

ಉ.ಕ. ದಲ್ಲಿ ಕಳೆದವಾರ ತುಸು ಕಡಿಮೆಯಾಗಿದ್ದ ಕರೋನಾ ಆರ್ಭಟ ಈ ವಾರ ಮತ್ತೆ ಹೆಚ್ಚಿದೆ. ರವಿವಾರ 125 ಜನರಲ್ಲಿ ದೃಢವಾದ ಕರೋನಾ ಇಂದು 53 ಜನರಲ್ಲಿ ದೃಢವಾಗಿದೆ. ಹಳಿಯಾಳ, ಯಲ್ಲಾಪುರಗಳನ್ನು ನಡುಗಿಸಿದ ಕರೋನಾ ಸಿದ್ಧಾಪುರದಲ್ಲೂ ಭಯ ಹೆಚ್ಚಿಸಿದೆ.
ಸಿದ್ಧಾಪುರದಲ್ಲಿ ರವಿವಾರ ಆಟೋಚಾಲಕ ರೊಬ್ಬರ ಮಗ ಮತ್ತು ಹಾಲು ವ್ಯಾಪಾರಿಯಲ್ಲಿ ದೃಢಪಟ್ಟಿದ್ದು ಇಂದು ಇದು ಎರಡು ಜನ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಲ್ಲಿ ದೃಢ ಪಡುವ ಮೂಲಕ ಜನರು ಎಚ್ಚೆತ್ತುಕೊಳ್ಳಲು ಸೂಚಿಸಿದಂತಾಗಿದೆ.
ಇಂದು ಸಿದ್ಧಾಪುರದ ಪಟ್ಟಣದ ಒಬ್ಬರು, ಕಾನಗೋಡಿನ ಒಬ್ಬರು ಅರೆಂದೂರು ಕಲ್ಯಾಣಪುರಗಳ ಐವರಲ್ಲಿ ಕರೋನಾ ದೃಢಪಟ್ಟಿದ್ದು ಇವರಲ್ಲಿ ಇಬ್ಬರು ಆಶಾ ಕಾರ್ಯಕರ್ತೆಯರು ಒಬ್ಬರು ಅಂಗನವಾಡಿ ಕಾರ್ಯಕರ್ತೆ ಸೇರಿದ್ದಾರೆ.
ಕೋವಿಡ್ 19 ತಡೆ, ನಿಯಂತ್ರಣ, ಜಾಗೃತಿ ವಿಚಾರದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಗಣನೀಯ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಕರೋನಾ ಜಾಗೃತಿ, ಸಮೀಕ್ಷೆ, ತಿಳುವಳಿಕೆ ನೀಡುತಿದ್ದಾರೆ. ಇಂಥ ಕರೋನಾ ಕಾರ್ಯಕರ್ತೆಯರಿಗೆ ಕೋವಿಡ್ ದೃಢವಾಗಿರುವುದು ತುಸು ಆತಂಕಕ್ಕೆ ಕಾರಣವಾಗಿದೆ. ಇಂದಿನ 53 ಪ್ರಕರಣಗಳು ಸೇರಿ ಇಲ್ಲಿಯವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 20835 ಜನರಲ್ಲಿ ಕರೋನಾ ದೃಢಪಟ್ಟಿದೆ. 30 ಜನರು ನಿಧನರಾಗಿದ್ದು ಎರಡು ಸಾವಿರಕ್ಕಿಂತ ಹೆಚ್ಚು ಜನರು ಸಂಪೂರ್ಣ ಗುಣಮುಖರಾಗಿದ್ದಾರೆ.
