

ಈ ವಾರ ಉತ್ತರ ಕನ್ನಡ-01-

ನಿನ್ನೆ ಕೋಲಾರ ಬಂಗಾರಪೇಟೆಯಲ್ಲಿ ನಡೆದ ತಹಸಿಲ್ಧಾರರ ಹತ್ಯೆಗೆ ರಾಜ್ಯದಾದ್ಯಂತ ತೀವೃ ವಿರೋಧ ವ್ಯಕ್ತವಾಗಿದೆ. ಇಂದು ಶಿರಸಿ-ಸಿದ್ಧಾಪುರಗಳಲ್ಲಿ ಮನವಿ ನೀಡಿದ ರಾಜ್ಯ ನೌಕರರ ಸಂಘ ಮತ್ತು ಕಂದಾಯ ಇಲಾಖೆ ನೌಕರರು ಈ ಪ್ರಕರಣದ ಸೂಕ್ತ ತನಿಖೆ ಮಾಡಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಮತ್ತು ಸರ್ಕಾರಿ ನೌಕರರಿಗೆ ಸೂಕ್ತ ಭದ್ರತೆಗೆ ಆಗ್ರಹಿಸಿ ತಹಸಿಲ್ಧಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಸಿದ್ಧಾಪುರ ಸೋಮುವಾರದಿಂದ ಮಧ್ಯಾಹ್ನ 2 ಗಂಟೆಗೆ ಕ್ಲೋಜ್-
ಉತ್ತರ ಕನ್ನಡ ದಲ್ಲಿ ಬಹುತೇಕ ತಾಲೂಕುಗಳಲ್ಲಿ ಅರ್ಧದಿನದ ಲಾಕ್ ಡೌನ್ ನಡೆಯುತ್ತಿದೆ. ಇದೇ ರೀತಿ ಸಿದ್ಧಾಪುರದಲ್ಲಿ ಕೂಡಾ ಜುಲೈ13 ರ ಸೋಮವಾರದಿಂದ ಮಧ್ಯಾಹ್ನ 2 ರ ನಂತರ ಸ್ವಯಂಪ್ರೇರಿತ ಲಾಕ್ಡೌನ್ ಮಾಡುವ ಬಗ್ಗೆ ರವಿವಾರದ ಒಳಗೆ ನಿರ್ಧರಿಸುವುದಾಗಿ ಪ.ಪಂ. ಸದಸ್ಯ ಕೆ.ಜಿ.ನಾಯ್ಕ ಹಣಜಿಬೈಲ್ ತಿಳಿಸಿದ್ದಾರೆ. ಸಮಾಜಮುಖಿ ಗೆ ಪ್ರತಿಕ್ರೀಯೆ ನೀಡಿದ ಅವರು ಹಣ,ವ್ಯಾಪಾರಕ್ಕಿಂತ ಬದುಕು ದೊಡ್ಡದು, ಕರೋನಾ ಹಿನ್ನೆಲೆಯಲ್ಲಿ ಸಿದ್ಧಾಪುರದಲ್ಲಿ ಮುಂದಿನ ವಾರ ಮಧ್ಯಾಹ್ನದ ನಂತರ ಸ್ವಯಂಪ್ರೇರಿತ ಲಾಕ್ಡೌನ್ ಮಾಡುತ್ತೇವೆ. ಈ ಬಗ್ಗೆ ಎರಡು ದಿವಸಗಳಲ್ಲಿ ಸಾರ್ವಜನಿಕವಾಗಿ ಪ್ರಕಟಣೆ ಮಾಡುತ್ತೇವೆ ಎಂದರು.
ಮರತೆಗೆಸಿ- ಸಿದ್ಧಾಪುರ ನಗರದಲ್ಲಿ ಬೀಳಬಹುದಾದ ಹಳೆಯ ಮರಗಳನ್ನು ಕಡಿಸಲು ಜೆ.ಡಿ.ಎಸ್. ಅಲ್ಫಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಇಬ್ರಾಹಿಂ ಶೇಖ್ ಆಗ್ರಹಿಸಿದ್ದಾರೆ. ಈ ಬಗ್ಗೆ ಲಿಖಿತ ಮನವಿಯೊಂದನ್ನು ಸ್ಥಳಿಯ ವಲಯ ಅರಣ್ಯಾಧಿಕಾರಿಗಳಿಗೆ ನೀಡಿರುವ ಅವರು ಮಳೆಗಾಲದಲ್ಲಿ ಬೀಳಬಹುದಾದ ಈ ಮರಗಳನ್ನು ತೆರವು ಮಾಡಿ ಸಂಭಾವ್ಯ ಅನಾಹುತ ತಪ್ಪಿಸುವಂತೆ ಕೋರಿದ್ದಾರೆ.
ಆಶಾ ಕಾಳಜಿ- ಕೋವಿಡ್ ಕಾರ್ಯಕರ್ತರಾಗಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ವೇತನ, ಗೌರವ ಧನ ನೀಡಿ ಅವರ ನಿಸ್ವಾರ್ಥ ಸೇವೆ ಗೌರವಿಸಬೇಕೆಂದು ಇಲಿಯಾಸ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು ಆಶಾಕಾರ್ಯಕರ್ತೆಯರ ಗೌರವ ಧನ, ಸುರಕ್ಷತಾ ವಸ್ತುಗಳನ್ನು ನೀಡಿ ಅವರ ಶ್ರಮಕ್ಕೆ ಗೌರವಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಆಶಾ ಗೌರವ-
ಕರೋನಾ ಮತ್ತು ಮಂಗನ ಕಾಯಿಲೆ ತಡೆಗೆ ಶ್ರಮಿಸಿದ ವಾಜಗೋಡು ಭಾಗದ ಆಶಾ ಕಾರ್ಯಕರ್ತರನ್ನು ವಾಜಗೋಡು ಸೇವಾ ಸಹಕಾರಿ ಸಂಘ ಗೌರವಿಸಿದೆ. ಅವರ ಕೆಲಸವನ್ನು ಅಭಿನಂದಿಸಿದ ಸಂಘ ಆಶಾ ಕಾರ್ಯಕರ್ತೆಯರನ್ನು ಗೌರವಿಸಿ ಗೌರವ ಧನ ನೀಡುವ ಮೂಲಕ ಅವರ ಸೇವೆಯನ್ನು ಪ್ರಶಂಸಿಸಿದೆ.






