

ಸರ್ಕಾರದ ಕರೋನಾ ನಿರ್ವಹಣೆಗೆ ಸಹಸ್ರಾರು ಕೋಟಿ ಹಣ ಹರಿದು ಬಂದಿದೆ. ರಾಜ್ಯದಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಕರೋನಾ ನಿರ್ವಹಣೆಗೆ ಹೆಚ್ಚಿನ ಸಹಾಯ ಮಾಡಿವೆ. ರಾಜ್ಯದಲ್ಲಿ ಹಾಲುಒಕ್ಕೂಟ ಕರೋನಾ ನಿರ್ವಹಣೆಗೆ ದೇಣಿಗೆಯಾಗಿ 15 ಲಕ್ಷಗಳನ್ನು ನೀಡಿದೆ.



ಧಾರವಾಡದ ಹಾಲು ಒಕ್ಕೂಟ ತನ್ನ ವ್ಯಾಪ್ತಿಯ ಜಿಲ್ಲೆಗಳ ಕರೋನಾ ಕಾರ್ಯಕರ್ತರಿಗೆ 5 ಲಕ್ಷ ಮೊತ್ತದ ಧನ ಸಹಾಯ ಮಾಡಿದೆ. ಈ ಬಗ್ಗೆ ಸಿದ್ಧಾಪುರದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಧಾರವಾಡ ಹಾಲು ಒಕ್ಕೂಟದ ಧನ ಸಹಾಯವನ್ನು ಆಶಾ ಕಾರ್ಯಕರ್ತೆಯರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದ ಹಾಲು ಒಕ್ಕೂಟ ಸಕಾಲದಲ್ಲಿ ಸರ್ಕಾರ, ಸಾರ್ವಜನಿಕರ ನೆರವಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಧಾರವಾಡ ಹಾಲು ಒಕ್ಕೂಟದ ನಿರ್ಧೇಶಕ ಪರಶುರಾಮ ನಾಯ್ಕ ಒಕ್ಕೂಟದಲ್ಲಿ 33 ವರ್ಷಗಳ ಪ್ರಾಮಾ ಣಿಕ ಸೇವೆ ಸಲ್ಲಿಸಿ, ಈಗ ನಿರ್ಧೇಶಕರಾಗುವ ಮೂಲಕ ತಮ್ಮ ಸೇವಾವಧಿಯ ಅನುಭವವನ್ನು ಇಲ್ಲಿ ಬಳಸಿ ಉತ್ತಮ ಕೆಲಸ ಮಾಡುತಿದ್ದಾರೆ ಎಂದು ಶ್ಲಾಘಿಸಿದರು.
ಬೇಡ್ಕಣಿ ಹಾಲು ಉತ್ಫಾದಕರ ಸಂಘದ ಕಟ್ಟಡಕ್ಕೆ ರಸ್ತೆ ಸೇರಿದಂತೆ ಹಾಲು ಉತ್ಫಾದಕರು, ಹಾಲು ಉತ್ಫಾದಕರ ಸಂಘಗಳಿಗೆ ಸರ್ಕಾರದ ನೆರವು ಒದಗಿಸುವ ಭರವಸೆ ನೀಡಿದರು. ಬೇಡ್ಕಣಿಯಲ್ಲಿ ಕೃಷಿ ಉತ್ಫನ್ನ ಮಾರುಕಟ್ಟೆ ಸಮೀತಿ ನಿರ್ಮಿಸಿದ ಗೋದಾಮು ಉದ್ಘಾ ಟಿಸಿ ಮಾತನಾಡಿದ ಸಭಾಧ್ಯಕ್ಷರು ಎ.ಪಿ.ಎಂ.ಸಿ. ಅಧಿಕಾರ ಕೇಂದ್ರೀಕರಣ ಮತ್ತು ಎ.ಪಿ.ಎಂ.ಸಿ. ಮಹತ್ವ ಕಡಿಮೆ ಮಾಡುತ್ತಿರುವ ಹೊಸ ಬೆಳವಣಿಗೆ ರೈತರಿಗೆ ಮಾರಕ ಎಂದರು.https://youtu.be/mNnZuOeA-yE
