nagesh hegde call-ಅತ್ಯಲ್ಪಸಂಖ್ಯೆಯ ಅತಿಶ್ರೀಮಂತರ ಮೇಲೆಅತ್ಯಲ್ಪ ಒತ್ತಡ ಹಾಕೋಣ ಬನ್ನಿ!

[ದೇಶದ ಶೇಕಡಾ 1ರಷ್ಟಿರುವ ಆಗರ್ಭಶ್ರೀಮಂತರ ಸಂಪತ್ತಿನ ಮೇಲೆ ಶೇ. 2ರಷ್ಟು ಕೊರೊನಾ ತೆರಿಗೆ ಹಾಕಿರೆಂದು ಪ್ರಧಾನಿಯವರಿಗೆ ನಮ್ಮನಿಮ್ಮ ನಿವೇದನೆ]

ಲಾಕ್‌ಡೌನ್ ಅಗತ್ಯವಿತ್ತು, ಆದರೆ ಅದನ್ನು ಕಾರ್ಯಗತಗೊಳಿಸಿದ ವೈಖರಿ ನೋಡಿ. ಯಾವ ಪೂರ್ವಾಪರ ಯೋಜನೆ ಇಲ್ಲದೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೇಳದೆಯೇ ಹಠಾತ್‌ ಘೋಷಣೆ ಮಾಡಿದ ಫಲವಾಗಿ, ಅದರ ಮೂಲ ಉದ್ದೇಶಗಳೇ ವಿಫಲವಾಗಿವೆ.

ಹಸಿದವರು, ಬಳಲಿದವರು ದೇಶದ ತುಂಬೆಲ್ಲ ಕಾಣುತ್ತಿದ್ದಾರೆ. ಪರಿಹಾರ ಅರೆಬರೆಯಾಗಿದೆ. ಕೆಲವರಿಗಷ್ಟೆ ಅಷ್ಟಿಷ್ಟು ನಗದು ಮತ್ತು ದಿನಸಿ ಸಿಕ್ಕಿವೆ. ನಿರುದ್ಯೋಗವೇನೊ ಅನಿವಾರ್ಯವಾಗಿತ್ತು ಬಿಡಿ. ಆದರೆ ಅಸಮರ್ಪಕ ಆರೋಗ್ಯ ವ್ಯವಸ್ಥೆಯಿಂದಾಗಿ ಬಿಕ್ಕಟ್ಟು ದುಪ್ಪಟ್ಟಾಗಿದೆ. ಪರೀಕ್ಷೆ ಸರಿಯಾಗಿ ಆಗುತ್ತಿಲ್ಲ. ರೋಗಿಗಳು ಎಲ್ಲೆಲ್ಲಿ ಹೋಗಿದ್ದರೆಂಬುದು ಗೊತ್ತಾಗುತ್ತಿಲ್ಲ. ಶುಶ್ರೂಷಕರಿಗೆ ರಕ್ಷಣಾ ಸೌಕರ್ಯ ಲಭಿಸುತ್ತಿಲ್ಲ; ಕ್ವಾರಂಟೈನ್ ವ್ಯವಸ್ಥೆ ಹೇಳತೀರದಷ್ಟಾಗಿದೆ.ಈ ಎಲ್ಲ ಕಾರಣಗಳಿಂದಾಗಿ ಲಾಕ್‌ಡೌನ್ ಘೋಷಣೆಯ ಕಾಲದಲ್ಲಿ (ಮಾರ್ಚ್ 24) ಕೇವಲ 600ರಷ್ಟಿದ್ದ ಕೊರೊನಾಪೀಡಿತರ ಸಂಖ್ಯೆ ಈಗ ಒಂದೂವರೆ ಲಕ್ಷದತ್ತ ಸಾಗುತ್ತಿದೆ.

ಈಗಿನ್ನೇನು, ಲಾಕ್‌ಡೌನ್ ತೆರವು ಮಾಡುವ ಸಿದ್ಧತೆಯಲ್ಲಿದ್ದೇವೆ.ಇದರರ್ಥ ಕೋವಿಡ್‌ ಪೀಡಿತರ ಸಂಖ್ಯೆ ತೀರಾ ಹೆಚ್ಚಾಗುವ ಸಂಭವ ಇದೆ.ಇದನ್ನೆಲ್ಲ ನಿರ್ವಹಣೆ ಮಾಡಲು ನಮ್ಮ ಬಳಿ ಸಂಪತ್ತು ಇಲ್ಲವೆಂತಲ್ಲ. ಆದರೆ ತೊಂದರೆ ಏನೆಂದರೆ ಆ ಸಂಪತ್ತಿನ ಬಹುಭಾಗವೆಲ್ಲ ಅತಿಶ್ರೀಮಂತರ ಕೈಯಲ್ಲಿದೆ. ಅಂಥವರು ತಮ್ಮ ಸಂಪತ್ತಿನ ಕೊಂಚ ಪಾಲನ್ನು ಈ ಸಂಕಟ ಸಮಯದಲ್ಲಿ ಕೊಡಿರೆಂದು ಕೇಳಲು ಪ್ರಧಾನ ಮಂತ್ರಿ ಸಿದ್ಧರಿಲ್ಲ.ನಾವು ಈ ಮೂಲಕ ಪ್ರಧಾನಿಯವರ ಮೇಲೆ ಒತ್ತಡ ಹೇರಬೇಕಾಗಿದೆ.ದೇಶದ ಶೇಕಡಾ 1ರಷ್ಟಿರುವ ಅತಿ ಶ್ರೀಮಂತರ ಮೇಲೆ ಅವರ ಸಂಪತ್ತಿನ 2%ರಷ್ಟು ಕೊರೊನಾತೆರಿಗೆ ಹಾಕಿ ಎಂದು ಕೋರುತ್ತಿದ್ದೇವೆ.

ಪ್ರಧಾನಿಯವರು ಈ ತೆರಿಗೆ ಹಾಕುವ ಧೈರ್ಯ ತೋರಿದ್ದೇ ಆದರೆ 9.5 ಲಕ್ಷ ಕೋಟಿ ಹಣ ಸರಕಾರಕ್ಕೆ ಬರುತ್ತದೆ.ಇಷ್ಟು ಹಣದಿಂದ ಏನೇನು ಸಾಧ್ಯ ನೋಡಿ.(1) ಕಡುಬಡ 20 ಕೋಟಿ ಜನರಿಗೆ ಎರಡು ತಿಂಗಳಮಟ್ಟಿಗೆ ಆರು ಸಾವಿರ ರೂಪಾಯಿಗಳನ್ನು ನೀಡಿದರೆ ಕೇವಲ 2.5 ಲಕ್ಷ ಕೋಟಿ ಹಣ ಸಾಕಾಗುತ್ತದೆ.(2) ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲೆಂದು ಈಗಿಗಿಂತ ದುಪ್ಪಟ್ಟು ಹಣವನ್ನು ಮೀಸಲಿಟ್ಟರೂ ಹೆಚ್ಚೆಂದರೆ ಮೂರುವರೆ ಲಕ್ಷ ಕೋಟಿ ಹಣವಷ್ಟೆ ವ್ಯಯವಾಗುತ್ತದೆ. ಅಷ್ಟಾದ ನಂತರವೂ ಸಾಕಷ್ಟು ಹಣ ಉಳಿದಿರುತ್ತದೆ.(3) ಊರಿಗೆ ಹೋಗಲಾರದೆ ಉಳಿದವರನ್ನು ಕಳಿಸಬಹುದು. ಅವರಿಗೆ ಅವರ ಊರಲ್ಲೇ ಉದ್ಯೋಗ ಸೃಷ್ಟಿ ಮಾಡಬಹುದು. ರೈತರ ಸಂಕಷ್ಟಗಳನ್ನು ಪರಿಹರಿಸಬಹುದು. ನಗರದಲ್ಲೂ ನರೇಗಾ ಯೋಜನೆಯನ್ನು ಜಾರಿಗೆ ತರಬಹುದು.ಕೇವಲ ಈ ಅತಿಶ್ರೀಮಂತರು ತಮ್ಮ ಸಂಪತ್ತಿನ ಶೇ. 2ರಷ್ಟನ್ನು ಕೊಟ್ಟರೆ ಇವೆಲ್ಲ ಸಾಧ್ಯವಿದೆ.ಬನ್ನಿ, ನಾವೆಲ್ಲ ಸೇರಿ ಪ್ರಧಾನಿಯವರ ಮೇಲೆ ಈ ಒತ್ತಡವನ್ನು ಹೇರೋಣ.

ಸಾವಿರಾರು ಲಕ್ಷ ಜನರು ಒಟ್ಟಾಗಿ ಒತ್ತಾಯಿಸೋಣ. ಈ ನಿವೇದನೆಯನ್ನು ಫೇಸ್ಬುಕ್, ವಾಟ್ಸಾಪ್, ಇಮೇಲ್ ಮೂಲಕ ಆದಷ್ಟು ಹೆಚ್ಚು ಜನರಿಗೆ ಹಂಚಿ ಅವರ ಸಹಿಯನ್ನು https://forms.gle/kypoVjpdtSrK6kEz8 ಈ ಕೊಂಡಿಯ ಮೂಲಕ ಪ್ರಧಾನಿಯವರಿಗೆ ರವಾನಿಸೋಣ.

[ಈ ನಿವೇದನೆಗೆ ಸಹಿ ಹಾಕಿದ ಮೊದಲಿಗರು: ದೇವನೂರು ಮಹಾದೇವ, ಜಸ್ಟಿಸ್ ಬಿ.ಜಿ. ಕೋಸ್ಲೆ ಪಾಟೀಲ್, ಅರುಣಾ ರಾಯ್, ಡಾ. ಜಿ.ಜಿ.ಪಾರಿಖ್, ಪ್ರೊ. ಅನಿಲ್ ಷಡಗೋಪನ್, ಪ್ರೊ. ವಿ.ವಾಸಂತಿ ದೇವಿ, ಪ್ರೊ. ಇಂದ್ರಾಣಿ ದತ್ತ, ಡಾ. ಇಮ್ರಾನಾ ಕದೀರ್, ಪ್ರೊ. ಆರ್. ರಾಮಾನುಜನ್, ಡಾ. ಪ್ಯಾರೆಲಾಲ್ ಗಾರ್ಗ್, ಡಾ. ಜಗ್ಮೋಹನ್ ಸಿಂಗ್, ನೀರಜ್ ಜೈನ್, ದುನು ರಾಯ್, ನಾಗೇಶ ಹೆಗಡೆ.]

ಅಗಾಧ ಅಸಮಾನತೆಯ ಕೆಲವು ಮುಖ್ಯಾಂಶಗಳು:* ಭಾರತದಲ್ಲಿ ಶತಕೋಟ್ಯಧೀಶರ ಸಂಖ್ಯೆ 119ಕ್ಕೆ ತಲುಪಿದೆ. ಇಪ್ಪತ್ತು ವರ್ಷಗಳ ಹಿಂದೆ ಇವರ ಸಂಖ್ಯೆ ಬರೀ 9 ಇತ್ತು.* ಈ ಶತಕೋಟ್ಯಧೀಶರ ಸಂಪತ್ತು ಕಳೆದ ಒಂದು ದಶಕದಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ. ಅವರ ಒಟ್ಟೂ ಸಂಪತ್ತು ದೇಶದ ವರ್ಷದ ಬಜೆಟ್ಟಿಗಿಂತ ಹೆಚ್ಚಿಗಿದೆ.* ಮೇಲಂತಸ್ತಿನ ಶೇಕಡಾ 10 ಜನರಲ್ಲಿ ಇಡೀ ದೇಶದ ಸಂಪತ್ತಿನ ಶೇ. 77 ಭಾಗ ಕೇಂದ್ರಿತವಾಗಿದೆ.* ದೇಶದ ಆರೂವರೆ ಕೋಟಿ ಕೆಳವರ್ಗಜನರು ಪ್ರತಿ ವರ್ಷ ಆಸ್ಪತ್ರೆ ಖರ್ಚಿಗೆ ಹಣ ವ್ಯಯಿಸಿಯೇ ಬಡತನದ ರೇಖೆಗಿಂತ ಕೆಳಕ್ಕೆ ಕುಸಿಯುತ್ತಾರೆ.* ನಮ್ಮ ದೇಶದ ಜವಳಿ ಉದ್ಯಮದ ಉನ್ನತಾಧಿಕಾರಿಯ ಒಂದು ವರ್ಷದ ಸಂಬಳದಷ್ಟೇ ಹಣವನ್ನು ಗಳಿಸಬೇಕೆಂದರೆ ಇಂದು ಕನಿಷ್ಠ ಕೂಲಿ ಪಡೆಯುವಾತ ಸತತ 941 ವರ್ಷ ದುಡಿಯಬೇಕಾಗುತ್ತದೆ.* ದೇಶದಲ್ಲಿನ ಅಸಮಾನತೆಯನ್ನು ತೊಡೆದು ಹಾಕಲು ಸರಕಾರ ಸದಾ ಶ್ರಮಿಸಬೇಕೆಂದು ಸಂವಿಧಾನದ 38ನೇ ಕಲಮಿನಲ್ಲಿ ಹೇಳಲಾಗಿದೆ.[ಫೇಸ್ಬುಕ್ ನಲ್ಲಿ ನೀರಜ್ ಜೈನ್ ಅವರ ನೇರ ನಿವೇದನೆಯ ಕನ್ನಡ ರೂಪಾಂತರ ಇದು. ಹಿಂದಿಯಲ್ಲಿ ಇವರ ಹಾಗೂ ರಾಮ್ ಪುನಿಯಾನಿ ನಿವೇದನೆಯ ಮೂಲ ಪ್ರಸಾರವನ್ನು ನೋಡಲು ಈ ಕೊಂಡಿಯನ್ನು ಕ್ಲಿಕ್ಕಿಸಿ: https://www.facebook.com/CoronaWealthTaxIndia/videos/225856995374637/ ] -ನಾಗೇಶ್ ಹೆಗಡೆ,ಬಕ್ಕೆಮನೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *