ಟೇಲರ್ ಗಳಿಗೂ ಪಿಂಚಣಿ ನೀಡಲು ಆಗ್ರಹ

ಸಿದ್ಧಾಪುರ ಇಂದು-
ಸಿದ್ದಾಪುರ: ಕೊರೋನಾ ಸಂದರ್ಭದಲ್ಲಿ ಲಾಕ್‍ಡೌನ್ ನಿಂದಾಗಿ ಅನೇಕ ಕಾರ್ಮಿಕರು ಕೆಲಸವಿಲ್ಲದೆಜೀವನ ನಿರ್ವಹಣೆ, ಕುಟುಂಬ ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಿದ್ದ ಸಮಯದಲ್ಲಿ ಟೈಲರ್‍ಗಳು ಸಹ ತೊಂದರೆಯಲ್ಲಿ ಸಿಲುಕಿದ್ದರು. ಅಂತೆಯೇಇತ್ತೀಚಿಗೆ ಟೈಲರ್‍ಗಳಿಗೆ ಕಾರ್ಮಿಕಇಲಾಖೆಯಿಂದ ದಿನ ನಿತ್ಯದಆಹಾರ ಸಾಮಗ್ರಿಗಳ ಕಿಟ್ಟ್ ವಿತರಿಸಲಾಯಿತು.
ಈ ಅನುಕೂಲ ಪಡೆದ ಟೈಲರ್ ಗಳು ‘ನಮ್ಮನ್ನು ಗುರುತಿಸಿ ಕಿಟ್ಟ್ ವಿತರಸಿ ನಮ್ಮ ಕಷ್ಟಕ್ಕೆ ಸ್ಪಂದಿಸಿದ ಇಲಾಖೆಗೆ, ಜನಪ್ರತಿನಿಧಿಗಳಿಗೆ ಕೃತಜ್ಞತೆ ಎಂದು ತಾಲೂಕಾಟೈಲರ್ ಅಸೋಸಿಯೆಷನ್ ಅಧ್ಯಕ್ಷಅಣ್ಣಪ್ಪ ನಾಯ್ಕ ಹಣಜಿಬೈಲ್, ಪ್ರಧಾನ ಕಾರ್ಯದರ್ಶಿ ಎಚ್.ಟಿ.ವಾಸುಕಡಕೇರಿಅಭಿನಂದನೆ ಸಲ್ಲಿಸಿದರು.
ಕೊರೋನಾ ಭೀತಿಯಲ್ಲಿಜನರು ಬಟ್ಟೆ ಹೊಲಿಯಲಿಕ್ಕೆಕೊಡುವುದನ್ನುಕಡಿಮೆ ಮಾಡಿದ್ದಾರೆ. ಮದುವೆ, ಹಬ್ಬ ಮುಂತಾದ ಕಾರ್ಯಕ್ರಮಗಳು ಕಡಿಮೆಯಾಗಿರುವುದರಿಂದ ಹೊಲಿಗೆಯನ್ನೇ ನಂಬಿಕೊಂಡಿರುವನಮ್ಮ ಮುಂದಿನ ಜೀವನಕಷ್ಟವಾಗಿದೆ. ನಮ್ಮನ್ನುಕಾರ್ಮಿಕರೆಂದು ಪರಿಗಣಿಸಿ ಪಿಂಚಣಿ ನೀಡಿನಮ್ಮ ಮುಂದಿನ ಜೀವನ ನಿರ್ವಹಣೆಗೆ ಅನುಕೂಲಮಾಡಿಕೊಡಬೇಕೆಂದು ಈ ಮೂಲಕ ಅವರು ಮನವಿ ಮಾಡಿದ್ದಾರೆ.

ಕಲಾವಿದ ಭೀಮರಾಜ್ ಹೆಗಡೆ ನಿಧನ
ಸಿದ್ದಾಪುರ-: ಕಾಡು ಚಲನಚಿತ್ರ ಕಲಾವಿದ, ಯಕ್ಷಗಾನ ನಟ, ನಾಟಕ ಕಲಾವಿದ, ಸಾಮಾಜಿಕ ಕಾರ್ಯಕರ್ತ, ಹಣಜೀಬೈಲದ ಭೀಮರಾಜ್ ಹೆಗಡೆ ಅವರ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಅವರು ಅಮೃತೇಶ್ವರಿ ಯಕ್ಷಗಾನ ಮೇಳದಲ್ಲಿ ಕಲಾವಿದರಾಗಿ ಯಕ್ಷನಟರೂ ಸಹ ಆಗಿದ್ದರು. ನಾಟಕ ಮಂಡಳಿಗಳಲ್ಲಿ ಕಲಾವಿದರಾಗಿ ಸೇವೆ ನೀಡಿದ್ದರು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರೂ ಸಹ ಆಗಿದ್ದರು.
ಮಹಾಗಣಪತಿ ವಿದ್ಯಾವರ್ಧಕ ಸಂಘ ಹಾಳದಕಟ್ಟಾದ ಅಧ್ಯಕ್ಷರಾಗಿ ಸಂಸ್ಕೃತ ವಿದ್ಯಾ ಪ್ರಸಾರಕ್ಕಾಗಿ ಶ್ರಮಿಸುತ್ತಿದ್ದರು. ಶಿರಳಗಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ 2 ಬಾರಿ ಕೆಲಸ ನಿರ್ವಹಿಸಿದ ಹಿರಿಯ ಸಾಮಾಜಿಕ ಕಾರ್ಯಕರ್ತ. ಸ್ವಾತಂತ್ರ್ಯ ಯೋಧ ಹಣಜೀಬೈಲು ಸಣ್ಣಪ್ಪ ಹೆಗಡೆ ಅವರ ಪುತ್ರರಾಗಿದ್ದರು.
ಶಿರಸಿಯ ಕೆ.ಪಿ.ಟಿ.ಸಿ.ಎಲ್. ನೌಕರರ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕ ಅಕ್ಷರಕುಮಾರ್ ಹೆಗಡೆ ಅವರನ್ನು ಒಳಗೊಂಡು 2 ಜನ ಗಂಡು, 2 ಹೆಣ್ಣು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಶೋಕ : ಭೀಮರಾಜ್ ಹೆಗಡೆ ಹಣಜೀಬೈಲ್ ಅವರ ನಿಧನ ಪ್ರಯುಕ್ತ ಸಿದ್ದಾಪುರ ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಡಾ|| ಕೆ. ಶ್ರೀಧರ ವೈದ್ಯ, ಯಕ್ಷಭಾಗವತ ಕೇಶವ ಹೆಗಡೆ ಕೊಳಗಿ, ಜಿ.ಜಿ. ಹೆಗಡೆ ಬಾಳಗೋಡ ಮುಂತಾದವರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಶಾಂತಿ ಕೋರಿದರು.

ನುಡಿನಮನ-

ಇತ್ತೀಚೆಗೆ ನಿಧನರಾದ ಉಪನ್ಯಾಸಕ ಹಸ್ವಂತೆ ಎಲ್.ಎಂ. ನಾಯ್ಕರಿಗೆ ನುಡಿನಮನ ಕಾರ್ಯಕ್ರಮ ಇಲ್ಲಿಯ ಲಯನ್ಸ್ ಬಾಲಭವನದಲ್ಲಿ ನಡೆಯಿತು.
ಎಲ್.ಎಂ.ನಾಯ್ಕ ಮಹಾತ್ವಾಕಾಂಕ್ಷಿ,ಜನಪರ ವ್ಯಕ್ತಿಯಾಗಿ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದರು ಎಂದು ಈ ಸಂತಾಪ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ವೀರಭದ್ರನಾಯ್ಕ ಸ್ಮರಿಸಿದರು.
ನಾಯ್ಕರಿಗೆ ನುಡಿನಮನ ಸಲ್ಲಿಸಿದ ಕನ್ನೇಶ್ ಕೋಲಶಿರ್ಸಿ ಮಾತನಾಡಿ ದಶಕಗಳ ಕಾಲ ಅರೆಕಾಲಿಕ, ಹಂಗಾಮಿ ನೌಕರರಾಗಿ ಆತ್ಮವಿಶ್ವಾಸದಿಂದಿರುವುದು ಕಷ್ಟ. ಆದರೆ ಎಲ್.ಎಂ. ನಾಯ್ಕ ಎಲ್ಲಾ ಅನಿಶ್ಚಿತತೆ, ಅಭದ್ರತೆಗಳ ನಡುವೆ ಕೂಡಾ ಸ್ವಾಭಿಮಾನಿಯಾಗಿ ಮಾದರಿಯಾಗಿದ್ದರು ಎಂದರು.
ಸಂತಾಪ ಸಭೆಯ ಸಂಘಟಕರೂ ನಾಯ್ಕರ ಆತ್ಮೀಯರೂ ಆಗಿದ್ದ ರತ್ನಾಕರ ನಾಯ್ಕ, ಎನ್.ಟಿ.ನಾಯ್ಕ, ದಿವಾಕರ ಮಂಡಗಳೆ ಮತ್ತು ದಿವಾಕರ ನಾಯ್ಕ ಹಸ್ವಂತೆ ಅವರ ಸ್ನೇಹದ ನೆನಪುಗಳನ್ನು ಮೆಲುಕು ಹಾಕಿದರು.
ಸಹಪಾಠಿಗಳಾಗಿದ್ದ ಜಿ.ಕೆ.ನಾಯ್ಕ ತಮ್ಮ ಬಾಂಧವ್ಯದ ಬಗ್ಗೆ ಹೇಳಿದರು, ರುಜಾರಿಯೋ,ಕಮಲಾಕರ ಭಂಡಾರಿ ಸೇರಿದಂತೆ ಕೆಲವರು ಎಲ್.ಎಂ.ನಾಯ್ಕರಿಗೆ ನುಡಿನಮನ ಸಲ್ಲಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,ಸಿದ್ದಾಪುರ(ಉ.ಕ)
ದಿನಾಂಕ : 24-06-2020ರ ಸಿದ್ದಾಪುರ ಪೇಟೆ ಧಾರಣೆ
ಅ.ನಂ. ಹುಟ್ಟುವಳಿಯ ಹೆಸರು ಧಾರಣೆಗಳು (ಪ್ರತಿ ಕ್ವಿಂಟಲ್ಲಿಗೆ)
ಕನಿಷ್ಠ ಗರಿಷ್ಠ ಮಾದರಿ
1 ರಾಶಿ 32899 36889 33899
2 ತಟ್ಟಿಬೆಟ್ಟೆ 22699 29899 26099
3 ಕೆಂಪಗೋಟು 19899 21689 21089
4 ಬಿಳಿಗೋಟು 17899 25308 23789
5 ಚಾಲಿ 27369 31422 30899
7 ಕೋಕಾ 13399 20199 18299
8 ಕಾಳುಮೆಣಸು 29799 29989 29899

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *