subhash keladi writes on gouri fest- ಕಿರಿಗೌರಿ ಚೌತಿ …

ಮಲೆನಾಡಿನ ಕಿರಿಗೌರಿ ಚೌತಿ,

ಅಣ್ಣ ಚೌತಿ ಹಬ್ಬಕ್ಕೆ ಕರೆಯಲು ಬಂದ ದಿನದಿಂದ ಮನಸ್ಸಿಲ್ಲೇನೋ ಸಂಭ್ರಮ,, ಹೊರಡಲು ಅಣಿ, ಡೇರೆ ಹೂವನ್ನು ಅಣ್ಣ ಅಪ್ಪ ಕರೆದುಕೊಂಡು ಹೋಗಲು ಬಂದ ಸಮಯದಲ್ಲೇ ಕೊಯ್ಯೋಣವೆಂದು ಕಾಯುವುದು, ಒಂದು ಹೂವನ್ನು ಹಾಳಾಗದಂತೆ ಜೋಪಾನ ಮಾಡುವುದು,,,,ಆಗಲೇ ಮನೆಯನ್ನೆಲ್ಲ ಚೊಕ್ಕ ಒಪ್ಪವಾಗಿ ಮಾಡಿ ಅತ್ತೆಯ ಬಾಯಿಂದ ಆಗಲೇ ಹಬ್ಬಕ್ಕೆ ಹೊರಟಳೇನೋ ಎನ್ನುವ ಒಂದು ಮಾತು ಬರಲು ಮನಸಿನ ಮೂಲೆಯಲ್ಲಿ ಒಂದು ಖುಷಿ, ಅಣ್ಣ ಹೊಯ್ಯುವ ಮಳೆಯಲ್ಲಿ ಕರೆದುಕೊಂಡು ಹೋಗಲು ಬಂದೇ ಬಿಟ್ಟ, ಬರುವ ಅತ್ತಿಗೆಮ್ಮನಿಗೊಂದಿಷ್ಟು ಬಿಟ್ಟು ಉಳಿದೆಲ್ಲಾ ತುಸು ಹೆಚ್ಚೇ ಡೇರೆ ಹೂವು ( ಕುತ್ರಿ,ಗಂಧದ ಕಡ್ಡಿ, ಗ್ವಾಟೆ ತಾವರೆ, ಕೆಂಪುಕಡ್ಡಿ,ಬೆಕ್ಕಿನ ಕಣ್ಣು, ) ಚೀಲ ಸೇರಿತು.‌ ಗಂಡ ಬಾಯಿಮಾತಿಗೆ ನಾನೇ ಹೋಗಿ ಬಿಟ್ಟು ಬರುತ್ತೇನೆಂದರೂ ಅಣ್ಣನ ಬೈಕಿನಲ್ಲೇ ಜಿಟಿ ಜಿಟಿ ಮಳೆಯಲ್ಲಿ ಹಿಂಬದಿ ಛತ್ರಿ ಹಿಡಿದು ಹೋಗಬೇಕೆಂಬ ಹಂಬಲ, ಬರುವ ಅಣ್ಣನೂ ಅಷ್ಟೆ ಅತ್ತಿಗೆ ನನ್ನನ್ನು ತವರು ಮನೆಗೆ ಬಿಟ್ಟು ಬನ್ನಿ ಎಂದರೆ ಸಾಧ್ಯವೇ ಇಲ್ಲವೆಂದು ದರ್ಪ ತೋರಿ ಬಂದವನು ತಂಗಿಯನ್ನು ಮನೆಗೆ ಕರೆದುಕೊಂಡು ಹೋಗುವ ತವಕದಲ್ಲಿ ಅತಿಯಾಗಿ ಸಂಭ್ರಮಿಸುತ್ತಾನೆ.

