corona-effect-ತಾಯಿಯ ಶವ ಸ್ಫರ್ಶಕ್ಕೆ ಅಡ್ಡಿಯಾದ ಕರೋನಾ!

ಕರೋನಾ ಜಗತ್ತನ್ನು ಆತಂಕಕ್ಕೆ ದೂಡಿದೆ. ಕರೋನಾ ದಿಂದಾಗಿ ಅನೇಕ ಸಮಸ್ಯೆ, ರಗಳೆಗಳು ತಲೆದೋರುತ್ತಿವೆ. ಮಂಗಳವಾರ ಮುಂಡಗೋಡಿನಲ್ಲಿ ಮೃತರಾದ ಹಿರಿಯ ಮಹಿಳೆಯೊಬ್ಬರ ಶವಸಂಸ್ಕಾರಕ್ಕೆ ವಿಳಂಬವಾಗಿದ್ದಲ್ಲದೆ. ಆ ತಾಯಿಯ ಮಕ್ಕಳಿಗೇ ಶವವನ್ನು ಮುಟ್ಟಲು ಅವಕಾಶವಾಗದ ದುರಂತ ತಂದಿಡುವ ಮೂಲಕ ಕರೋನಾ ಈ ಕುಟುಂಬದ ಶಾಶ್ವತ ನೋವಿಗೆ ಕಾರಣವಾದ ವಿದ್ಯಮಾನ ನಡೆದಿದೆ.

ಮುಂಡಗೋಡಿನ ಇಂದಿರಾನಗರದ ಕೊಪ್ಪ ಗ್ರಾಮದಲ್ಲಿ ಸುಶೀಲಾ ಎನ್ನುವ 55 ವರ್ಷದ ಮಹಿಳೆ ಮೃತರಾಗಿದ್ದರು. ಅವರ ಮಕ್ಕಳು ಮುಂಬೈನಲ್ಲಿದ್ದ ಕಾರಣ ಇವರ ಶವವನ್ನು ಗುರುವಾರ ಬೆಳಿಗ್ಗೆ ದಹನ ಮಾಡಲಾಯಿತು. ಮಂಗಳವಾರ ನಿಧನರಾದ ಸುಶೀಲಾರ ಶವ ಎರಡು ದಿವಸಗಳ ವರೆಗೆ ಮನೆಯಲ್ಲಿರುವಂತೆ ಮಾಡಿದ್ದು ಕರೋನಾ. ಸುಶೀಲಾರ ಮಕ್ಕಳು ತಾಯಿಯ ನಿಧನದ ಸುದ್ದಿ ತಿಳಿದು ಬರಲು ಪ್ರಯತ್ನಿಸಿದರೂ ಕರೋನಾ ಕಾರಣಕ್ಕೆ ವಿಳಂಬವಾಯಿತು. ಸಕಲ ವ್ಯವಸ್ಥೆಗಳ ಜೊತೆ ವಿಳಂಬವಾಗಿ ಹುಟ್ಟೂರು ಪ್ರವೇಶಿಸಿದ ಮಕ್ಕಳಿಗೆ ಪಿ.ಪಿ.ಕಿಟ್ ತೊಡಸಲಾಗಿತ್ತು. ಮನೆಗೆ ಹೋದವರು ಸಂಬಂಧಿಗಳು, ಮೃತ ತಾಯಿಯ ಶವವನ್ನೂ ಮುಟ್ಟಬಾರದೆಂಬ ಷರತ್ತಿನ ಮೇಲೆ ಅವರಿಗೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಲಾಗಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಹೆತ್ತ ತಾಯಿಯ ಶವ ಮುಟ್ಟಲಾಗದ ಸಂಕಟದಲ್ಲಿ ಮುಂಜಾನೆ 3 ಗಂಟೆಗೆ ಅಂತ್ಯ ಸಂಸ್ಕಾರ ಮಾಡುವ ವೇಳೆ ಈ ನತದೃಷ್ಟ ಮಕ್ಕಳು ಗೋಳಾಡಿದರು. ಕರೋನಾ ಕಾರಣಕ್ಕೆ ಶವಸಂಸ್ಕಾರದ ವಿಳಂಬ, ಶವ ಮುಟ್ಟಲಾರದ ಮಕ್ಕಳ ರೋಧನ ಕರೋನಾದ ಭೀಕರತೆಯನ್ನು ಸಾರುವಂತಿತ್ತು ಎಂದು ಸ್ಥಳಿಯರು ಬೇಸರಿಸಿದ್ದಾರೆ. ಶವಸಂಸ್ಕಾರಕ್ಕೆ ಮುಂಬೈನಿಂದ ಬಂದ ಇಬ್ಬರೊಂದಿಗೆ ಒಟ್ಟೂ 5 ಜನರನ್ನು ಮುಂಡಗೋಡಿನಲ್ಲಿ ಇಂದು ಕಾರಂಟೈನ್ ಮಾಡಲಾಗಿದೆ.

2 ಜಿಲ್ಲೆಗಳ ಜನರ ತಲೆಬಿಸಿ ಹೆಚ್ಚಿಸಿದ ಹಳೆ ಸೊರಬ ಪ್ರಕರಣ! ಮದುವೆಗೆ ಹೋದವರ ಎದೆಯಲ್ಲಿ ಢವ-ಢವ

ಹಳೆ ಸೊರಬದ ಮಹಿಳೆಯೊಬ್ಬರಲ್ಲಿ ದೃಢಪಟ್ಟ ಕೋವಿಡ್ 19 ವೈರಸ್ ನಿಂದಾಗಿ ಎರಡು ಜಿಲ್ಲೆಗಳ ಕನಿಷ್ಟ 5-6 ತಾಲೂಕುಗಳ 500 ಕ್ಕೂಹೆಚ್ಚು ಜನರು ತಲೆಕೆಡಿಸಿಕೊಂಡ ವಿದ್ಯಮಾನ ವಿಳಂಬವಾಗಿ ಸುದ್ದಿಯಾಗಿದೆ.
ಹಳೆಸೊರಬದ ಮದುವೆಯೊಂದು ಸೊರಬ ಚಂದ್ರಗುತ್ತಿ ಬಳಿಯ ಮಣ್ಣತ್ತಿಯಲ್ಲಿ ಮೇ 13 ರಂದು ನಡೆದಿತ್ತು. ಆ ಮದುವೆಗೆ ಬಂದಿದ್ದರು ಎಂದು ಹೇಳಲಾದ ಮಹಿಳೆ ತನ್ನ ಹಿಂದಿನ ಹೃದಯಸಂಬಂಧಿ ಕಾಯಿಲೆ ಮತ್ತು ಉಸಿರಾಟದ ತೊಂದರೆ ಕಾರಣಕ್ಕೆ ಆಸ್ಫತ್ರೆಗೆ ತೆರಳಿದ್ದರು.

ಆಸ್ಫತ್ರೆಯಲ್ಲಿ ಹಿಂದಿನಂತೆ ಚಿಕಿತ್ಸೆ ಪಡೆದು ಮರಳಿ ಬಂದಿದ್ದ ಈ ಮಹಿಳೆಯ ಗಂಟಲುದೃವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದ ಆಸ್ಫತ್ರೆಯ ವೈದ್ಯರು ಸಿಬಂದಿಗಳಿಗೆ ಶಾಕ್ ಆಗಿದ್ದು ಈ ಮಹಿಳೆಯಲ್ಲಿ ಕರೋನಾ ದೃಢ ಪಟ್ಟಾಗ.
ಆಸ್ಫತ್ರೆಯ ವರದಿ, ತಾಲೂಕಾ ಆಡಳಿತದ ಮುತುವರ್ಜಿಯಿಂದ ಈ ಮಹಿಳೆಗೆ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ಆದರೆ ಈ ಪ್ರಕರಣ ಬೆಚ್ಚಿಬೀಳಿಸಿದ್ದು ಈ ಮಹಿಳೆ ಪಾಲ್ಗೊಂಡಿದ್ದ ಮದುವೆಗೆ ಬಂದ ಜನರನ್ನು. ಸರ್ಕಾರದ ಅನುಮತಿಯಿಂದ ಮದುವೆ ನಡೆಸಿದ್ದ ಮಣ್ಣತ್ತಿಯ ಕುಟುಂಬ ಹಿತೈಶಿಗಳು,ಆಪ್ತರನ್ನು ಆಹ್ವಾನಿಸಿತ್ತು. ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಪಾಲ್ಗೊಂಡಿದ್ದ ಮದುವೆಯ ಜನರು ಅಂದೇನೋ ಉಂಡು ಬಂದರು. ಆದರೆ ಫಜೀತಿ ಪ್ರಾರಂಭವಾಗಿದ್ದು ಈ ಕರೋನಾ ದೃಢವಾದ ವಿದ್ಯಮಾನದ ನಂತರ.
ಈ ಪ್ರಕರಣದ ಮದುವೆಯಲ್ಲಿ ಶಿರಸಿ, ಸಿದ್ಧಾಪುರ, ಸೊರಬ, ಸಾಗರ ಸೇರಿದಂತೆ ಎರಡ್ಮೂರು ಜಿಲ್ಲೆಗಳ ಕನಿಷ್ಟ 5-6 ತಾಲೂಕುಗಳ ಜನರು ಭಾಗವಹಿಸಿದ್ದರು. ಹೀಗೆ ಈ ಮದುವೆಯಲ್ಲಿ ಭಾಗವಹಿಸಿ ಅವರವರ ಮನೆಗಳಿಗೆ ತೆರಳಿದ್ದ ಅನೇಕರು ಈಗ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ.

ಈ ಮದುವೆಯ ವಧು-ವರ ಸೇರಿದಂತೆ ಕೆಲವು ಆಪ್ತರು ಸಾಂಸ್ಥಿಕ ಕಾರಂಟೈನ್ ಆಗಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಸಿಕ್ಕ ಅಧೀಕೃತ ಮಾಹಿತಿಯೆಂದರೆ….

ಹಳೆಸೊರಬದ ಮಹಿಳೆಯಲ್ಲಿ ಕೋವಿಡ್ ದೃಢಪಟ್ಟಿದ್ದು ಸತ್ಯ. ಆದರೆ ಈ ಮಹಿಳೆ ಮಣ್ಣತ್ತಿಯ ಮದುವೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಇವರ ಮಗ-ಸೊಸೆ ಮಣ್ಣತ್ತಿಯ ಮದುವೆಯಲ್ಲಿ ಪಾಲ್ಗೊಂಡಿದ್ದು ಅವರ ಗಮಟಲುದೃವಗಳ ಮಾದರಿಯಲ್ಲಿ ಕರೋನಾ ಸೋಂಕು ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರಾಥಮಿಕ ಮತ್ತು ಎರಡು, ಮೂರನೇ ಹಂತದ ಸಂಪರ್ಕಗಳನ್ನು ಬೇಧಿಸಲಾಗುತ್ತಿದೆ. ಈ ಕ್ಷಣದ ವರೆಗೆ ಹಳೆಸೊರಬದ ಪ್ರಕರಣದಿಂದ ಕರೋನಾ ಪ್ರಸರಣದ ಯಾವುದೇ ತೊಂದರೆ ಕಂಡುಬಂದಿಲ್ಲ. ಈ ಪ್ರಕರಣದ ಸಂಪರ್ಕದ ಮಣ್ಣತ್ತಿಯ ಮದುವೆಯಲ್ಲಿ ಪಾಲ್ಗೊಂಡವರಿಗೆ ಯಾವುದೇ ತೊಂದರೆ ಬಾಧಿಸುವ ಸಾಧ್ಯತೆ ಕಡಿಮೆ ಎನ್ನುವ ಮಾಹಿತಿಯನ್ನು ಶಿವಮೊಗ್ಗ ಜಿಲ್ಲಾಡಳಿತ ನೀಡಿದೆ. ಇಷ್ಟರಲ್ಲೇ ಈ ಪ್ರಕರಣದ ಸಂಬಂಧಿತರ ಸಾಂಸ್ಥಿಕ ಮತು ಹೋಮ್ ಕಾರಂಟೈನ್ ಅವಧಿಗಳೂ ಮುಕ್ತಾಯದ ಹಂತದಲ್ಲಿವೆ. ಈ ಮಾಹಿತಿ ಆಧರಿಸಿ ಮಣ್ಣತ್ತಿ ಮದುವೆಗೆ ತೆರಳಿದ್ದ 2-3 ಜಿಲ್ಲೆಗಳ ಜನರು ನಿಟ್ಟುಸಿರು ಬಿಡುವಂತಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *