

ಗುತ್ತಿಗೆ ಆಧಾರದಲ್ಲಿ ಕೆಲಸಮಾಡುತ್ತಿರುವ ವೈದ್ಯರ ವೇತನವನ್ನು ಹೆಚ್ಚಿಸಿ ರಾಜ್ಯಸರ್ಕಾರ ಆದೇಶ ಮಾಡಿದೆ. ಆರೋಗ್ಯ ಇಲಾಖೆಯಲ್ಲಿ ರಾಜ್ಯದ ನಾನಾ ಕಡೆ ಕೆಲಸಮಾಡುತಿದ್ದ ವೈದ್ಯರಿಗೆ 45 ಸಾವಿರ ವೇತನ ನೀಡಲಾಗುತಿತ್ತು. ಈ ವೇತನ ಕಡಿಮೆ ಎಂದು ವೈದ್ಯರು ಸರ್ಕಾರದ ಗಮನಕ್ಕೆ ತಂದಿದ್ದರು. ಕೋವಿಡ್ ಕೆಲಸ ಸೇರಿದಂತೆ ರಾಜ್ಯದ ಸರ್ಕಾರಿ ಆಸ್ಫತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ತಮ್ಮ ವೇತನ, ತಮಗಿರುವ ಅಪಾಯ, ಸವಾಲುಗಳ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ವೈದ್ಯರ ಮಾಸಿಕ ವೇತನವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿ ಹೋರಾಟಕ್ಕೆ ತೀರ್ಮಾನಿಸಿದ್ದರು.ಈ ಬೇಡಿಕೆ ಹಿನ್ನೆಲೆಯಲ್ಲಿ ಈ ವೈದ್ಯರ ವೇತನವನ್ನು 45 ರಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ.