ತಂಗಿ ತವರು ಮನೆಗೆ ಬಂದಾಕ್ಷಣ ಚೌತಿ ಹಬ್ಬದಲ್ಲಿ‌ ಇಡೀ ಮನೆಯ ಆಧಿಪತ್ಯ ಅವಳದೆ.. ಮಗನಿಗೆ ಇಪ್ಪತ್ತು ರೂಪಾಯಿ ಗನ್ ಕೊಡಿಸಿ ಕಳುಹಿಸಿದ್ದ ಅಪ್ಪ ಮಾವನಾಗಿ ಅಳಿಯ ಸೊಸೆಗೆ ಇನ್ನೂರು ರೂಪಾಯಿ ಪಟಾಕಿ ಬಾಕ್ಸ್ ತರುತ್ತಾನೆ. ಅಳಿಯ ಸೊಸೆಯನ್ನು ತಾನು ಹೋಗುವ ಕಡೆಯಲ್ಲ ಬೈಕಿನ ಮುಂದೆ ಹಿಂದೆ ಕೂರಿಸಿ ಸುತ್ತಾಡಿಸುತ್ತಾನೆ.. ಗೌರಮ್ಮನ ಚಂಡು ಕಟ್ಟಲು ಅಣಿ ಮಾಡುತ್ತಾ, ಅಣ್ಣ ಹೂವು ತಾ, ಸೇವಂತಿ ಹೂ ತಾ , ಉದ್ದ ತೊಟ್ಟಿನ‌ಹೂ ತಾ,, ಈ ಸಾತಿ ಹೊಸ ಗೌರಮ್ಮನ‌ ಸೀರೆ ತಾ, ಐದು ರೀತಿ ಹಣ್ಣು ತಾ, ಬಾಳೆ ಕಂಬ ತಾ, ಪಳಿಯುವಿಕೆ ಯಾರು ತರ್ತಾರೆ, ಕಾಯಿ ಸುಲಿ, ಹೊಸ ಬೀಸಣಿಕೆ ತಾ, ಸಿಬುಲ ತಾ, ಲೈಟಿನ ಸರ ತಾ, ಗೌರಮ್ಮನ ಮಂಟಪ ಕಟ್ಟು,ಮನೆಯಲ್ಲಿ ಎಂದೂ ಮಾತು ಕೇಳದಿದ್ದ ಅಣ್ಣ ಒಂದು ಹೆಚ್ಚು ಅನ್ನುವಂತೆ ಚಾಚೂ ತಪ್ಪದೇ ಹೇಳಿದ್ದೆಲ್ಲವ ಮಾಡಿ ತಂಗಿಯ ಹತ್ತಿರ ಶಹಬಾಸ್ ಎನಿಸಿಕೊಳ್ಳುತ್ತಾನೆ.

ಸೊಸೆಯ ಮೇಲೆತ್ತಿ ಹಾರಿಸುತ್ತಾ ತೊದಲಿನಲ್ಲಿ ಮಾಮ ಎನಿಸಿಕೊಳ್ಳುತ್ತಾ ಪಪ್ಪನನ್ನೇ ಮರೆಸುತ್ತಾನೆ. ಮುಂದಿನ ಮೂರು ದಿನ ಕಿರಿಗೌರಿಗೆ ತರೇಹವಾರಿ ಎಡೆ ಇಡುವುದು, ಹೆಸರುಕಾಳು ಉಂಡೆ, ಅತರಾಸ, ಶಂಕರ ಪೋಳ್ಯ ಬೇಸನ್ ಉಂಡೆ ,ಹೋಳಿಗೆ , ಬಳೆಕಜ್ಜಾಯ, ಹೊತ್ತು ಹೊತ್ತಿಗೆ ಎಲ್ಲ ಅಡಿಗೆ ಮುಗಿದಾಕ್ಷಣ ಕೊನೆಯಲ್ಲಿ ಎಡೆಗೆ ಏನೂ ಏನೂ ಇಲ್ಲವೆಂದು ಬಾಳೆಹಣ್ಣು ಹಾಲು, ಮನೆಮಗಳು ತನಗೆ ಬೇಕಾದ ಅಡಿಗೆ ಮಾಡಿ ಅಣ್ಣ ಅವ್ವ ಅಪ್ಪ ಮಗ ಮಗಳಿಗೆ ಬಡಿಸುತ್ತಾ ಆ ಚೌತಿಯ ಸಂಭ್ರಮ ವನ್ನು ಇಮ್ಮಡಿಗೊಳಿಸುತ್ತಾಳೆ. ಎಡೆ ಇಟ್ಟಾಗಲೆಲ್ಲಾ ಮಗನ ಚಟಕೋವಿಯಿಂದ ಬಾಂಬು ಸಿಡಿದಿರುತ್ತದೆ… ತನ್ನ ಮನೆಯವರಿಗೆ ಹಬ್ಬಕ್ಕೆ ತವರುಮನೆಗೆ ಕರೆಯುವ ತಂಗಿ, ಅಣ್ಣ ಅತ್ತಿಗೆಯ ಮನೆಗೆ ಹೊರಟಾಗ ಹುಸಿ‌ಕೋಪ ತೋರಿ ಮತ್ತೆ ಕಳಿಸಿಕೊಡುತ್ತಾಳೆ, ಗೌರಿಯ ಬಿಡುವ ದಿನ ಬಂತೆಂದರೆ ಬಂದ ತನ್ನೆಲ್ಲ ಸ್ನೇಹಿತೆಯರನ್ನು ಮಾತನಾಡಿಸುತ್ತಾ, ಈ ಗೌರಮ್ಮನ ಚಂಡು ಕಟ್ಟಿದ್ದು ಯಾರು? ಈ ಗೌರಮ್ಮನ‌ಸೀರೆ ಎಲ್ಲಿ ತಂದೆ,?ಬೀಸಣಿಕೆ ಬಾಳ ಚೆನ್ನಾಗಿದೆ?,ನಿನ್ನ ಸೀರೆ ಚೆನ್ನಾಗಿದೆ ಎಲ್ಲಿ ತಂದೆ ,?ಎನ್ನುತ್ತಲೇ ಕೆರೆಯವರೆಗಿನ ಹೆಜ್ಜೆ ಗೌರಮ್ಮನ ಚೆಂಡು ಹಿಡಿದು ಹುಷಾರಾಗಿ ಸಾಗುತ್ತದೆ, ಅಣ್ಣಂದಿರ ಸಾಲು ಪಟ್ಟೆ ಪಟ್ಟೆ ಲುಂಗಿ ಉಟ್ಟು ಪಳಿಯುವಿಕೆ ಕೈ ಚೀಲ ಹಿಡಿದು ಸಾಗುತ್ತದೆ. ಗೌರಮ್ಮನ ಬಿಟ್ಟು ಎಲ್ಲರೊಂದಿಗೆ ನಗುತ್ತಾ ಮನೆಯವರೆಗೆ ಭಾರದ ಹೆಜ್ಜೆ ಸಾಗುತ್ತದೆ. ಮನೆಗೆ ಬಂದ ತಕ್ಷಣ ಅವ್ವನ ಹತ್ತಿರ ಆ ಗಿಳಿ ಹಸಿರು ಸೀರೆ ಉಟ್ಟವಳಾರು? ಓ ಅವಳು ಇವಳೇನಾ ಎಂದು ಅವ್ವನ ಹತ್ತಿರ ಅವರಿವರ ಹರಸುತ್ತಾ, ಸುದ್ದಿಮನೆಯ ಎಲ್ಲ ಸುದ್ದಿಯ ತಿಳಿದು ಮನಸೆಂಬುದೊಮ್ಮೆ ನಿರಾಳವಾಗಿರುತ್ತದೆ.

ಮಾರನೆಯ ದಿನ ಬೆಳಗ್ಗೆ ಗಂಗಮ್ಮನ ಬಿಡುವವರೆಗೂ ಅಳಿಯ ಸೊಸೆಗೆ ಹಬ್ಬದ ಸಂಭ್ರಮ ಇಳಿದಿರುವುದಿಲ್ಲ.. ಹಬ್ಬದಲ್ಲಿ ಚಟಪಟ ಕೆಲಸ ಮಾಡುತ್ತಲೇ ಮನೆ ಮಗಳು ಒಂದು ವಿಶ್ರಾಂತಿ ಪಡೆದಿರುತ್ತಾಳೆ,,,ಒಂದೆರಡು ದಿನವಷ್ಟೇ ಆ ಕಡೆಯಿಂದ ಅತ್ತೆಗೆ ಹುಷಾರಿಲ್ಲ ಬೇಗ ಬಾ ಎಂದು ಮನೆಯಿಂದ ಕರೆ ಬಂದಿರುತ್ತದೆ. ಅತ್ತೆಯ ಮೇಲಿನ ಕಕ್ಕುಲತೆ ಮತ್ತೆ ಇಮ್ಮಡಿಯಾಗಿರುತ್ತದೆ,,ಅವ್ವ ಕೋಳಿ ಕಜ್ಜಾಯ ಮಾಡಿ ಚೌತಿ ಹಬ್ಬದಿಂದ ಗಂಡನ ಮನೆಗೆ ಬರಿ ಗೈಲಿ ಹೋಗಬೇಡ ಎಂದು ಮೂರು ಸೇರು ಚಕ್ಕಲಿ ಮಾಡಿ ಅದನ್ನು ಸುರಿದು ಚೀಲ ತುಂಬಿಯಾಗಿರುತ್ತದೆ….ಅಣ್ಣನ ಬೈಕು ಸಾವಧಾನದಿಂದ ಬಾವನ ಮನೆಗೆ ಮತ್ತೆ ಪ್ರಯಾಣ ಬೆಳೆಸುತ್ತದೆ.. ಅದಕ್ಕೆ ಹೇಳುವುದು ಚೌತಿ ಹಬ್ಬ ಹೆಣ್ಣು ಮಕ್ಕಳ ಹಬ್ಬ….

…….ನಾ ಹೇಳ ಹೊರಟಿರುವುದಿಷ್ಟೆ , ತಂಗಿ, ಅಣ್ಣ,ತವರು ಮನೆ,ಎಂದರೆ ಅದೊಂದು ಬಿಡಿಸಲಾರದ ಬಂಧ. ಆಸ್ತಿ , ನೌಕರಿ, ಸ್ವತ್ತು, ಇದಾವುದೂ ಈ ಬಂಧನದ ಮಧ್ಯ ಬರಬಾರದೆಂಬುದಷ್ಟೆ…ಸುಭಾಷ್ ಎಂ ಕೆಳದಿ.

* .( ಮಲೆನಾಡಿನ ವಿಶೇಷತೆ ಬಗ್ಗೆ ಅಧ್ಯಯನ ಮಾಡಿದವರು ಇನ್ನೂ ಹೆಚ್ಚು ಅಂದಗೊಳಿಸಬಹುದು. ಎಲ್ಲೂ ಇಲ್ಲದ ಕಿರಿಗೌರಿ ಚೌತಿ ನಮ್ಮ ಭಾಗದಲ್ಲೇ ಇರುವುದು,, ನನಗೆ ಸಾಧ್ಯವಾದಷ್ಟು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ, ಒಮ್ಮೆ ಓದಿ ಅಭಿಪ್ರಾಯ ತಿಳಿಸಿ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *