
ಹೆದರಬೇಡ… ಕ್ಷಮಿಸಬೇಡ:ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶ ಎ ಹರ್ಷ ಕಾಂಬಿನೇಷನ್ ಎಂದ್ರೆ ಅಲ್ಲೊಂದು ಭರ್ಜರಿ ಸಿನಿಮಾವಂತೂ ಗ್ಯಾರಂಟಿ ಎಂಬ ನಿರೀಕ್ಷೆ ಸಹಜವಾಗಿಯೇ ಹುಟ್ಟಿಕೊಂಡು ಬಿಟ್ಟಿದೆ. ಈಗಾಗಲೇ ಈ ಇಬ್ಬರ ಕಾಂಬಿನೇಷನ್ ನಲ್ಲಿ ಎರಡು ಸಿನಿಮಾ ಭರ್ಜರಿ ಹಿಟ್ ಆಗಿವೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಎ ಹರ್ಷ ಕಾಂಬಿನೇಷನ್ ಎಂದ್ರೆ ಅಲ್ಲೊಂದು ಭರ್ಜರಿ ಸಿನಿಮಾವಂತೂ ಗ್ಯಾರಂಟಿ ಎಂಬ ನಿರೀಕ್ಷೆ ಸಹಜವಾಗಿಯೇ ಹುಟ್ಟಿಕೊಂಡು ಬಿಟ್ಟಿದೆ. ಈಗಾಗಲೇ ಈ ಇಬ್ಬರ ಕಾಂಬಿನೇಷನ್ ನಲ್ಲಿ ಎರಡು ಸಿನಿಮಾ ಭರ್ಜರಿ ಹಿಟ್ ನೀಡಿದ್ದು, ಭಜರಂಗಿ-2 ಚಿತ್ರ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ನಡುವಲ್ಲೇ ಈ ಜೋಡಿ ಮತ್ತೊಮ್ಮೆ ಜೊತೆಯಾಗಿದ್ದು, ಮತ್ತೊಂದು ಅದ್ಭುತ ಸಿನಿಮಾವೊಂದು ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ.
ಜುಲೈ.12ರಂದು ಶಿವರಾಜ್ ಕುಮಾರ್ ಅವರ ಹುಟ್ಟಹಬ್ಬದ ದಿನದಂದು ಹೆದರಬೇಡ… ಕ್ಷಮಿಸಬೇಡ! ಹಂಟ್ ಬಿಗಿನ್ಸ್ ಎಂಬ ಟ್ಯಾಗ್ ಲೈನ್ಸ್ ಇರುವ ಬ್ಲಾಡ್ ಆ್ಯಂಡ್ ವೈಟ್ ಫೋಟೋ ಇರುವ ಪೋಸ್ಟರ್ ವೊಂದು ಈ ಹಿಂದೆ ಬಿಡುಗಡೆಗೊಂಡಿತ್ತು. ಅಪ್ರೋಡೈಟ್ ಸಂಸ್ಥೆಯಡಿ ಚಿತ್ರ ನಿರ್ಮಾಣವಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆಂಬ ಮಾಹಿತಿಗಳು ಬಹಿರಂಗೊಂಡಿರಲಿಲ್ಲ.
ಇದೀಗ ಈ ಚಿತ್ರವನ್ನು ಹರ್ಷ ಅವರೇ ನಿರ್ದೇಶಿಸುತ್ತಿದ್ದು, ರಮೇಶ್ ಕುಮಾರ್, ಸುಧೀಂದ್ರ ಮತ್ತು ಅಶೋಕ್ ಕುಮಾರ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆದು ತಿಳಿದುಬಂದಿದೆ.
ಶಿವರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ವಜ್ರಕಾಯ ಹಾಗೂ ಭಜರಂಗಿ ಚಿತ್ರಗಳು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡಿತ್ತು. ಭಜರಂಗಿ 2 ಕೂಡ ಇದೀಗ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಇಬ್ಬರ ಕಾಂಬಿನೇಷನ್ ನಲ್ಲಿ ನಾಲ್ಕನೇ ಚಿತ್ರ ತಯಾರಾಗಲು ಸಿದ್ಧವಾಗಿ ನಿಂತಿದೆ. (kpc)
