ಕಾಗೋಡು ಹೋರಾಟಗಾರ ತಿಮ್ಮಪ್ಪ@ 89

ಇಂದು ಕಾಗೋಡು ತಿಮ್ಮಪ್ಪ ತಮ್ಮ 89 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ತಿಮ್ಮಪ್ಪ ಕಾಗೋಡು ತಿಮ್ಮಪ್ಪ ಎಂದು ಖ್ಯಾತರಾಗುವ ಮೊದಲು ನಮ್ಮಂತೆ ಹಳ್ಳಿಗಾಡ ಹುಡುಗ. ಛಲದಿಂದ ವಿದ್ಯೆ ಕಲಿಯುತ್ತಾ ವಕೀಲರಾಗುವವರೆಗೆ ತಿಮ್ಮಪ್ಪ ಸಮಾಜದ ಎಲ್ಲಾ ಸೊಗಸು ಅಪಸವ್ಯಗಳನ್ನು ನೋಡುತ್ತಾ ಬೆಳೆದವರು. ಇವರ ಗುರು ಎಚ್. ಗಣಪತಿಯಪ್ಪ ಗಾಂವಟಿಶಾಲೆ ಮಾಸ್ತರ್ ಆಗಿ ಹಿರೆನೆಲ್ಲೂರಿನಲ್ಲಿ ಮಕ್ಕಳಿಗೆ ಪಾಠ ಮಾಡುತಿದ್ದವರು. ಜಮೀನ್ಧಾರರ ದಬ್ಬಾಳಿಕೆ ಬಗ್ಗೆ ತನ್ನ ವಿದ್ಯಾರ್ಥಿಗಳಿಗೆ ಹೇಳುವುದು, ಕೇಳುವುದನ್ನು ಅರಿತ ಮೇಲ್ವರ್ಗದವರು ಗಣಪತಿಯಪ್ಪನವರಿಗೆ ಶಾಲೆಗೆ ಸ್ಥಳ ನಿರಾಕರಿಸುತ್ತಾರೆ. ವಾಸ್ತವದಲ್ಲಿ ಶಿಕ್ಷಕ ಹೋರಾಟಕ್ಕೆ ಬೀಜಬಿತ್ತುವುದನ್ನು ಒಪ್ಪದ ಜಮೀನ್ಧಾರರು ಗಣಪತಿಯಪ್ಪನವರಿಗೆ ಜಾಗ ಇಲ್ಲ ಎಂದಾಗ ಆ ಭಾಗದ ಜನ ಸಾಮಾನ್ಯ ಗೇಣಿದಾರರು ಗಣಪತಿಯಪ್ಪನವರನ್ನು ಶಿಕ್ಷಕ ಎಂದು ಒಪ್ಪಿಕೊಳ್ಳತ್ತಾರೆ. ಮತ್ತು ಹೊಸ ಜಾಗ ಮಾಡಿಕೊಡುತ್ತಾರೆ.

ಈ ಅವಧಿಯಲ್ಲಿ ವಿದ್ಯಾರ್ಥಿ, ಶ್ರೀಸಾಮಾನ್ಯನಾಗಿರಬಹುದಾದ ತಿಮ್ಮಪ್ಪ ನಂತರ ವಕೀಲಿಕೆ ಕಲಿತು ಮತ್ತೆ ಗಣಪತಿಯಪ್ಪ, ಗೋಪಾಲಗೌಡ, ಲೋಹಿಯಾರ ವಿದ್ಯಾರ್ಥಿಯಾಗುತ್ತಾರೆ. ಹೀಗೆ ಸಮಾಜವಾದ, ಹೋರಾಟವನ್ನು ಚಿಕ್ಕಂದಿನಿಂದಲೇ ನೋಡುತ್ತಾ, ಮಾಡುತ್ತಾ ಬೆಳೆದ ಕಾಗೋಡು ತಿಮ್ಮಪ್ಪ ರಾಜಕೀಯವಾಗಿ ಬೆಳೆದು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಅವರು ಹಲವು ಬಾರಿ ಮಂತ್ರಿಯಾದರೂ ಮುಖ್ಯಮಂತ್ರಿಯಾಗಲೇ ಇಲ್ಲ. ಸಾಗರವನ್ನು ಸ್ವಾತಂತ್ರ್ಯ ನಂತರ ಅತಿ ಹೆಚ್ಚುಬಾರಿ ಪ್ರತಿನಿಧಿಸಿದ ಕಾಗೋಡು ಹುಡುಗ ಯಾನೆ ಕಾಗೋಡು ಅಜ್ಜ ತಿಮ್ಮಪ್ಪ ಸಮಾಜವಾದಿಯಾಗಿ ಕೂಟ ಕಟ್ಟಲಿಲ್ಲ. ತಮ್ಮ ಓರಗೆಯವರೆಲ್ಲಾ ರಾಜಕೀಯದ ಹೊಸ ಪಟ್ಟು,ರೀತಿ-ನೀತಿಗಳನ್ನು ಕಲಿತು ಏಣಿ ಹತ್ತುವ ಕಸರತ್ತು ಮಾಡುತಿದ್ದಾಗ ತಿಮ್ಮಪ್ಪ ಜನಪರವಾಗಿ ಯೋಚಿಸುತ್ತಾ ಸಮಾಜವಾದಕ್ಕೆ ಗೌರವ ಬರುವಂತೆ ನಡೆದುಕೊಂಡರು.

ಈಗ ರಾಜ್ಯದ ಹಿರಿಯ ರಾಜಕಾರಣಿಯಾಗಿ ಜನರ ನಡುವೆ ಇರುವ ಕಾಗೋಡು ತಿಮ್ಮಪ್ಪ ಕಾಂಗ್ರೆಸ್, ಪ್ರಜಾಸಮಾಜವಾದಿ ಪಕ್ಷ, ಜನತಾ ಪಕ್ಷ ಹೀಗೆ ತಮ್ಮ ಓಡಾಟ, ಒಡನಾಟವನ್ನು ಜನಪರ ಜಾತ್ಯಾತೀತರ ಜೊತೆ ಇಟ್ಟುಕೊಂಡರೇ ಹೊರತು ಎಲ್ಲಿಯೂ ಮತೀಯವಾದಿಗಳೊಂದಿಗೆ ಕೈ ಜೋಡಿಸಲಿಲ್ಲ. ಲೋಕೋಪಯೋಗಿ, ಸಮಾಜಕಲ್ಯಾಣ, ಕಂದಾಯಗಳಂಥ ಮಹತ್ವದ ಖಾತೆಗಳ ಸಚಿವರಾಗಿ ತಿಮ್ಮಪ್ಪ ಮಾಡಿದ ಕೆಲಸ ಇತರರಿಗೆ ಅನುಕರಣೀಯ. ಸಾಗರ-ಶಿವಮೊಗ್ಗ ಗಳಲ್ಲಿ ಸರ್ಕಾರಿ ಸಂರಚನೆ, ಜನರ ಕೆಲಸ, ಬಗರಹುಖುಂ. ಅಕ್ರಮ ಸಕ್ರಮ ಯಾವುದೇ ಕೆಲಸದ ಹಿಂದೆ ಅವರ ಬದ್ಧತೆ,ನಿಷ್ಠೂರತೆ ಕಣ್ಣಿಗೆ ರಾಚುವಷ್ಟು ಪ್ರಖರ.

ಪಂಚೆ ಉಡುವ ಜನಸಾಮಾನ್ಯ ಹಳ್ಳಿಗನಿಂದ ಹಿಡಿದು ಮಂತ್ರಿ ಮಹೋದಯರು, ಅಧಿಕಾರಿಗಳು ಎಲ್ಲರನ್ನೂ ಏಕವಚನದಲ್ಲೇ ಸಂಭೋದಿಸುವ ಕಾಗೋಡು ಅಜ್ಜ ಕೆಲಸ, ವೈಚಾರಿಕತೆಯ ವಿಚಾರದಲ್ಲಿ ಹಿರಿಯಜ್ಜ. ರಾಜ್ಯದ ಮೌಢ್ಯ ನಿಷೇಧ ಕಾಯಿದೆ ರಚನೆ ಇರಲಿ, ಸಿಗಂದೂರಿನ ವಿಚಾರವಿರಲಿ ಹೇಳಬೇಕಾದ್ದನ್ನು ನೇರವಾಗಿ ಹೇಳುವ ಛಾತಿಯ ಈ ಹೋರಾಟಗಾರ ಮತೀಯವಾದಿ ಮಾತಿನ ಅನಂತಕುಮಾರ ಹೆಗಡೆಯವರನ್ನು ಯಾವನ? ಎಂದು ಗತ್ತಿನಿಂದ ಛೇಡಿಸಿದಂತೆ ಶಾಸಕ ಕಾಗೇರಿಯವರನ್ನು ಏ ಕಾಗೇರಿ ನಂಗೊತ್ತಿಲ್ಲನ ನಿನ್ನ ಕ್ಷೇತ್ರದ್ ಕತೆ ಎನ್ನುವವರೆಗೆ. ದೇಶಪಾಂಡೆ, ಧರ್ಮಸಿಂಗ್, ಖರ್ಗೆಯವರಂಥ ಹಿರಿಯರಿಗೂ ಏಕವಚನದಲ್ಲೇ ಮಾತನಾಡಿಸಿ ತಿವಿಯುವ ಕಾಗೋಡು ಮಾತಿನಲ್ಲಿ, ನಡತೆಯಲ್ಲಿ, ನಡವಳಿಕೆಯಲ್ಲಿ ಎಲ್ಲೂ ರಾಜಿ ಇಲ್ಲದ ಧೀರ, ಇವರಲ್ಲಿ ನಾ ಟಕೀಯತೆ ಕಾಣಲೂ ಸಾಧ್ಯವಿಲ್ಲ. ಇಂಥ ಹಿರಿಯಜ್ಜ ತೀನಾ ಶ್ರೀನಿವಾಸರೊಂದಿಗೆ ನನ್ನ ಕಛೇರಿಯ ಎದುರು ಬಂದು ಏನಾದರೂ ಮಾಡುತಿರು ಮಂಕುತಿಮ್ಮ ಎಂದು ಆಶೀರ್ವದಿಸಿದ್ದು ಎಂದಿಗೂ ಮರೆಯದ ನೆನಪು.

ಮಾಜಿಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕಾಲದಿಂದ ಅರಸು, ಬಂಗಾರಪ್ಪ,ಎಸ್.ಎಂ.ಕೃಷ್ಣ, ಕುಮಾರಸ್ವಾಮಿಯವರವರೆಗೆ ಅನೇಕ ಮುಖ್ಯಮಂತ್ರಿಗಳು, ಮಂತ್ರಿಗಳು, ಅಧಿಕಾರಿಗಳು, ಪ್ರಭಾವಿಗಳು ಎಲ್ಲರೊಂದಿಗೆ ಕೆಲಸ ಮಾಡಿದರೂ ಯಾರೊಂದಿಗೂ ರಾಜಿ ಮಾಡಿಕೊಳ್ಳದ ತಿಮ್ಮಪ್ಪ 90 ದಶಕಗಳಲ್ಲಿ 70 ದಶಕಗಳನ್ನು ಹೋರಾಟ, ಅಧಿಕಾರ, ಜನನೇತೃತ್ವ, ಜನಹೋರಾಟ, ಜನಪರತೆಗಾಗಿ ಮುಡಿಪಾಗಿಟ್ಟಿದ್ದಾರೆ. ಈಗಲೂ ಹೊಸ ಹುಡುಗನಂಥ ಉತ್ಸಾಹದ ಕಾಗೋಡು ಅಜ್ಜ ಎಲ್ಲರಿಗೂ ಮಾದರಿ. ನೂರಾರು ವರ್ಷ ಉಳಿಯಬಹುದಾದ ಕೆಲಸ, ಅಭಿವೃದ್ಧಿ, ಸಾಧನೆ ಮಾಡಿರುವ ಕಾಗೋಡು ತಿಮ್ಮಪ್ಪ ನೂರಾರು ವರ್ಷ ಬದುಕಿ ಬಾಳುವಂತಾಗಲಿ ಎನ್ನುವ ಶುಭ ಹಾರೈ ಕೆಗಳೊಂದಿಗೆ ಅವರಿಗೆ ಸಮಾಜಮುಖಿಯ ಹುಟ್ಟುಹಬ್ಬದ ಶುಭಾಶಯ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *