ಭಿನ್ನಮತ ದಮನಕ್ಕೆ ಕೇಂದ್ರ ಸರಕಾರದಿಂದ ಕೋವಿಡ್- 19 ಅಸ್ತ್ರ ಬಳಕೆ

ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ಮುಖವಾಡದಲ್ಲಿರುವ ಎಲ್ಲಾ ಸರ್ವಾಧಿಕಾರಗಳಂತೆ ಭಾರತದಲ್ಲಿ ನರೇಂದ್ರ ಮೋದಿ ಸರಕಾರವೂ ಕೋವಿಡ್- 19 ಪಿಡುಗನ್ನು ಭಿನ್ನಮತದ ದಮನಕ್ಕೆ ಅಸ್ತ್ರವಾಗಿ ಬಳಸುತ್ತಿದೆ.By ಅನುವಾದಿತ ಲೇಖನ | Date – May 16, 2020 ಆಧಾರ-ನಾನೂ ಗೌರಿ

ಭಿನ್ನಮತ ದಮನಕ್ಕೆ ಕೇಂದ್ರ ಸರಕಾರದಿಂದ ಕೋವಿಡ್- 19 ಅಸ್ತ್ರ ಬಳಕೆ

ಸರಕಾರವು ಈ ಪಿಡುಗಿನ ನೆಪದಲ್ಲಿ ಭಿನ್ನಮತ ಅಡಗಿಸಲು ಯತ್ನಿಸುತ್ತಿದೆ ಮತ್ತು ಭಾರತದ ಪೌರತ್ವ ಕಾಯಿದೆ ತಿದ್ದುಪಡಿ ವಿರುದ್ಧ  ಹೋರಾಟವೇ ದೇಶದ್ರೋಹದ ಕೆಲಸವೆಂಬ ಮಿಥ್ಯೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಇದನ್ನು ಈಗಲೇ ನಿಲ್ಲಿಸದಿದ್ದಲ್ಲಿ ಪ್ರಜಾಪ್ರಭುತ್ವ ಮತ್ತು ಈ ಪಿಡುಗಿನ ವಿರುದ್ಧ ಹೋರಾಟಗಳೆರಡೂ ದಯನೀಯವಾಗಿ ದುರ್ಬಲಗೊಳ್ಳುವುದು ಖಂಡಿತ.

ಮೂಲ: ಹರ್ಷ್ ಮಂದರ್ ಮತ್ತು ಅಮಿತಾಂಶು

ಭಾವಾನುವಾದ: ನಿಖಿಲ್ ಕೋಲ್ಪೆ

ದಿಲ್ಲಿಯಲ್ಲಿ ದೊಡ್ಡ ಸಂಖ್ಯೆಯ ಜನರನ್ನು- ಮುಖ್ಯವಾಗಿ ಮುಸ್ಲಿಮರನ್ನು- ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಪಿಎ) ವಿರೋಧಿ ಪ್ರತಿಭಟನೆಗಳು ಮತ್ತು ಇತ್ತೀಚಿನ ಕೋಮುಗಲಭೆಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಭಾರತದ ಕರಾಳ ಲಾಕ್‌ಡೌನ್ ನೆರಳಿನ ಅಡಿಯಲ್ಲಿ ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ದಿಲ್ಲಿ ಪೊಲೀಸ್ ಇಲಾಖೆ ಕೋವಿಡ್-19 ಪಿಡುಗಿನ ನಿಯಂತ್ರಣಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿರದ ಕೆಲಸಗಳಲ್ಲಿ ವ್ಯಸ್ತವಾಗಿದೆ.

ಅದರ ಘನ ಕಾರ್ಯಗಳಲ್ಲಿ- ಕಚೇರಿ ಮತ್ತು ಮನೆಗಳಿಗೆ ಬೀಗಮುದ್ರೆ ಜಡಿಯುವುದು, ಫೋನ್ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳುವುದು, ದೊಡ್ಡ ಸಂಖ್ಯೆಯಲ್ಲಿ ಜನರನ್ನು ಬಂಧಿಸುವುದು ಸೇರಿದೆ. ಕೊರೋನ ವೈರಸ್ ಹರಡದಂತೆ ತಡೆಯಲು ಜೈಲುಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಸರಕಾರಗಳಿಗೆ ನೀಡಿರುವ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಇದು ನಡೆಯುತ್ತಿದೆ ಎಂಬುದು ಬೇರೆಯೇ ಕತೆಯನ್ನು ಹೇಳುತ್ತದೆ.

ಬಂಧಿತರ ವಿರುದ್ಧ ಹೇರಲಾಗುತ್ತಿರುವ ಆರೋಪಗಳೆಂದರೆ, ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದುದು ಮತ್ತು ಈಶಾನ್ಯ ದಿಲ್ಲಿಯ ಕಾರ್ಮಿಕರ ವಸತಿ ಪ್ರದೇಶಗಳಲ್ಲಿ ನಡೆದ 1947ರ ದೇಶ ವಿಭಜನೆಯ ಬಳಿಕದ ಅತ್ಯಂತ ಭೀಕರ ಹಿಂದೂ- ಮುಸ್ಲಿಂ ಗಲಭೆಗಳನ್ನು ಪ್ರಚೋದಿಸಿದ್ದು ಅಥವಾ ಭಾಗವಹಿಸಿದ್ದು.

ಗೃಹ ಸಚಿವಾಲಯದ ಆದೇಶ

ಲಾಕ್‌ಡೌನ್ ಬಳಿಕದ ಸ್ವಲ್ಪ ಮಟ್ಟಿನ ಹಿಂಜರಿಕೆಯ ನಂತರ ಏಕಾಏಕಿಯಾಗಿ ಏರಿದ ಈ ಬಂಧನ ಹಿಂದೆ ಕೇಂದ್ರ ಗೃಹ ಸಚಿವಾಲಯವು ದಿಲ್ಲಿ ಕ್ರೈಂ ಬ್ರಾಂಚಿಗೆ ನೀಡಿದ ಆದೇಶ ಇದೆಯೆಂದು ವರದಿಯಾಗಿದೆ.

ಮಾರ್ಚ್ 22ರಿಂದ ಎಪ್ರಿಲ್ ಮಧ್ಯಭಾಗದ ತನಕ ಈಶಾನ್ಯ ದಿಲ್ಲಿಯ ಗಲಭೆಪೀಡಿತ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ 25ರಿಂದ 30 ಮಂದಿಯನ್ನು ಬಂಧಿಸಲಾಗಿದೆ ಎಂದು “ದಿ ಹಿಂದೂ” ವರದಿ ಮಾಡಿದೆ. “ಇಂಡಿಯನ್ ಎಕ್ಸ್‌ಪ್ರೆಸ್” ಪ್ರಕಾರ 802 ಬಂಧನಗಳು ನಡೆದಿದ್ದು, ಇವುಗಳಲ್ಲಿ ಕನಿಷ್ಟ 50 ಲಾಕ್‌ಡೌನ್ ಅವಧಿಯಲ್ಲಿ ನಡೆದಂತವುಗಳು. ಆದರೆ, ಕೆಲವು ವರದಿಗಳು ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳುತ್ತವೆ. ಅವುಗಳ ಪ್ರಕಾರ ದಿನಕ್ಕೆಆರರಿಂದ ಏಳು ಬಂಧನಗಳು ನಡೆಯುತ್ತಿದ್ದು, ಲಾಕ್‌ಡೌನ್ ಅವಧಿಯಲ್ಲಿ ಮಾಧ್ಯಮ ಮತ್ತು ಕಾನೂನು ಸೇವೆಗಳ ಮೆಲೆ ಹೊರಿಸಲಾಗಿರುವ ತೀವ್ರತರವಾದ ನಿರ್ಬಂಧಗಳಿಂದಾಗಿ ನಿರ್ದಿಷ್ಟ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಅಸಾಧ್ಯವಾಗಿದೆ.

ಈ ಪ್ರದೇಶಗಳ ಮುಸ್ಲಿಮರನ್ನು ಗುರಿಪಡಿಸಲಾಗುತ್ತಿದ್ದು, ಯುವ ನಾಯಕ ಉಮರ್ ಖಾಲಿದ್, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ನಾಯಕರಾದ ಮೀರಾನ್ ಹೈದರ್, ಗರ್ಭಿಣಿಯಾಗಿರುವ ಸಫೂರಾ ಝರ್ಗಾರ್ ಸಹಿತ ಯುವಕರ ಮೇಲೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊರಿಸಲಾಗುತ್ತಿದೆ. ಅವರ ವಿರುದ್ಧ ಕರಾಳವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅನ್ವಯ ಕೇಸು ದಾಖಲಿಸಲಾಗಿದೆ. ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ)ನ ಎಡಪಂಥೀಯ ನಾಯಕಿ ಕನ್ವಲ್ಜಿತ್ ಕೌರ್ ಅವರ ಮನೆಗೆ ದಾಳಿ ನಡೆಸಿ ಅವರ ಫೋನನ್ನು ವಶಪಡಿಸಿಕೊಳ್ಳಲಾಗಿದೆ.

ಭಿನ್ನಮತ, ದಮನಕ್ಕೆ ಕೇಂದ್ರ ಸರಕಾರದಿಂದ, ಕೋವಿಡ್- 19 ಅಸ್ತ್ರ ಬಳಕೆ

ಈ ಯದ್ವಾತದ್ವಾ ಬಂಧನಗಳನ್ನು ವಿರೋಧಿಸಿ ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ದಿಲ್ಲಿ ಪೊಲೀಸ್ ಕಮೀಷನರ್‌ಗೆ ಪತ್ರ ಬರೆದಿದ್ದರು. ಆದರೆ ಪೊಲೀಸರು ಅವರ ಮೇಲೆಯೇ ಪಿಡುಗು ಹರಡುವಿಕೆ ಕುರಿತು ನೀಡಿದ ಹೇಳಿಕೆಯನ್ನು ಹಿಡಿದುಕೊಂಡು ರಾಷ್ಟ್ರದ್ರೋಹದ ಕೇಸು ದಾಖಲಿಸಿದ್ದಾರೆ.

ಕಾನೂನು ಸೇವೆಗಳಿಗೆ ಕತ್ತರಿ

ಪೊಲೀಸರು ತಮ್ಮ ಬಂಧನ ಸತ್ರವನ್ನು ಹೆಚ್ಚಿಸಿರುವಂತೆಯೇ ಲಾಕ್‌ಡೌನ್ ಅಡಿಯಲ್ಲಿ ಅನುಮತಿಸಲಾಗಿರುವ ಅಗತ್ಯ ಸೇವೆಗಳಲ್ಲಿ ಕಾನೂನು ಸೇವೆಗಳನ್ನು ಸೇರಿಸದೇ ಇರುವುದು ಗಮನಾರ್ಹ. ಇದರ ಅರ್ಥವೆಂದರೆ, ಆರೋಪಿತ ವ್ಯಕ್ತಿಗಳ ಮೂಲಭೂತ ಹಕ್ಕುಗಳ ದಮನವಾಗಿದೆ. ಎಲ್ಲಾ ರೀತಿಯ ಕಾನೂನು ಪ್ರಕ್ರಿಯೆಗಳನ್ನು ಉಲ್ಲಂಘಿಸಲಾಗುತ್ತಿದ್ದು, ಬಂಧಿತರ ಕುಟುಂಬಗಳಿಗೆ ಎಫ್‌ಐಆರ್ ಪ್ರತಿಗಳನ್ನೂ ನೀಡಲಾಗುತ್ತಿಲ್ಲ. ಮೇಲಾಗಿ ಅವರೆಲ್ಲಾ ಕೂಲಿ ಕಾರ್ಮಿಕರು ಅಥವಾ ಚಿಕ್ಕ ವ್ಯಾಪಾರಿ ಕುಟುಂಬಗಳಿಗೆ ಸೇರಿದವರಾಗಿರುವುದರಿಂದ ಲಾಕ್‌ಡೌನ್‌ನಿಂದ ಆದಾಯ ಸಂಪೂರ್ಣ ನಿಂತುಹೋಗಿ, ಕಾನೂನು ಸೇವೆಯನ್ನೂ ಪಡೆಯಲಾಗದೆ ಇನ್ನಷ್ಟು ಭಯಭೀತರಾಗಿದ್ದಾರೆ.

ಪತ್ರಕರ್ತರು, ವಕೀಲರು ಮತ್ತು ಮಾನವಹಕ್ಕು ಹೋರಾಟಗಾರರಿಗೂ ಪೊಲೀಸ್ ಕಾರ್ಯಾಚರಣೆಗಳ ಬಲಿಪಶುಗಳನ್ನು ಭೇಟಿಯಾಗಲು ಅವಕಾಶವಿಲ್ಲವಾದುದರಿಂದ ಭಯ ಮತ್ತು ಗೌಪ್ಯದ ಪರದೆಯಿಂದೀಚೆಗೆ ಸ್ವಲ್ಪವೇ ಮಾಧ್ಯಮ ಸುದ್ದಿಗಳು ಹೊರಗೆ ಬರುತ್ತಿವೆ.

ಈ ಆರೋಗ್ಯ ತುರ್ತುಸ್ಥಿತಿಯಲ್ಲಿ ನ್ಯಾಯವೇ ಅಗತ್ಯ ಸೇವೆಯಾಗದೇ ಇರುವುದರಿಂದ, “ಕಾನೂನಿನ ಎದುರು ಸಮಾನತೆ“ಯ ತತ್ವವೇ ಲಾಕ್‌ಡೌನ್‌ನಲ್ಲಿದೆ.

ಕಾನೂನು ಪ್ರಕಾರ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡ 24 ಗಂಟೆಗಳ ಒಳಗಾಗಿ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಬೇಕು. ಆದರೆ, ಇದನ್ನು ಗಾಳಿಗೆ ತೂರಿರುವ ಪೊಲೀಸರು, ನೇರವಾಗಿ ಜೈಲಿನ ಒಳಗೆಯೇ ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸುತ್ತಿದ್ದಾರೆ. ಲಾಕ್‌ಡೌನ್ ನೆಪದಲ್ಲಿ ವಕೀಲರಿಗೂ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿದೆ. ಕೆಳಗಿನ ನ್ಯಾಯಾಲಯಗಳಲ್ಲಿ ವಿಡಿಯೋ ವಿಚಾರಣೆಯ ಸೌಲಭ್ಯವೂ ಇಲ್ಲವಾದುದರಿಂದ ಬಂಧಿತರು ಜಾಮೀನಿನ ಅವಕಾಶವಿಲ್ಲದೆ ಜೈಲುಪಾಲಾಗಬೇಕಾಗುತ್ತಿದೆ.

ಸರಕಾರವು ಈ ಪಿಡುಗಿನ ನೆಪದಲ್ಲಿ ಭಿನ್ನಮತವನ್ನು ಅಡಗಿಸಲು ಯತ್ನಿಸುತ್ತಿದೆ ಮತ್ತು ಭಾರತದ ಪೌರತ್ವ ಕಾಯಿದೆ ತಿದ್ದುಪಡಿ ವಿರುದ್ಧ  ಹೋರಾಟವೇ ದೇಶದ್ರೋಹದ ಕೆಲಸವೆಂಬ ಮಿಥ್ಯೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ. ಇದನ್ನು ಈಗಲೇ ನಿಲ್ಲಿಸದಿದ್ದಲ್ಲಿ ಪ್ರಜಾಪ್ರಭುತ್ವ ಮತ್ತು ಈ ಪಿಡುಗಿನ ವಿರುದ್ಧ ಹೋರಾಟಗಳೆರಡೂ ದಯನೀಯವಾಗಿ ದುರ್ಬಲಗೊಳ್ಳುವುದು ಖಂಡಿತ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *