಳೂರು: ಐದು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದುಮಾಡಿ ವೈರಲ್ ಆಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಟೀಕೆಗಳ ಸುರಿಮಳೆಯೇ ಕೇಳಿಬರುತ್ತಿದೆ. ಅವರನ್ನು ಸಂಸದ ಸ್ಥಾನದಿಂದ ಕಿತ್ತುಹಾಕಬೇಕೆಂದು ಪ್ರಧಾನಿಯನ್ನು ಜನರು ಒತ್ತಾಯಿಸುತ್ತಿದ್ದಾರೆ.
ಅಷ್ಟಕ್ಕೂ ಏನದು ಟ್ವೀಟ್?:
2015ರಲ್ಲಿ ಸಂಸದ ತೇಜಸ್ವಿ ಸೂರ್ಯ ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಶೇಕಡಾ 95ರಷ್ಟು ಅರಬ್ ಮಹಿಳೆಯರು ಕಳೆದ ಕೆಲ ನೂರು ವರ್ಷಗಳಲ್ಲಿ ಲೈಂಗಿಕ ತೃಪ್ತಿ, ಪರಾಕಾಷ್ಠೆಯನ್ನು ಹೊಂದಲಿಲ್ಲ. ಲೈಂಗಿಕ ಕ್ರಿಯೆಗಳಿಂದ ಪ್ರತಿ ತಾಯಿ ಮಕ್ಕಳನ್ನು ಹಡೆದಿದ್ದಾಳೆಯೇ ಹೊರತು ಪ್ರೀತಿಯಿಂದಲ್ಲ ಎಂದು ಬರೆದಿದ್ದರು.
ಇದು ಅರಬ್ ಮಹಿಳೆಯರ ಮೇಲೆ ತೇಜಸ್ವಿ ಸೂರ್ಯ ಮಾಡಿರುವ ನಿಂದನಾತ್ಮಕ, ಅವಹೇಳನ ಹೇಳಿಕೆ ಎಂದು ಎಮಿರಾಟಿ ಉದ್ಯಮಮಹಿಳೆ ನೂರಾ ಅಲ್ ಗುರೈರ್ ಟ್ವೀಟ್ ಮಾಡಿ, ಭಾರತದಲ್ಲಿ ಮುಸಲ್ಮಾನರನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಎಂದು ಇದರಿಂದ ಗೊತ್ತಾಗುತ್ತದೆ. ಇಂದು ಆ ಸಂಸದನ ಇಸ್ಲಾಮೋಫೋಬಿಯಾ ಮತ್ತು ದುರ್ಬಳಕೆ ಮನೋಭಾವವನ್ನು ತೋರಿಸುತ್ತದೆ ಎಂದು ಮೊದಲ ಬಾರಿಗೆ ಟೀಕಿಸಿ ಟ್ವೀಟ್ ಮಾಡಿದ್ದರು.
ಅಷ್ಟೇ ಅಲ್ಲದೆ, ನಿಮ್ಮನ್ನು ಬೆಳೆಸಿದ ರೀತಿ, ನೀವು ಬೆಳೆದುಬಂದ ರೀತಿ ಬಗ್ಗೆ ಮರುಕವಾಗುತ್ತದೆ, ಭಾರತ ದೇಶದಲ್ಲಿ ಹಲವು ಮಹಿಳಾ ನಾಯಕರಿದ್ದರೂ ಕೂಡ ಮಹಿಳೆಯರಿಗೆ ಗೌರವ ತೋರಿಸುವ ಗುಣ ನಿಮ್ಮಲ್ಲಿ ಬಂದಿಲ್ಲ. ಸರ್ಕಾರ ನಿಮಗೆ ವಿದೇಶಾಂಗ ಖಾತೆ ನೀಡಿದರೆ ಅರಬ್ ದೇಶಕ್ಕೆ ಬರಬೇಡಿ. ನಿಮಗೆ ಇಲ್ಲಿ ಸ್ವಾಗತ ಇಲ್ಲ. ನೆನಪಿಟ್ಟುಕೊಳ್ಳಿ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.
