ಸಮಾಜಮುಖಿ ಒಂದು ಸಮಾಜದ ಪ್ರತಿಬಿಂಬವಾಗಬಲ್ಲ ಸದ್ಚಿಂತನೆ, ಸಮಾಜಕ್ಕೇ ಮೀಸಲಾದ ಒಂದು ಯೋಚನೆ,ಸುಂದರಕಲ್ಫನೆ. ಉತ್ತಮಸಮಾಜ,ಸದ್ಚಿಂತನೆಗಳು ಎಲ್ಲೆಡೆಯಿಂದ ಬರಲಿ ಎನ್ನುವ ಒಂದು ಸರ್ವೋತ್ತಮ, ಸರ್ವೋದಯದ ಕನಸು. ದೇಶೀಚಿಂತನೆ, ತಾಂತ್ರಿಕ ಸದ್ಭಳಕೆ ಹೊಸಚಿಗುರಿನ ಹಳೆಬೇರು ಸದೃಢವಾಗಿರಬೇಕೆಂಬ ಹೆಬ್ಬಯಕೆಯ ಒಂದು ಸುಂದರ ಕನಸು.
ಇಲ್ಲಿ ಮತೀಯವಾದ, ಅಸಮಾನತೆ ಆಧಾರದ ಮನುಚಿಂತನೆಗೆ ಜಾಗವಿಲ್ಲ. ನಮ್ಮ ಭಾರತೀಯತೆಗೆ ಜಾತಿ-ಧರ್ಮ,ಪ್ರಾದೇಶಿಕತೆಯ ಹಂಗಿಲ್ಲ, ಇದಕ್ಕಿಂತ ಮುಂದೆ ಹೋಗಿ ಕುವೆಂಪು ಪ್ರತಿಪಾದಿತ ವಿಶ್ವಶಾಂತಿ, ವಿಶ್ವಭ್ರಾತೃತ್ವ, ವಿಶ್ವಕುಟುಂಬದ ಪರಿಕಲ್ಫನೆ ನಮ್ಮ ಧ್ಯೇಯವಾಕ್ಯ, ಬದ್ಧತೆ.. ಸಮಾಜಮುಖಿ ಕಟ್ಟಿಕೊಂಡ ಕನಸಿಗೆ ಈಗ ಎರಡುದಶಕದ ಹರೆಯ. ಸ್ಫಷ್ಟತೆ,ನಿಖರತೆ,ನೇರ ವಿನಯವಂತಿಕೆಯ ಸರ್ವೋದಯದ ಕನಸೆ ನಮ್ಮ ಗುರಿ, ಧ್ಯೇಯ. ಮನುಷ್ಯ, ಮನುಷ್ಯತ್ವ, ಮಾನವೀಯತೆ,ಸತ್ಯ,ಅಹಿಂಸೆ, ಹೋರಾಟದ ಧ್ಯೇಯದ ಈ ಕನಸು ಎಲ್ಲರಿಗೂ ಇಷ್ಟವಾಗಬೇಕು, ಎಲ್ಲರದ್ದಾಗಬೇಕು. ವಿಶ್ವವೇ ಪುಟ್ಟಹಳ್ಳಿ, ಆ ಹಳ್ಳಿಯ ಮಾಹಿತಿ,ರಂಜನೆ,ಜಾಗೃತಿಯ ತಿಳುವಳಿಕೆ ನಮ್ಮ ಉದ್ದೇಶ. ಸಮಾಜಮುಖಿ ಸಮಾಜದ ಮುಖ, ಮುಖವಾಣಿ. ಅಪರಿಮಿತ ಕನಸಿನ ವೈವಿಧ್ಯಮಯ ಮರಗಿಡಗಳ ಸುಂದರ ತೋಟ. ವಿಶ್ವವೇ ಸುಂದರ ಉದ್ಯಾನವನವಾದರೆ ಸಮಾಜನಂದನವನವಾಗಬಲ್ಲುದಲ್ಲವೆ? ಈ ಕನಸು ನಿಮ್ಮದೂ ಆಗಿರಬಹುದು ಹಾಗಾಗಿ ಸಮಾಜಮುಖಿ ಸಮಾಜದ ನಿತ್ಯ ಕನಸು, ಎಂದೂ ಮುಗಿಯದ ಸುಂದರ ಕನಸು.