ಕೋರೋನ ಒಡ್ಡುವ ಸವಾಲುಗಳು ಮತ್ತು ಸಿದ್ಧತೆ ಹೇಗಿರಬೇಕು?

ಮುಂದಿನ ಕೆಲವು ದಿನಗಳಲ್ಲಿ ಕೋರೋನ ಭಯಂಕರ ದಿನಗಳನ್ನು ನೆನಪಿಸುತ್ತದೆ. ಸಂಪೂರ್ಣ ನಷ್ಟವನ್ನು ಅನುಭವಿಸಿರುವ ಈ ಸಂದರ್ಭದಲ್ಲಿ ನಾಗರಿಕರ ದಿನನಿತ್ಯದ ಜೀವನ ಶೈಲಿಯೂ ಕೂಡ ಬದಲಾಗಬಹುದು& ಐಷಾರಾಮಿ ಜೀವನದಿಂದ ದೂರವಿದ್ದು ಕನಿಷ್ಠ ಜೀವನವನ್ನು ಸಾಗಿಸುವರು. ಭವಿಷ್ಯತ್ತಿನಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ . ಒಂದು ದಿನ ಮುಷ್ಕರ ನಡೆದರೆ ಊಹಿಸಲಾಗದಷ್ಟು ನಷ್ಟ ಹಾಗೂ ಇಡೀ ದೇಶದ ಆರ್ಥಿಕ ಪ್ರಗತಿ ನಿಂತು ಹೋಗುತ್ತಿತ್ತು ಆದರೆ ಸುಮಾರು ಎರಡು ತಿಂಗಳು ಯಾವುದೇ ಉದ್ಯೋಗವಿಲ್ಲದೆ, ಹೊರಬರಲಾರದೆ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ನಮ್ಮ ದೇಶದ ಅಭಿವೃದ್ಧಿಯು ಸಂಪೂರ್ಣ ಕುಂಠಿತಗೊಂಡಿದೆ .ಮುಖ್ಯವಾಗಿನಮ್ಮ ದೇಶದ ಆರ್ಥಿಕ ಬೆನ್ನೆಲುಬಾದ ಕೃಷಿ ಚಟುವಟಿಕೆ ಸಂಪೂರ್ಣವಾಗಿ ನಿಂತು ಹೋಗಿದೆ. ಕೃಷಿ ಚಟುವಟಿಕೆ ಸಂಪೂರ್ಣವಾಗಿ ನಿಂತು ಹೋಗಿರುವುದು ಕೇವಲ ನಮ್ಮ ದೇಶದಲ್ಲಿ ಮಾತ್ರ ಅಲ್ಲ ಜಗತ್ತಿನಲ್ಲಿರುವ ಎಲ್ಲ ರಾಷ್ಟ್ರಗಳಲ್ಲಿ ಕೃಷಿ ಚಟುವಟಿಕೆ ನಿಂತು ಹೋಗಿರುವದರಿಂದ ಮೊದಲಿಗೆ ಆಹಾರದ ಕೊರತೆಯುಂಟಾಗುತ್ತದೆ.
ಹೌದು ಸರ್ಕಾರವು ಆಹಾರದ ಕೊರತೆಯನ್ನು ನೀಗಿಸಲು ಎಷ್ಟೋ ವರ್ಷಗಳವರೆಗೂ ಕಷ್ಟಪಡಬೇಕಾಗುತ್ತದೆ. ದಿನನಿತ್ಯ ಕೂಡ ಕೂಲಿ ಕಾರ್ಮಿಕರು ತಮಗೆ ಬೇಕಾದ ದಿನಸಿಗೊಸ್ಕರ ಪರದಾಡಬೇಕಾಗುತ್ತದೆ.

*ವಾಣಿಜ್ಯೋದ್ಯಮ ಕೂಡ ಸಂಪೂರ್ಣವಾಗಿ ನಷ್ಟ ಅನುಭವಿಸುತ್ತದೆ.*

ಈಗಾಗಲೇ ದಿವಾಳಿಯಾಗಿರುವ ಸುಮಾರು ಉದ್ದಿಮೆಗಳು ಮತ್ತಷ್ಟು ದಿವಾಳಿತನವನ್ನು ಅನುಭವಿಸುತ್ತವೆ ಏಕೆಂದರೆ ಈ ಕರೊನ ಎಂಬ ಮಹಾಮಾರಿ ಸಂಪೂರ್ಣವಾಗಿ ಎಲ್ಲವನ್ನೂ ಸ್ತಬ್ಧ ಗೊಳಿಸಿದೆ. ಒಂದು ದಿನದ ಮುಷ್ಕರದಿಂದಾಗಿ ಎಷ್ಟೊ ಖಾಸಗಿ ಕಂಪನಿಗಳು ಕಾರ್ಮಿಕರ ಒಂದು ದಿನದ ವೇತನವನ್ನು ಕಡಿತಗೊಳಿಸಿದ ಉದಾಹರಣೆ ಇದೆ.

*ಅತಿಹೆಚ್ಚು ಕಾರ್ಮಿಕ ವರ್ಗವನ್ನು ನಿರೀಕ್ಷಿಸಬಹುದು.*

ಲಾಕ್ಡೌನ್ ಆಗಿ ಪ್ರತಿಯೊಬ್ಬರು ಒಂದು ತುತ್ತಿಗೂ ಕೂಡ ಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಮುಂದೆ ಲಾಕ್ಡೌನ್ ತೆರವು ಆದನಂತರ ಪ್ರತಿಯೊಬ್ಬರೂ ಕೂಡ ಯಾವುದೇ ಕೆಲಸ ಸಿಕ್ಕರೂ ನಾನದನ್ನು ಮಾಡಬಲ್ಲೆ ಎಂಬ ದೃಢ ನಿರ್ಧಾರಕ್ಕೆ ಬಂದರು ಆಶ್ಚರ್ಯಪಡಬೇಕಿಲ್ಲ ಇದರಿಂದ ಉದ್ಯೋಗದ ಕೊರತೆ ಸಂಭವಿಸುತ್ತದೆ.

*ಜನಸಾಮಾನ್ಯರ ಆರ್ಥಿಕ ಮುಗ್ಗಟ್ಟು*

ಮುಖ್ಯವಾಗಿ ಬಡವರು ತಮ್ಮ ಜೀವನೋಪಾಯಕ್ಕೆ ಕಾಯ್ದಿರಿಸಿದ ಆಸ್ತಿ ಒಡವೆ ಬೆಲೆಬಾಳುವ ವಸ್ತುಗಳನ್ನು ಮರಾಟ ಮಾಡುವ ಸಂದರ್ಭ ಬಂದರು ಅಚ್ಚರಿ ಪಡಬೇಕಾಗಿಲ್ಲ

*ಎರಡು ವರ್ಷಗಳವರೆಗೂ ಕೂಡ ಸರ್ಕಾರದ ಖಜಾನೆ ಖಾಲಿಯಾಗಿರುವುದು.*

ಒಂದು ಕುಟುಂಬ ಯಾವ ರೀತಿಯಾಗಿ ನಷ್ಟವನ್ನು ಅನುಭವಿಸಿದಾಗ ಕೇವಲ ದಿನನಿತ್ಯದ ಬಗ್ಗೆ ಚಿಂತಿಸುತ್ತದೆ ಹಾಗೆ ಬಂದು ಸರ್ಕಾರವೂ ಕೂಡ ತನ್ನ ಪ್ರಜೆಗಳ ಒಳಿತಿಗಾಗಿ ಅವರ ಜೀವನೋಪಾಯಕ್ಕೆ ಬೇಕಾಗುವಂತಹ ಸಾಮಗ್ರಿಗಳನ್ನು ಸಂಗ್ರಹಿಸಲು ಪರದಾಡಬೇಕಾಗುತ್ತದೆ ಇದರಿಂದ ಎರಡು ವರ್ಷಗಳವರೆಗೂ ಕೂಡ ಸರ್ಕಾರದ ಖಜಾನೆ ಖಾಲಿಯಾಗಿರುವುದು. .

*ಬಡವ ಶ್ರೀಮಂತ ಎಂಬ ಭೇದ-ಭಾವ ಹೆಚ್ಚಾಗುತ್ತದೆ.*

ಇನ್ನು ಮುಂದೆ ಉಳ್ಳವರು ಬಡವರ ನಡುವೆ ತುಂಬಾನೇ ವ್ಯತ್ಯಾಸವಿರುತ್ತದೆ ಏಕೆಂದರೆ ತಮ್ಮ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದ ಶ್ರಮಿಕ ವರ್ಗವನ್ನು ಉಳ್ಳವರು ಪರಿಸ್ಥಿತಿಯ ಲಾಭ ಪಡೆದು ಮತ್ತೆ ಜೀತಪದ್ಧತಿಗೆ ದೂಡಬಹುದು.

*ಸಾಮಾಜಿಕ ಅನೋನ್ಯತೆಗೆ ಮಾರಕ.*

ಮಡಿಯಿಂದ ಜನರನ್ನು ಮೊದಲೇ ದೂರವಿಡುತ್ತಿದ್ದ ಕೆಲವೊಂದು ವರ್ಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎನ್ನುವ ಕೋರೋನ ಮಹಾಮಾರಿಯ ಸಾಮಾಜಿಕ ಅಂತರ ಕೆಲವೊಬ್ಬರ ಬಂಡವಾಳವಾಗಿ ಕೂಡ ಸಾಮಾಜಿಕವಾಗಿ ಭೇದ-ಭಾವವನ್ನು ಸೃಷ್ಟಿಸಬಹುದು.

*ಯುವ ಪೀಳಿಗೆಗೆ ಉದ್ಯೋಗದ ಕೊರತೆ.*

ಮೊದಲೇ ಉದ್ಯೋಗದ ಅಭಾವ ಎದುರಿಸುತ್ತಿರುವಂತಹ ನವ ಪೀಳಿಗೆ ಮುಂದೆ ಉದ್ಯೋಗದ ಕೊರತೆಯನ್ನು ಅನುಭವಿಸುತ್ತದೆ ಏಕೆಂದರೆ ಈಗಾಗಲೇ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವುದರಿಂದ ಹೊಸ ಹುದ್ದೆಗಳನ್ನು ಸೃಷ್ಟಿಸುವುದು ಕೇವಲ ನಿರೀಕ್ಷೆ ಅಷ್ಟೇ ಸರಿ .

*ಕೆಲವು ಖಾಸಗಿ ಬ್ಯಾಂಕುಗಳು ದಿವಾಳಿತನವನ್ನು ಅನುಭವಿಸುತ್ತವೆ.*

ಇಡೀ ದೇಶವೇ ಲಾಕ್ ಡೌನದಿಂದ ಸ್ತಬ್ಧವಾಗಿರುವಾಗ
ಈ ಸಂದರ್ಭದಲ್ಲಿ ಕೆಲಸವಿಲ್ಲದೆ ಎಲ್ಲರೂ ಕೈಚೆಲ್ಲಿ ಕುಳಿತಿರುವಾಗ ಬ್ಯಾಂಕುಗಳು ಈಗಾಗಲೇ ನೀಡಿರುವಂತಹ ಸಾಲದ ಮರುಪಾವತಿಗೆ ಪರದಾಡುವ ಪರಿಸ್ಥಿತಿ ಬರುತ್ತದೆ. ಗ್ರಾಹಕರು ತಮ್ಮ ಈ ಸಾಲದ ಮರುಪಾವತಿಯನ್ನು ಸರಿಯಾಗಿ ಮರು ಪಾವತಿಸದೆ ಇರುವುದರಿಂದ ಕೆಲವು ಬ್ಯಾಂಕುಗಳು ದಿವಾಳಿತನವನ್ನು ಅನುಭವಿಸಬಹುದು. ಹೀಗೆ ಕೋರೋನ ಇನ್ನು ಹತ್ತು ಹಲವಾರು ಭಯಾನಕ ಸನ್ನಿವೇಶಗಳನ್ನು ನಮ್ಮ ಕಣ್ಣೆದುರಿಗೆ ತಂದೊಡ್ಡುತ್ತದೆ.

*ಶೈಕ್ಷಣಿಕ ವ್ಯವಸ್ಥೆಯ ಬುಡಮೇಲು ಮಾಡಿದೆ.*

ಪ್ರಸಕ್ತ ಶೈಕ್ಷಣಿಕ ವ್ಯವಸ್ಥೆಯ ಕ್ಯಾಲೆಂಡರ್ ನ್ನು ಬುಡಮೇಲು ಮಾಡಿರುವುದರಿಂದ ಅಹ೯ ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಮತ್ತು ಉನ್ನತ ಶಿಕ್ಷಣಕ್ಕೆ ಯಾವ ಮಾನದಂಡವನ್ನು ಅನುಸರಿಸಬೇಕೆಂಬುದು ಯಕ್ಷಪ್ರಶ್ನೆಯಾಗಿದೆ ಇದರಿಂದ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಕಷ್ಟಪಟ್ಟು ಶ್ರಮಿಸಿದ ನಿಜವಾದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ.

*ಕೊರೊನಾ ಒಡ್ಡುವ ಸವಾಲುಗಳಿಗೆ ಸಿದ್ಧತೆ ಹೇಗಿರಬೇಕು?*

ಸರ್ಕಾರವು ಕೃಷಿ ಚಟುವಟಿಕೆಗೆ ಹೆಚ್ಚು ಒತ್ತು ಕೊಡಬೇಕು. ರೈತರಿಗೆ ಬೇಕಾಗುವಂತಹ ಬೀಜ ಗೊಬ್ಬರವನ್ನು ಹಾಗೂ ಕೃಷಿಗೆ ಬೇಕಾಗುವಂತಹ ಸಾಮಗ್ರಿಗಳನ್ನು ಪ್ರಥಮ ಪ್ರಾಶಸ್ತ್ಯ ಎಂದು ಪೂರೈಸಬೇಕು ಇಲ್ಲವಾದಲ್ಲಿ ಭಯಂಕರವಾದ ಆಹಾರದ ಕೊರತೆಯನ್ನು ಅನುಭವಿಸುತ್ತೆವೆ.
ಗ್ರಾಮೀಣ ಜನರಿಗೆ ಉದ್ಯೋಗ ಸೃಷ್ಟಿಸುವುದು.
ಅತಿ ಕಷ್ಟದಲ್ಲಿ ದಿನಗಳನ್ನು ದೂಡುತ್ತಿರುವ ಕಡುಬಡವರಿಗೆ ಹಾಗೂ ಗ್ರಾಮೀಣ ಜನರಿಗೆ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಬಹುಮುಖ್ಯ ಕರ್ತವ್ಯವಾಗಿದೆ.
ಶಿಕ್ಷಣ ವ್ಯವಸ್ಥೆಯನ್ನು ಸರಳಿಕರಣಗೊಳಿಸಿ ತಂತ್ರಜ್ಞಾನವನ್ನು ಹೆಚ್ಚು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಯಾವುದೇ ಆರ್ಥಿಕ ತೊಂದರೆ ಆಗದಂತೆ ಶಿಕ್ಷಣವನ್ನು ನೀಡುವುದು ಪಠ್ಯಪುಸ್ತಕಗಳ ಹೊರೆಯನ್ನು ಕಡಿಮೆ ಮಾಡುವುದು ಹಾಗೂ ಅವುಗಳಿಂದ ವಿದ್ಯಾರ್ಥಿಗಳಿಗೆ ಆಗುವಂತಹ ಆರ್ಥಿಕ ತೊಂದರೆಯನ್ನು ಕಡಿಮೆ ಮಾಡಿ ಆನ್ಲೈನ್ ತರಗತಿಗಳಿಗೆ ಹೆಚ್ಚು ಒತ್ತುಕೊಡುವುದು. ಮತ್ತೊಂದು ಬಹುಮುಖ್ಯ ಬದಲಾವಣೆಯೆಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ವಿಧಿಸುವಂತಹ ಅತಿಹೆಚ್ಚು ಶುಲ್ಕವನ್ನು ಕಡಿಮೆ ಮಾಡುವುದು ಇದರಿಂದ ಆರ್ಥಿಕ ನಷ್ಟವನ್ನು ಕೂಡ ತಪ್ಪಿಸಬಹುದು.
ವಾಣಿಜ್ಯೋದ್ಯಮ ಮತ್ತು ದೇಶದ ಆರ್ಥಿಕತೆಯನ್ನು ಸುಧಾರಿಸಲು ಸರಕಾರ ಪ್ರಥಮ ಆದ್ಯತೆ ನೀಡಿ ಹೆಚ್ಚು ಉದ್ಯೋಗವನ್ನು ಸೃಷ್ಟಿಸಬೇಕು.

ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನವಷ್ಟೇ ಎನ್ನಬಹುದು.

-ಡಾ.ರಾಜು ಟಿ.ಮಾಳಗಿಮನಿ
ಉಪನ್ಯಾಸಕರು
ಎಸ್ ಡಿ ಎಂ ಪಿ ಯು ಕಾಲೇಜ್ ಹೊನ್ನಾವರ್.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *