

ಎ.ಆಯ್.ಸಿ.ಸಿ. ಅಧ್ಯಕ್ಷತೆ ಮತ್ತು ಮುಂದಿನ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಗಳ ಸಂಭವನೀಯ ಪಟ್ಟಿಯ ಬಗ್ಗೆ ಚರ್ಚೆ ನಡೆಯುತಿದ್ದು ಈಗಿರುವ 5 ಹೆಸರುಗಳಲ್ಲಿ ಯಾರಾಗುತ್ತಾರೆ ಅಖಿಲಭಾರತ ಕಾಂಗ್ರೆಸ್ ಸಮೀತಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎನ್ನುವ ಕುತೂಹಲ ಮೂಡಿದೆ.
ಸಾಮಾಜಿಕ ಜಾಲತಾಣದ ಸಮೀಕ್ಷೆಯಲ್ಲಿ ರಾಹುಲ್ ಗಾಂಧಿಯವರಿಗೆ ಹೆಚ್ಚಿನ ಜನಬೆಂಬಲ ವ್ಯಕ್ತವಾಗಿದ್ದು ಸಂಸದ ಶಶಿ ತರೂರ್ ರಾಹುಲ್ ನಂತರದ ಸ್ಥಾನದಲ್ಲಿದ್ದಾರೆ. ಭೂಪಾಲನಾಥ್ ಸಿಂಗ್, ಸಿದ್ಧರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಸಿದ್ಧರಾಮಯ್ಯ ಈ ಮೂವರಲ್ಲಿ ಹೆಚ್ಚಿನ ಮತ ಗಳಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಎ.ಆಯ್.ಸಿ.ಸಿ. ಅಧ್ಯಕ್ಷತೆ ಮತ್ತು ಪ್ರಧಾನಿ ಅಭ್ಯರ್ಥಿಗಳ ವಿಷಯದಲ್ಲಿ ಸ್ಫರ್ಧೆ ಮತ್ತು ಮೇಲಾಟಗಳಿರದಿದ್ದರೂ ಭೂಪಾಲನಾಥ್ ಸಿಂಗ್,ಸಿದ್ಧರಾಮಯ್ಯ ಮತ್ತು ಖರ್ಗೆ ಹಿಂದುಳಿದವರು, ದಲಿತರ ಕೋಟಾದ ಮುಂಚೂಣಿಯ ನಾಯಕರಾಗಿದ್ದಾರೆ.
ಕನ್ನಡಿಗರು- ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರ ಪಟ್ಟಕ್ಕೆ ರಾಹುಲ್, ತರೂರು,ಭೂಪಾಲನಾಥ್ ಸಿಂಗ್ ಜೊತೆಗೆ ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ಧರಾಮಯ್ಯನವರ ಹೆಸರು ಮುಂಚೂಣಿಗೆ ಬರಲು ಕಾರಣ ಖರ್ಗೆಯವರ ಹಿರಿತನ ಮತ್ತು ಒಕ್ಕೂಟ ಸರ್ಕಾರದ ವಿರೋಧ ಪಕ್ಷದ ನಾಯಕರಾಗಿದ್ದ ಹಿರಿತನದ ಅನುಭವ ಕಾರಣ ಎನ್ನುವುದು ಸ್ಪಷ್ಟ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಎರಡೂ ಮಹತ್ವದ ಸ್ಥಾನಗಳಿಗೆ ಸ್ಫರ್ಧಿಯಾಗಲು ಕಾರಣ ಅವರ ಸ್ವಚ್ಛ ಮತ್ತು ಜನಪರ ವ್ಯಕ್ತಿ ತ್ವಗಳು ಪ್ರಮುಖ ಕಾರಣವಾದರೆ ಸಿದ್ಧರಾಮಯ್ಯ ದೇಶದ ಬಹುಸಂಖ್ಯಾತ ಹಿಂದುಳಿದ ವರ್ಗಗಳ ಪ್ರಬಲ, ಸಮರ್ಥ, ನಿಷ್ಠೂರ ನಾಯಕ ಎನ್ನುವ ವಿಶೇಶ ಗುಣಗಳೇ ಕಾರಣ ಎನ್ನಲಾಗುತ್ತಿದೆ.
