

ಕರೋನಾ ವಾರದಿಂದ ವಾರಕ್ಕೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಈ ವರೆಗೆ 6.5 ಲಕ್ಷ ಕರೋನಾ ಪೀಡಿತರನ್ನು ಹೊಂದಿರುವ ಭಾರತಕ್ಕೆ ಕರೋನಾ ಸೋಂಕಿತರ ಸಂಖ್ಯೆಯ ಏರಿಕೆ ಕ್ರಮ ಭಾರವಾಗುವ ಅಪಾಯ ಸಮೀಪಿಸುವಂತಿದೆ. ಜುಲೈ 4 ರ ಶನಿವಾರವಾದ ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ 34 ಜನರಲ್ಲಿ, ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ 25 ಜನರಲ್ಲಿ ಕರೋನಾ ಸೋಂಕು ದೃಢವಾಗುವ ಸಾಧ್ಯತೆ ನಿಚ್ಚಳವಾಗಿದೆ.

ಈ ಮಾಹಿತಿಯ ಆಧಾರದಲ್ಲಿ ಮಳೆಯಿಂದ ತತ್ತರಿಸಲಿರುವ ಮಲೆನಾಡು, ಕರಾವಳಿಯನ್ನು ಕರೋನಾ ಕಾಡುವುದು ನಿಶ್ಚಿತವಾಗಿದೆ.
ಬೆಂಗಳೂರಿಗರಿಂದ ಅಪಾಯ-
ಇಲ್ಲಿಯವರೆಗೆ ಹೊರರಾಜ್ಯ ವಿಶೇಶವಾಗಿ ಮಹಾರಾಷ್ಟ್ರದವರಿಂದ ಬಳಲಿದ ನಮಗೆ ಈಗ ಬೆಂಗಳೂರು ಅಪಾಯದ ಮೂಲವಾಗಿದೆ. ಕಳೆದ ತಿಂಗಳು ಮಹಾರಾಷ್ಟ್ರದಿಂದ ಮರಳಿದವರಲ್ಲಿ ಸರಣಿಯಲ್ಲಿ ಪತ್ತೆಯಾದ ಕರೋನಾ ಈ ತಿಂಗಳು ಬೆಂಗಳೂರಿನಿಂದ ಮರಳಿದವರ ಬೆನ್ನುಬಿದ್ದಿದೆ.
ಮಹಾರಾಷ್ಟ್ರ, ಬೆಂಗಳೂರು ಅಥವಾ ಪರ ಊರು, ಹೊರ ಜಿಲ್ಲೆ, ಹೊರರಾಜ್ಯಗಳಿಂದ ಬರುವವರು ಸ್ವಯಂ ಜಾಗೃತಿ, ನಿಯಂತ್ರಣ ಮಾಡಿಕೊಳ್ಳುವುದು, ಸ್ಥಳಿಯರೂ ಹೊರ ಪ್ರದೇಶಗಳಿಂದ ಬರುವವರನ್ನು ನಿಗದಿತ ಅಂತರದಲ್ಲಿಡುವುದು, ಸೂಕ್ತ ಮುನ್ನೆಚ್ಚರಿಕೆ,ತಪಾಸಣೆ,ಶೀಘ್ರ ಚಿಕಿತ್ಸೆ ಈ ಉಪಕ್ರಮಗಳ ಮೂಲಕವೂ ಕೋವಿಡ್ ನಿಂದ ರಕ್ಷಿಸಿಕೊಳ್ಳಬಹುದಾಗಿದೆ. ಮಲೆನಾಡು ಕರಾವಳಿ ಜನರ ಸಂಬಂಧ-ಸಂಪರ್ಕ ಬೆಂಗಳೂರಿನೊಂದಿಗೆ ನಿಕಟವಾಗಿರುವುದರಿಂದ ಈ ಭಾಗದ ಜನರು ಹೆಚ್ಚು ಜಾಗೃತರಾಗಬೇಕಿದೆ.
ಮತ್ತೊಂದು ಸುದ್ದಿ-
ಸಿದ್ದಾಪುರ:ಕೋವಿಡ್-19 ಸಂದರ್ಭದಲ್ಲಿ ಕರೊನಾ ಸೇನಾನಿಗಳಂತೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು,ಸದಸ್ಯರು,ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ದಿಟ್ಟತನದಿಂದ ಕಾರ್ಯನಿರ್ವಹಿಸಿದ್ದು ಮರೆಯಲಾರದಂತಹುದು ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಹೇಳಿದರು.
ಸಿದ್ದಾಪುರದ ಟಿಎಂಎಸ್ ಸಭಾಭವನದಲ್ಲಿ ನಡೆದ ಸಿದ್ದಾಪುರ ತಾಲೂಕು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷ-ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕೋವಿಡ್-19ರ ಸಮಯದಲ್ಲಿ ಯಾವುದೇ ಆತಂಕ್ಕೆ ಒಳಗಾಗದೇ ಕಾರ್ಯನಿರ್ವಹಿಸಿದ ಕಾರ್ಯದರ್ಶಿಗಳಿಗೆ ಒಕ್ಕೂಟದಿಂದ ಗೌರವಧನ ನೀಡುವುದಕ್ಕೆ ಈಗಾಗಲೆ ಒಕ್ಕೂಟದಲ್ಲಿ ಚರ್ಚೆ ನಡೆದಿದ್ದು ಮುಂದಿನ ದಿನದಲ್ಲಿ ನೀಡಲಾಗುವುದು. ಉತ್ತರ ಕನ್ನಡ ಜಿಲ್ಲೆಗೆ ಒಂದು ಪ್ರತ್ರ್ಯೇಕ ಹಾಲು ಒಕ್ಕೂಟ ರಚನೆ ಕುರಿತು ಈಗಾಗಲೇ ಎಲ್ಲ ಸಿದ್ದತೆ ನಡೆಯುತ್ತಿದ್ದು ಧಾರವಾಡ ಹಾಲು ಒಕ್ಕೂಟದ ಅನುಮತಿಯೂ ದೊರೆತಿದ್ದು ಎನ್‍ಡಿಡಿಬಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸರ್ವೇಕಾರ್ಯ ನಡೆಸಬೇಕಾಗಿದೆ .ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಹಾಲು ಶೇಖರಣೆ ಆಗುತ್ತಿದೆ. ಶಿರಸಿಯಲ್ಲಿ ಪ್ಯಾಕಿಂಗ್ ಘಟಕ ಸಿದ್ದಗೊಳ್ಳುತ್ತಿದೆ. ಜಿಲ್ಲೆಯಲ್ಲಿ 11ಬಿಎಂಸಿ ಕೇಂದ್ರ ಇದ್ದು ಇದರಿಂದ ಜಿಲ್ಲಾ ಒಕ್ಕೂಟ ರಚನೆಗೆ ಹೆಚ್ಚು ಸಹಕಾರಿ ಆಗಲಿದೆ.ಹಾಲು ಸಂಘದ ಎಲ್ಲ ಸದಸ್ಯರನ್ನು ಕಲ್ಯಾಣ ಸಂಘದ ಸದಸ್ಯರನ್ನಾಗಿ ಮಾಡುವುದಕ್ಕೆ ಕಾರ್ಯದರ್ಶಿಗಳು ಮುಂದಾಗಬೇಕು ಎಂದು ಹೇಳಿ ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡಯೋಜನೆಯಲ್ಲಿ ಹಾಲು ಉತ್ಪಾದಕರಿಗೆ ಸಿಗುವ ಸೌಲಭ್ಯದ ಕುರಿತು ವಿವರಿಸಿದರು.
ಸಿದ್ದಾಪುರ ತಾಲೂಕಿನ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ ಬೇಡ್ಕಣಿ ಅಧ್ಯಕ್ಷತೆವಹಿಸಿ ಮಾತನಾಡಿ ತಾಲೂಕಿನಲ್ಲಿರುವ 54 ಹಾಲು ಉತ್ಪಾದಕರ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಿದ್ದಾಪುರದ ಹೊಸೂರಿನಲ್ಲಿರುವ ಒಕ್ಕೂಟದ ಕ್ಷೀರ ಕೇಂದ್ರ ಅಭಿವೃದ್ಧಿಗೆ ಧಾರವಾಡ ಹಾಲು ಒಕ್ಕೂಟ ಐಬಿಪಿ(ಇಂಟಿಗ್ರೇಟೆಡ್ ಬ್ಯುಸಿನೆಸ್ ಪ್ಲ್ಯಾನ್) ಯೋಜನೆಯಲ್ಲಿ 30ಲಕ್ಷರೂಗಳನ್ನು ಮಂಜೂರಿ ಮಾಡಿದ್ದು ಅಲ್ಲಿ ಎಲ್ಲ ಮೂಲಭೂತ ಸೌಲಭ್ಯ ಕಲ್ಪಿಸಲು ಒಕ್ಕೂಟ ಮುಂದಾಗಿದೆ ಎಂದು ಹೇಳಿದರು.
ಹೂವಿನಮನೆ ಹಾಲು ಸಂಘದ ಅಧ್ಯಕ್ಷ ಕೃಷ್ಣ ಹೆಗಡೆ, ಧಾರವಾಡ ಹಾಲು ಒಕ್ಕೂಟದ ಶಿರಸಿ ಉಪವಿಭಾಗದ ಪಶುವೈದ್ಯಾಧಿಕಾರಿ ಡಾ. ರಾಕೇಶ ಉಪಸ್ಥಿತರಿದ್ದರು. ತಾಲೂಕು ವಿಸ್ತರಣಾಧಿಕಾರಿ ಪ್ರಕಾಶ ಸ್ವಾಗತಿಸಿದರು.
