

ವೆಸ್ಟ್ ಇಂಡೀಸ್ ಎದುರು ಮ್ಯಾಂಚೆಸ್ಟರ್‌ನ ಓಲ್ಡ್ `ಟ್ರಾಫರ್ಡ್‌ನಲ್ಲಿ ನಡೆದಿರುವ ‘ರೇಸ್ ದಿ ಬ್ಯಾಟ್’ ಸರಣಿಯ ಕೊನೆಯ ಟೆಸ್ಟಿನ ಐದನೇ ದಿನ, ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಪಾಲಿಗೆ ಅವಿಸ್ಮರಣೀಯ ದಿನ. ಕ್ರೆಗ್ ಬ್ರಾಥವೇಟ್ ವಿಕೆಟ್ ಪಡೆದ ಈ 34 ವರ್ಷ ವಯಸ್ಸಿನ ಬೌಲರ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 500 ಬಲಿ ಪಡೆದ ವಿಶ್ವದ ಕೇವಲ ಏಳನೇ ಬೌಲರ್ ಹಾಗೂಇಂಗ್ಲೆಂಡ್ ನ ಏರಡನೇ ಬೌಲರ್ ಎಂಬ ಸಾಧನೆಗೈದರು. ಬೌಲರ್ ಒಬ್ಬರು 500 ಬಲಿಗಳ ದಾಖಲೆ ಬರೆಯುತ್ತಿರುವುದೊಂದು ಐತಿಹಾಸಿಕ ವಿಷಯವೇ ಸರಿ. -2007ರ ಡಿಸೆಂಬರ್ 9 ರಂದು ಶ್ರೀಲಂಕಾ ದೇಶದ ಎದುರು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣ ಮಾಡಿದ ಸ್ಟುವರ್ಟ್ ಬ್ರಾಡ್ ಇಲ್ಲಿಯವರೆಗೆ 139 ಟೆಸ್ಟ್ ನಲ್ಲಿ ಆಟವಾಡಿದ್ದು 28.38 ಬೌಲಿಂಗ್ ಸರಾಸರಿಯಲ್ಲಿ ಒಟ್ಟೂ 500 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಪಂದ್ಯ ಇನ್ನಿಂಗ್ಸ್ ಗಳಲ್ಲಿ 17 ಸಲ ಐದು ಅಥವಾ ಹೆಚ್ಚು ವಿಕೆಟ್ ಪಡೆದಿರುವ ಸ್ಟುವರ್ಟ್ ಬ್ರಾಡ್ ಎರಡು ಸಾರಿ ಹತ್ತು ಬಲಿ ಪಡೆದಿದ್ದಾರೆ.

