g.n. nagraj writes-ಆಕ್ರಮಣ , ಭೂದಾಹ. ಗುಲಾಮರ ದಾಹ- ಹರಾಜ್ ! ಇವಳ ಮೊಲೆಗಳ ಸೊಬಗು ! ಇವನ ರೆಟ್ಟೆಯ ಗಟ್ಟಿತನ !! ನೋಡಿ ಕೊಳ್ಳಿ ಹರಾಜ್ ಹರಾಜ್

ದುಂಡನೆಯ ತಿರುಗು ವೇದಿಕೆಗಳು. ಸುತ್ತಲೂ ತಿರುಗುತ್ತಿವೆ. ವೇದಿಕೆಗಳ ಮೇಲೆ ಬೆಳ್ಳ‌ನೆಯ ಬೆತ್ತಲೆ ಯುವಕರು,ಯುವತಿಯರನ್ನು ನಿಲ್ಲಿಸಲಾಗಿದೆ. ಅವರ ದೇಹಸಿರಿಯನ್ನು ಎಲ್ಲ ಕೋನಗಳಿಂದ ತೋರಿಸುತ್ತಿದೆ.
ಈ ವೇದಿಕೆಗಳ ಮುಂದೆ ಹರಾಜುಗಾರರು ಕೂಗುತ್ತಿದ್ದಾರೆ. ಇವಳ ಮೊಲೆಯ ಸೊಬಗು ನೋಡಿ, ದುಂಡನೆಯ ನಿತಂಬಗಳ ಸೌಂದರ್ಯ ನೋಡಿ ! ಬನ್ನಿ ಕೊಳ್ಳಿ !! ಬೇಕಾದರೆ ಮುಟ್ಟಿ ನೋಡಿ , ಹಿಸುಕಿ ನೋಡಿ ! ಇನ್ನೂ ಹದಿನಾರರ ಯುವತಿ. ಬನ್ನಿ ಹಲ್ಲು ಎಣಿಸಿ ನೋಡಿ ಖಚಿತ ಮಾಡಿಕೊಂಡು ಕೊಂಡುಕೊಳ್ಳಿ .

ಮತ್ತೊಂದು ವೇದಿಕೆಯ ಮುಂದೆ ಮತ್ತೊಬ್ಬ ಕಿರುಚುತ್ತಿದ್ದಾನೆ : ಇವನ ರೆಟ್ಟೆಯ ಗಟ್ಟಿತನ ನೋಡಿ . ಮೈಯ ಕಸುವು ನೋಡಿ ಎಂತಹಾ ಕಷ್ಟದ ಕೆಲಸವನ್ನೂ ಮಾಡಬಲ್ಲ! ಬನ್ನಿ ಕೊಳ್ಳಿ.
ಇದೊಂದು ರೋಮ್ ಸಾಮ್ರಾಜ್ಯದ ಗುಲಾಮರ ಹರಾಜು ಮಾರುಕಟ್ಟೆ . ಕೊಳ್ಳಲೆಂದು ಇಟಲಿಯ ಉದ್ದಗಲದ ದ್ರಾಕ್ಷಿ ತೋಟಗಳ‌ ಮಾಲೀಕರು, ತಾಮ್ರ, ಬೆಳ್ಳಿ ಗಣಿಗಳ ಮಾಲೀಕರು, ನಗರಗಳ ಶ್ರೀಮಂತ ಅಧಿಕಾರಿಗಳು, ವ್ಯಾಪಾರಿಗಳು , ಹಡಗುಗಳ ಮಾಲೀಕರು ಮೊದಲಾದವರೆಲ್ಲಾ ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು. ಎಲ್ಲಿ ನೋಡಿದರೂ ಗುಜು ಗುಜು ಗುಂಪಲು. ಕೂಗಾಟಗಳು.

ಇಂತಹ ನೂರಾರು ಹರಾಜು‌ ಮಾರುಕಟ್ಟೆಗಳಿದ್ದವು ರೋಮನ್ ಸಾಮ್ರಾಜ್ಯದಲ್ಲಿ. ರೋಮ್ ಇರುವ ಇಟಲಿ ಪ್ರದೇಶದಲ್ಲಿ ಮಾತ್ರವೇ ಅಲ್ಲ, ಅಂದು ಅವರ ಸಾಮ್ರಾಜ್ಯಕ್ಕೆ ಸೇರಿದ ಈಜಿಪ್ಟ್, ಅಲೆಕ್ಸಾಂಡ್ರಿಯ, ಮೆಸಪೊಟೋಮಿಯಾ, ಬಾಬಿಲೋನಿಯಾ, ಪರ್ಷಿಯ ಮೊದಲಾದ‌ ಪ್ರದೇಶಗಳಲ್ಲಿ ಕೂಡಾ. ಪ್ರತಿ ವರ್ಷ ಲಕ್ಷಾಂತರ ಗುಲಾಮರ ಬಿಕರಿಯಾಗುತ್ತಿದ್ದವು ಇಂತಹ ಮಾರುಕಟ್ಟೆಗಳಲ್ಲಿ. ಈ ಗುಲಾಮರು ಅಮೇರಿಕಾ ಖಂಡಗಳಲ್ಲಿದ್ದಂತೆ ಆಫ್ರಿಕಾ ಖಂಡದ ಕರಿಯ ನೀಗ್ರೋ ಜನಾಂಗದವರಲ್ಲ. ಬಹು ಮಟ್ಟಿಗೆ ಇಂದಿನ ಜರ್ಮನಿ, ಫ್ರಾನ್ಸ್, ಪೋಲೆಂಡ್ ರುಮಾನಿಯಾ ಮೊದಲಾದ ಪ್ರದೇಶಗಳ ‌ಬಿಳಿಯರೇ . ಪಶ್ಚಿಮ ಏಷ್ಯಾದ ಇರಾಕ್, ಸಿರಿಯಾ,ಇರಾನ್,ತುರ್ಕಿ‌ ಮೊದಲಾದ ದೇಶಗಳವರು ಕೆಲವರು.

ಇವರು ಗುಲಾಮರಾಗಿ ಇಲ್ಲಿ ಹರಾಜುಗೊಳ್ಳಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅಂದು ರೋಮಿನ ಬಲವಾದ ಸೈನ್ಯ ಸುತ್ತ ಮುತ್ತಲಿನ ಯುರೋಪಿನ ಪ್ರದೇಶಗಳಲ್ಲಿ ಇನ್ನೂ ಬುಡಕಟ್ಟು ಜೀವನ ನಡೆಸುತ್ತಿದ್ದವರ ಮೇಲೆ ಧಾಳಿ ಮಾಡಿ ಅವರ ಪ್ರದೇಶಗಳನ್ನು ಆಕ್ರಮಿಸುತ್ತಿತ್ತು ಮಾತ್ರವಲ್ಲ ಅಲ್ಲಿನ‌ ಜನರನ್ನು ಸೆರೆ ಹಿಡಿದು ತಂದು ಗುಲಾಮರನ್ನಾಗಿ ಮಾಡಿ ಮಾರಾಟಕ್ಕಿಡುತ್ತಿತ್ತು. ಹಾಗೆಯೇ ಈಜಿಪ್ಟ್ ಮೊದಲಾದ ದೇಶಗಳ ಮೇಲೆ ದಂಡೆತ್ತಿ ಹೋದಾಗಲೂ ಅಲ್ಲಿಯ ಜನ ಸಾಮಾನ್ಯರನ್ನು ಗುಲಾಮರನ್ನಾಗಿ ಮಾರಲು ಹಿಡಿತರುವುದು ಸಾಮಾನ್ಯವಾಗಿತ್ತು. ರೋಮನ್ ಸೈನ್ಯ ಆಕ್ರಮಣಕ್ಕೆ ಹೊರಟಿತೆಂದರೆ ಅದರ ಹಿಂದೆ ಗುಲಾಮರ ವ್ಯಾಪಾರಿಗಳ ದಂಡೇ ಹಿಂಬಾಲಿಸುತ್ತಿತ್ತು. ಸೈನ್ಯ ಆಕ್ರಮಣದಲ್ಲಿ ವಿಜಯಿಯಾದ ಕೂಡಲೇ ಹಿಡಿದ ಸಾವಿರಾರು ಜನ ಗಂಡು, ಹೆಣ್ಣುಗಳನ್ನು ಸೇನಾಧಿಪತಿಗಳಿಗೆ ಹಣ ತೆತ್ತು ಈ ಸಗಟು‌ ವ್ಯಾಪಾರಿಗಳು ಕೊಳ್ಳುತ್ತಿದ್ದರು. ಅವರನ್ನು ಗುಲಾಮರ ಮಾರುಕಟ್ಟೆಗಳ ಚಿಲ್ಲರೆ ವ್ಯಾಪಾರಿಗಳಿಗೆ ಮಾರುತ್ತಿದ್ದರು. ಪ್ರಸಿದ್ಧ ರೋಮನ್ ಚಕ್ರವರ್ತಿ ಜ್ಯೂಲಿಯಸ್ ಸೀಜರ್ ಇಂದಿನ‌ ಜರ್ಮನಿ , ಫ್ರಾನ್ಸ್ ,ಸ್ವಿಟ್ಜರ್ಲೆಂಡ್‌‌, ನೆದರ್‌ಲ್ಯಾಂಡ್ಸ್ ಮೊದಲಾದ ದೇಶಗಳನ್ನೊಳಂಡ ಗಾಲ್ ಪ್ರದೇಶದ ಒಂದು ಭಾಗವನ್ನು ಆಕ್ರಮಿಸಿದಾಗ ಅಲ್ಲಿ ವಾಸಿಸುತ್ತಿದ್ದ ಎಲ್ಲ 53,000 ಜನರನ್ನೂ ಗುಲಾಮರನ್ನಾಗಿ ಅಲ್ಲಿಯೇ ಮಾರಿ ತನ್ನ ಸೈನಿಕರನ್ನು ನಿಯೋಜಿಸಿ ಅವರನ್ನು ರೋಮಿಗೆ ಎಳೆದು ತರಿಸಿದನಂತೆ. ಕಾರ್ಥೇಜ್ ಎನ್ನುವ ದೊಡ್ಡ ನಗರವನ್ನು ಆಕ್ರಮಿಸಿದಾಗ ಅದನ್ನು‌ಲೂಟಿ‌ ಮಾಡಿ ಅಲ್ಲಿಯ ಪ್ರತಿಷ್ಠಿತರನ್ನೂ ಸೇರಿಸಿ 50,000 ಜನರನ್ನು ಗುಲಾಮರನ್ನಾಗಿ ಹಿಡಿತರಲಾಯಿತು. ಮತ್ತೆ ಒಂದು ಆಕ್ರಮಣದಲ್ಲಿಯೇ 1.50,000 ಜನರನ್ನು ಗುಲಾಮರನ್ನಾಗಿ ಮಾರಲಾಯಿತು. ಡೆಲೋಸ್ ಎಂಬ ದ್ವೀಪದಲ್ಲಿದ್ದ ಗುಲಾಮರ ಮಾರುಕಟ್ಟೆಯಲ್ಲಿ ದಿನವೊಂದಕ್ಕೆ 10,000 ಗುಲಾಮರನ್ನು ಮಾರಲಾಗುತ್ತಿತ್ತು ಎಂದರೆ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗುಲಾಮರ ಮೇಲೆ ಅಲ್ಲಿನ‌ ಸಂಪತ್ತು ಆಧಾರಪಟ್ಟಿತ್ತು ಎಂಬುದನ್ನು ಊಹಿಸಿಕೊಳ್ಳಿ.

ರೋಮನ್ ಶ್ರೀಮಂತರ,ಚಕ್ರವರ್ತಿ, ಮನ್ನೆಯರ ವೈಭವದ ಜೀವನಕ್ಕೆ ಇಡೀ ರೋಮ್ ಚಕ್ರಾಧಿಪತ್ಯದ ಆರ್ಥಿಕ ಸುಸ್ಥಿತಿಗೆ ಇದೊಂದು ಪ್ರಮುಖ ಆಧಾರವಾಗಿತ್ತು. ರೋಮ್ ಸುತ್ತಲಿನ ಇಟಲಿ ಪ್ರದೇಶದಲ್ಲಿ ಶೇ30-40 ರವರೆಗೆ ಗುಲಾಮರಿದ್ದರೆಂದು ಒಂದು ಅಂದಾಜಿದೆ.
ಈ ಗುಲಾಮರನ್ನು ಅತ್ಯಂತ ಅಪಾಯಕಾರಿಯಾದ ಮತ್ತು ಕಠಿಣವಾದ ಕೆಲಸಗಳಲ್ಲಿ ದುಡಿಸಲಾಗುತ್ತಿತ್ರು. ಗಣಿ ಕೆಲಸ ಅಂತಹದೊಂದು. ಅಮೃತಶಿಲೆಯ ಗಣಿಗಳು, ಬೆಳ್ಳಿಯ ಗಣಿಗಳು ಸಾವಿನಂಚಿನಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸಗಳಾಗಿದ್ದವು. ಭಾರವಾದ ಕಲ್ಲುಗಳ ದೊಡ್ಡ ತುಂಡುಗಳನ್ನು ಕೆಳಗಿನಿಂದ ಮೇಲಕ್ಕೆ, ದೂರ ದೂರಕ್ಕೆ ಒಯ್ಯುವುದು ಬಹಳ ಅಪಾಯಕಾರಿಯಾಗಿತ್ತು. ಕಾಡೇ‌‌ ಪ್ರಧಾನವಾಗಿದ್ದ ಆ ದಿನಗಳಲ್ಲಿ ಬೆಟ್ಟ ಗುಡ್ಡಗಳ‌ ನಡುವೆ ಹೆದ್ದಾರಿಗಳ ನಿರ್ಮಾಣ, ನೀರಾವರಿ ಕಾಲುವೆಗಳು,ಅಣೆಕಟ್ಟುಗಳು ಇವುಗಳ ನಿರ್ಮಾಣ, ಬೃಹತ್ ಕಟ್ಟಡಗಳ ನಿರ್ಮಾಣಗಳಲ್ಲಿ‌, ಕೃಷಿಯಲ್ಲಿ, ದ್ರಾಕ್ಷಿ ತೋಟಗಳು, ಅದರಿಂದ ವೈನ್ ತಯಾರಿಕೆಯಲ್ಲಿ ಗುಲಾಮರನ್ನು ಬಳಸಿಕೊಳ್ಳಲಾಗುತ್ತಿತ್ತು. ಅಲ್ಲಿಯ ಕೃಷಿ ಎಂದರೆ ಗುಲಾಮರ ಕೃಷಿ ಎಂಬಂತಾಗಿತ್ತು.

ಅಕ್ಷರ ಬಲ್ಲವರೂ ಗುಲಾಮರಾಗಿದ್ದರು. ರೋಮಿನ ಸರ್ಕಾರ ಅಧಿಕಾರಿಗಳ ಸಹಾಯಕರಾಗಿ, ಸಂಗೀತ, ನೃತ್ಯಗಳಲ್ಲಿ ಅವರನ್ನು ಬಳಸಿಕೊಳ್ಳಲಾಗುತ್ತಿತ್ತು. ದೊಡ್ಡ ಪ್ರತಿಷ್ಠಿತರ ಬಂಗಲೆಗಳಲ್ಲಿ ನೂರಕ್ಕೂ ಹೆಚ್ಚು ಗುಲಾಮರು ಕೆಲಸ ಮಾಡುತ್ತಿದ್ದರು.
ಗುಲಾಮರುಗಳನ್ನು ಹಗಲಿರುಳೂ ದುಡಿಸಿಕೊಳ್ಳಲಾಗುತ್ತಿತ್ತು. ಅತಿ ದುಡಿಮೆಯಿಂದ ಸುಸ್ತಾಗಿ ಕೆಳಗೆ ಬಿದ್ದರೆ ಉಸ್ತುವಾರಿ ಮಾಡುತ್ತಿದ್ದವರ ಚಾಟಿಯೇಟು ಅವರ ಬರಿ ಮೈಮೇಲೆ ಬರೆ ಎಳೆಯುತ್ತಿತ್ತು. ಕೆಲಸ ಮಾಡುವ ಸ್ಥಳಗಳಲ್ಲಿ ಅವರನ್ನು ದಪ್ಪ ಸರಪಳಿಗಳಿಂದ ಕಟ್ಟಿ ಹಾಕಲಾಗುತ್ತಿತ್ತು. ಅವರಿಗೆ ಅತ್ಯಂತ ಕನಿಷ್ಟ ಮಟ್ಟದ ಆಹಾರ ಬಿಟ್ಟರೆ ಬೇರೇನೂ ಸಿಗುತ್ತಿರಲಿಲ್ಲ. ಗುಲಾಮರಿಗೆ ಸ್ವಂತದ್ದು ಎನ್ನುವುದೇನು ಇರಲಿಲ್ಲ. ಅಕಸ್ಮಾತ್ ಅ‌ವರೇನಾದರು ಸಂಪಾದಿಸಿದರೆ ಅದೆಲ್ಲಾ ಅವರ ಮಾಲೀಕನಿಗೆ ಸೇರುತ್ತಿತ್ತು. ಹೆಣ್ಣು ಗುಲಾಮರು ದುಡಿಮೆಯ ಜೊತೆಗೆ ಲೈಂಗಿಕ‌ ದೌರ್ಜನ್ಯಗಳಿಗೆ ಈಡಾಗುತ್ತಿದ್ದರು.ಅವರನ್ನು ವೇಶ್ಯಾವಾಟಿಕೆಗಳಲ್ಲಿ‌ ದುಡಿಸಿಕೊಳ್ಳಲಾಗುತ್ತಿತ್ತು .

ಇಂತಹ ದುರ್ಭರ ಪರಿಸ್ಥಿತಿಯಲ್ಲಿ ಗುಲಾಮರುಗಳು ಓಡಿ ಹೋಗಲು ಯತ್ನ‌ಮಾಡಿದರೆ ಮತ್ತೆ ಅಟ್ಟಿಸಿಕೊಂಡು ಹೋಗಿ ಅವರನ್ನು ಸೆರೆ ಹಿಡಿದು ತರಲಾಗುತ್ತಿತ್ತು. ಅವರ ಹಣೆಯ ಮೇಲೆ ಕಾದ ಕಬ್ಬಿಣದಿಂದ ಬರೆ ಎಳೆದು ಅವರು ಗುಲಾಮರು ಎಂಬುದನ್ನು ಹಾಗೂ ಮಾಲೀಕರ ಹೆಸರನ್ನು ಕೆತ್ತಲಾಗುತ್ತಿತ್ತು.
ಮಾನವ ಸಮಾಜದಲ್ಲಿ ಇಂತಹುದೊಂದು ಅವಸ್ಥೆ ಇತ್ತು ಎಂಬುದನ್ನು‌ ಕೇಳುವುದೇ ಸಂಕಟಕರ ಎನ್ನುವ ಸ್ಥಿತಿ ಅದು.
ಇಂತಹದೊಂದು ಹೀನ ಮಟ್ಟದ ಗುಲಾಮಗಿರಿಯ ವ್ಯವಸ್ಥೆ ಕೇವಲ ರೋಮನ್ ಸಾಮ್ರಾಜ್ಯದಲ್ಲಿ ಮಾತ್ರವಲ್ಲ ಈಜಿಪ್ಟ್, ಮೆಸಪೊಟೋಮಿಯಾ, ಗ್ರೀಸ್, ಮ್ಯಾಸೆಡೋನಿಯಾ, ಚೀನಾಗಳಲ್ಲಿಯೂ ಸ್ಥಾಪಿತವಾಗಿತ್ತು.

ಆಕ್ರಮಣ , ಭೂದಾಹ. ಗುಲಾಮರ ದಾಹ

ಹಿಂದಿನ ಲೇಖನದಲ್ಲಿ ಹೇಳಿದಂತೆ ಕೃಷಿಯಿಂದ ಸಾಧ್ಯವಾದ ಹೆಚ್ಚುವರಿ ಉತ್ಪಾದನೆ, ಶೇಖರಣೆಯ ಸಾಧ್ಯತೆ ಉಂಟಾಯಿತು. ಬುಡಕಟ್ಟಿನೆಲ್ಲರಿಗೆ‌ ಸೇರಿದ‌ ಹೆಚ್ಚುವರಿಯನ್ನು ಬುಡಕಟ್ಟು ಮುಖ್ಯಸ್ಥರುಗಳು ವಶಪಡಿಸಿಕೊಂಡರು. ಅದರಿಂದಾಗಿ ಇನ್ನಷ್ಟು ಮತ್ತಷ್ಟು ಭೂಮಿ, ದುಡಿಮೆಗೆ ಹೆಚ್ಚು ಜನರನ್ನು ಪಡೆಯುವ ದಾಹ ಸೃಷ್ಟಿಯಾಗಿತ್ತು. ಬೇರೆ ‌ಬುಡಕಟ್ಟುಗಳ ಮೇಲೆ ಆಕ್ರಮಣ,ಸಂಪತ್ತಿನ‌ ಲೂಟಿಯ ಜೊತೆಗೆ ಅವರ ಭೂಮಿಯನ್ನು ವಶಪಡಿಸಿಕೊಳ್ಳಲು ಹಾಗೂ ಸೋತವರನ್ನು ಗುಲಾಮರನ್ನಾಗಿ ವಶಪಡಿಸಿಕೊಳ್ಳಲಾರಂಭವಾಯಿತು. ಈ‌ ಲೂಟಿ ಮತ್ತು ಗುಲಾಮರನ್ನು ಬುಡಕಟ್ಟಿನ ಮುಖ್ಯಸ್ಥರು, ಯುದ್ಧಗಳ ವೀರರು ಪಡೆದುಕೊಂಡಿದ್ದರಿಂದ‌ ಬುಡಕಟ್ಟಿನಲ್ಲಿದ್ದ‌ ಸಮಾನತೆ ಅಳಿದು‌ ಕೆಲವರು ಹೆಚ್ಚಿನವರು, ಮಾನ್ಯರು ಎಂಬ‌ ಪರಿಸ್ಥಿತಿ ಉಂಟಾಯಿತು.
ಇದರಿಂದಾಗಿ ಹಿಂದೆ ಬುಡಕಟ್ಟಿನವರು ಗಂಡು ಹೆಣ್ಣೆಂಬ ಬೇಧವಿಲ್ಲದೆ ಎಲ್ಲರೂ ಒಟ್ಟಿಗೆ ಸೇರಿ ಮುಖ್ಯಸ್ಥ, ದೇವರಗುಡ್ಡನಂತಹವರನ್ನು ಆರಿಸುತ್ತಿದ್ದ‌ , ಬುಡಕಟ್ಟಿನಲ್ಲಿ‌ ಯಾರು ಬೇಕಾದರೂ‌ ಮುಖ್ಯಸ್ಥರಾಗಬಹುದಾದ ಪರಿಸ್ಥಿತಿ ಮಾಯವಾಗಿ ಸಂಪತ್ತುಳ್ಳ ಕುಟುಂಬದವರು ಅವರ ಮಕ್ಕಳುಗಳೇ ವಂಶ ಪಾರಂಪರ್ಯವಾಗಿ ಬುಡಕಟ್ಟು ಮುಖ್ಯಸ್ಥರು ಎನ್ನುವಂತಾಯಿತು.

ಆದರೆ ಹಿಂದಿನ‌ ಲೇಖನಗಳಲ್ಲಿ‌ ವಿವರಿಸಿದಂತೆ ಅಂದು ತಾಯಿ‌‌ ಮಾತ್ರ ‌ಗೊತ್ತಿರುವ, ತಾಯಿ ಮೂಲದ ಬುಡಕಟ್ಟು, ಕುಲ ಮಾತ್ರ ಇದ್ದ ಬುಡಕಟ್ಟು ಪದ್ಧತಿ, (ಮಾತೃಪ್ರಧಾನ ಪದ್ಧತಿ )
ಮದುವೆಯೆಂಬ ಪದ್ಧತಿಯೇ ಇಲ್ಲದ, ಹೆಣ್ಣು ಗಂಡು ಯಾರು ಯಾರೊಡನೆ ಬೇಕಾದರೂ ಕೂಡುತ್ತಿದ್ದ ಸ್ಥಿತಿಯಲ್ಲಿ ಬುಡಕಟ್ಟು ಮುಖ್ಯಸ್ಥರು, ಸಂಪತ್ತುಳ್ಳವರಿಗೆ‌ ತಮ್ಮ ವಂಶ ಯಾವುದು, ತಮ್ಮ ಮಕ್ಕಳು‌ ಯಾರು ಗೊತ್ತಾಗುವ ಬಗೆ ಹೇಗೆ ? ಇದು ಒಂದು ಮುಖ್ಯ ‌ಪ್ರಶ್ನೆಯಾಯಿತು.
ಕೃಷಿಯ ಜೊತೆ ಜೊತೆಯಲ್ಲಿಯೇ ಮಾನವರ ಸಮುದಾಯ ಪಳಗಿಸಿಕೊಂಡಿದ್ದ ಪ್ರಾಣಿಗಳ ಸಾಕಾಣಿಕೆ‌
ಇದನ್ನು ಬಗೆಹರಿಸಿಕೊಳ್ಳಲು ಮಾನವರಿಗೆ ಸಹಾಯ ಮಾಡಿತು.
ಹೆಣ್ಣಿನ ಮೂಲದಿಂದಲೇ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದ , ಇಂತಹ ತಮ್ಮ ಕುಲಕ್ಕೆ ಮೂಲಾಧಾರವಾದ ಹೆಣ್ಣನ್ನು ಗುಲಾಮಳನ್ನಾಗಿ ಮಾಡಿಕೊಂಡು ಬೆತ್ತಲೆ ನಿಲ್ಲಿಸಿ , ಅಂಗಾಂಗಗಳ ಪ್ರದರ್ಶನ, ವರ್ಣನೆ ಮಾಡಿ ಹರಾಜು ಮಾಡುವ ದುಸ್ಥಿತಿಗೆ ತಲುಪಿದ‌ ಬಗೆಯನ್ನು ಮುಂದಿನ‌ ಲೇಖನದಿಂದ ತಿಳಿದುಕೊಳ್ಳೋಣ.

ಮುಂದಿನ ಲೇಖನದಲ್ಲಿ ನಿರೀಕ್ಷಿಸಿ : ಮಕ್ಕಳು ಹುಟ್ಟುವುದಕ್ಕೆ ಅಪ್ಪನೂ ಬೇಕಾಗುತ್ತದೆಂಬ ಅರಿವಾಯಿತು ಮಾನವರಿಗೆ . ಮಾತೃ ಪ್ರಧಾನ ವ್ಯವಸ್ಥೆ ಪಿತೃ ಪ್ರಧಾನ ವ್ಯವಸ್ಥೆಯಾಯಿತು. ಗೌರಮ್ಮನ ಮೂರ್ತಿ ಚಿಕ್ಕದಾಯಿತು‌, ಗಣಪನ ಮೂರ್ತಿ ಬೃಹದಾಕಾರವಾಯಿತು. ತನ್ನ‌ ತಂದೆ ಯಾರು , ತೋರು ಎಂದು ತಾಯಿಯನ್ನು ಕಾಡುತ್ತಿದ್ದ ಎಲ್ಲಮ್ಮನ‌ ಮಗನಿಗೆ ಉತ್ತರ ಸಿಕ್ಕೇ ಬಿಟ್ಟಿತು. ದೇವರಿಗೆ ಮಾತ್ರ ದಾಸಿಯಾದವಳು ಉಳ್ಳವರ ಕಾಮದ ಆಟಿಕೆಯಾದಳು .

ಲೇಖಕರು – ಜಿ ಎನ್ ನಾಗರಾಜ್.

(ಆಧಾರ-d plitic)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *