





ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಭೀತಿ, ಮಂಗನಕಾಯಿಲೆ ಆತಂಕಗಳ ನಡುವೆ ಮೇ ಡೆ ನಡೆದು ಮಳೆಯಿಂದ ಇಳೆ ತಂಪು ಮಾಡಿದೆ.
ಕರೋನಾ ಸಂತೃಸ್ತರಿಗೆ ನೆರವು ನೀಡುವ ವಿಚಾರದಲ್ಲಿ ಪ್ರಮುಖ ಜನಪ್ರತಿನಿಧಿಗಳು,ಹಳೆಯ ರಾಜಕಾರಣಿಗಳು ಸ್ಫಂದಿಸಲಿಲ್ಲ ಎನ್ನುವ ಆರೋಪದ ನಡುವೆ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಮ್ಮ ಕ್ಷೇತ್ರ ಮುಂಡಗೋಡು, ಯಲ್ಲಾಪುರಗಳಲ್ಲಿ ಫುಡ್‍ಕಿಟ್ ವಿತರಿಸಿದ್ದಾರೆ.
ಮೇ ಡೆ ಆಚರಣೆ-
ಜಿಲ್ಲೆಯ ಅಂಕೋಲಾ, ಸಿದ್ಧಾಪುರ ಸೇರಿದಂತೆ ಕೆಲವೆಡೆ ಮೇ1 ರ ಮೇ ಡೆ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಅಂಕೋಲಾ ಅಗಸೂರಿನಲ್ಲಿ ಶಾಂತಾರಾಮ ನಾಯಕರ ನೇತೃತ್ವದಲ್ಲಿ ಕೆಲವೇ ಜನರು ಸೇರಿ ಮೇ ಡೆ ಆಚರಣೆ ಮಾಡಿ ತಮ್ಮ ಬೇಡಿಕೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದರು.
ಸಿದ್ಧಾಪುರದಲ್ಲಿ ಯಮುನಾ ಗಾಂವ್ಕರ್ ಮೇ ಡೆ ಆಚರಣೆ ಅಂಗವಾಗಿ ಕಾರ್ಮಿಕರ ಬೇಡಿಕೆಗಳನ್ನು ತಿಳಿಸಿದರು, ಕಾರ್ಮಿಕರಿಗೆ ದಿನದ 12 ತಾಸುಗಳ ಕೆಲಸಗಳೊಂದಿಗೆ ಅನೇಕ ಯೋಜನಾ ಕಾರ್ಯಕರ್ತರು, ಗುತ್ತಿಗೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಮಾನವೀಯವಾಗಿ ವರ್ತಿಸುತ್ತಿರುವ ಬಗ್ಗೆ ದಾಖಲೆ, ಅಂಕಿಸಂಖ್ಯೆಗಳೊಂದಿಗೆ ವಿವರಿಸಿದರು.
ಲಾಕ್ ಔಟ್,ನಿಶೇಧಾಜ್ಞೆ ಹಿನ್ನೆಲೆಗಳಲ್ಲಿ ಎಲ್ಲಾ ಕಾರ್ಮಿಕರಿಗೆ ತಮ್ಮ ಮನೆಯಲ್ಲೇ ಕುಳಿತು ಮೇ ಡೆ ಆಚರಣೆ ಮಾಡಿಸಿದ ಕಾರ್ಮಿಕ ಮುಖಂಡರ ಸಾಮಾಜಿಕ ಜಾಲತಾಣದ ಲೈವ್ ಪರಿಣಾಮಕಾರಿಯಾಗಿ ಮೂಡಿಬಂತು.
ಸಿದ್ಧಾಪುರದಲ್ಲಿ ಕ್ಷೇತ್ರದ ಮಳೆಗಾಲದ ಮುಂಜಾಗೃತೆ, ಕುಡಿಯುವ ನೀರಿನ ಬವಣೆ ಹಾಗೂ ಕರೋನಾ ಮತ್ತು ಮಂಗನಕಾಯಿಲೆಗಳ ಕುರಿತ ಅಧಿಕಾರಿಗಳ ಸಭೆ ನಡೆಸಿದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಗತ್ಯ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಆದೇಶಿಸಿದರು.
ಕೊಲೆ ಯತ್ನ-
ಕಾಂಗ್ರೆಸ್ ಮುಖಂಡ ಅಂಕೋಲಾ ಅಡ್ಲೂರಿನ ಗೋಪಾಲಕೃಷ್ಣ ನಾಯಕ ತನ್ನ ಕೆಲಸಗಾರರೊಂದಿಗೆ ಸ್ಥಳಿಯ ವ್ಯಕ್ತಿಯೊಬ್ಬರ ಮೇಲೆ ಗುಂಡಿನದಾಳಿಗೆ ಯತ್ನಿಸಿದ್ದು ಅವರೊಂದಿಗೆ ಒಟ್ಟೂ ನಾಲ್ಕು ಜನರ ಮೇಲೆ ಕೊಲೆಯತ್ನದ ಪ್ರಕರಣ ದಾಖಲಾಗಿದೆ. ಹಲಸಿನ ಹಣ್ಣು ಕಿತ್ತ ಕಾರಣಕ್ಕೆ ಉಂಟಾದ ವಿವಾದ ಕೊಲೆಯತ್ನದಲ್ಲಿ ಪರ್ಯಾವಸಾನವಾಗಿದ್ದು ಪ್ರಮುಖ 2 ಜನ ಆರೋಪಿಗಳು ಪರಾರಿಯಾಗಿದ್ದರೆ ಇನ್ನಿಬ್ಬರು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಗೋಪಾಲಕೃಷ್ಣ ನಾಯಕ ಸ್ಥಳಿಯರೊಬ್ಬರಿಗೆ ರಿವಾಲ್ವರ್ ನಿಂದ ಹೊಡೆದು ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಆರೋಪ ಮಾಡಲಾಗಿದೆ.
