

ವಿಧಾನ ಪರಿಷತ್ ಚುನಾವಣಾ ಕಣದಲ್ಲಿದ್ದ ಏಳೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ಸೋಮವಾರ ಘೋಷಿಸಿದ್ದಾರೆ.
ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಕಣದಲ್ಲಿದ್ದ ಏಳೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಶಾಲಾಕ್ಷಿ ಸೋಮವಾರ ಘೋಷಿಸಿದ್ದಾರೆ.
ಜೂನ್ 30 ರಂದು ನಿವೃತ್ತರಾಗಲಿರುವ ವಿಧಾನ ಪರಿಷತ್‍ನ ಏಳು ಸದಸ್ಯರ ಸ್ಥಾನಗಳನ್ನು ತುಂಬಲು ಜೂನ್ 29 ರಂದು ವಿಧಾನಪರಿಷತ್ ನ ದೈವಾರ್ಷಿಕ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿತ್ತು.
ಅದರಂತೆ ಜೂನ್ 11 ರಿಂದ 18ರವರೆಗೆ ನಾಮಪತ್ರಗಳನ್ನು ಸ್ವೀಕರಿಸಿದ್ದು ಒಟ್ಟು 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಜೂನ್ 19 ರಂದು ನಡೆದ ನಾಮಪತ್ರಗಳನ್ನು ಪರಿಶೀಲನೆಯಲ್ಲಿ 9 ಅಭ್ಯರ್ಥಿಗಳ ಪೈಕಿ 2 ಅಭ್ಯರ್ಥಿಗಳ ನಾಮಪತ್ರಗಳು ಸೂಚಕರ ಸಹಿ ಹೊಂದಿಲ್ಲದ ಕಾರಣದಿಂದ ತಿರಸ್ಕೃತಗೊಂಡಿದ್ದವು. ಉಳಿದ ಏಳು ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಅಂಗೀಕರಿಸಲ್ಪಟ್ಟಿದ್ದವು.
ನಾಮಪತ್ರಗಳನ್ನು ಹಿಂತೆದುಕೊಳ್ಳಲು ಸೋಮವಾರ ಕೊನೆಯ ದಿನಾಂಕವಾಗಿದ್ದು, ಏಳು ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ನಾಮಪತ್ರವನ್ನು ಹಿಂಪಡೆದಿಲ್ಲ. ಭರ್ತಿ ಮಾಡಬೇಕಾದ ಏಳು ವಿಧಾನ ಪರಿಷತ್ತಿನ ಸ್ಥಾನಗಳಿಗೆ ಏಳು ಅಭ್ಯರ್ಥಿಗಳಷ್ಟೇ ಕಣದಲ್ಲಿರುವುದರಿಂದ ಬಿಜೆಪಿಯ ಎಂಟಿಬಿ ನಾಗರಾಜು, ಪ್ರತಾಪ್ ಸಿಂಹ ನಾಯಕ್, ಕೆ , ಆರ್. ಶಂಕರ್, ಸುನೀಲ್ ವಲ್ಯಾಪುರ ಕಾಂಗ್ರೆಸ್ ಪಕ್ಷದ ನಸೀರ್ ಅಹ್ಮದ್, ಬಿ.ಕೆ. ಹರಿಪ್ರಸಾದ್ ಹಾಗೂ ಜಾತ್ಯತೀತ ಜನತಾದಳದ ಗೋವಿಂದರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿಶಾಲಾಕ್ಷಿ ಘೋಷಿಸಿದ್ದಾರೆ.
nk corona today-
ಸಿದ್ಧಾಪುರ ಯಲ್ಲಾಪುರ, ಜೊಯಡಾ, ಹೊನ್ನಾವರಗಳಲ್ಲಿ ಒಂದೊಂದು ಪ್ರಕರಣ
ಯಲ್ಲಾಪುರದ ಕಂಡಕ್ಟರ್ ನಿಂದ ಜಿಲ್ಲೆಯ ಜನರಿಗೆ ಆತಂಕ
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟೂ 5 ಜನರಲ್ಲಿ ಕೋವಿಡ್ 19 ದೃಢಪಟ್ಟಿದ್ದು ಯಲ್ಲಾಪುರದ ಇಬ್ಬರು,ಜೊಯಡಾ, ಹೊನ್ನಾವರ,ಸಿದ್ಧಾಪುರ ರ ತಲಾ ಒಬ್ಬೊಬ್ಬರಲ್ಲಿ ಕರೋನಾ ದೃಢ ಪಟ್ಟ ಸುದ್ದಿ ವರದಿಯಾಗಿದೆ..
ಯಲ್ಲಾಪುರದ ಕಂಡಕ್ಟರ್ ಜೂನ್ 11 ರಂದು ಯಲ್ಲಾಪುರದಿಂದ ಬೆಂಗಳೂರು ಬಸ್ ನಲ್ಲಿ ತೆರಳಿ ನಂತರ ಜೂನ್ 13 ರಂದು ಯಲ್ಲಾಪುರಕ್ಕೆ ಮರಳಿದ್ದರು. ಈತ ತೆರಳಿದ್ದ ಬಸ್ ಸಂಖ್ಯೆ ಕೆ.ಎ.31ಎಫ್-1577 ಸಂಖ್ಯೆಯ ಬಸ್ ನಲ್ಲಿ ಪ್ರಯಾಣಿಸಿದವರು ಸಂಬಂಧಿಸಿದ ತಾಲೂಕಾ ಆಸ್ಫತ್ರೆ, ಪೊಲೀಸ್ ಠಾಣೆ ಮೂಲಕ ಪರೀಕ್ಷೆಗೆ ಒಳಪಡಬೇಕಿದೆ. ………. ಓದಿ samajamukhi.net https://samajamukhi.net/2020/06/22/nk-corona-today/?
