

ರೈತ ಸಂಘಟನೆಗಳ ಕರೆಯ ಮೇರೆಗೆ ಇಂದು ರಾಜ್ಯಾದ್ಯಂತ ನಡೆದ ಕೃಷಿಕಾರ್ಮಿಕರ ಪ್ರತಿಭಟನೆ, ಬಂದ್ ಗೆ ಮಲೆನಾಡು, ಕರಾವಳಿ ಭಾಗ ಸ್ಫಂದಿಸಿದೆ. ಕರಾವಳಿಯ ಕಾರವಾರ ಅಂಕೋಲಾಗಳಿಂದ ಪ್ರಾರಂಭವಾರ ರೈತರು, ಕಾರ್ಮಿಕರು. ಕನ್ನಡಪರ ಸಂಘಟನೆಗಳ ಬಂದ್, ಪ್ರತಿಭಟನಾ ಮೆರವಣಿಗೆಗಳು ರಾಜ್ಯದಾದ್ಯಂತ ಅನುರಣಿಸಿದಂತೆ ಶಿವಮೊಗ್ಗ, ಸಾಗರ, ಸೊರಬ ಸಿದ್ಧಾಪುರ, ಶಿರಸಿಗಳಲ್ಲೂ ನಡೆದವು.
ಬೆಂಗಳೂರಿನಿಂದ ಮೊದಲ್ಗೊಂಡು ರಾಜ್ಯದ ಬಯಲುಶೀಮೆ, ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಬಂದ್ ನಡೆಸಿ, ಪ್ರತಿಭಟನಾ ಮೆರವಣಿಗೆ ನಡೆಸಿದ ನಾನಾ ಸಂಘಟನೆಗಳು ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಸ್ಥಳಿಯ ಆಡಳಿತಗಳ ಮೂಲಕ ಮನವಿ ಮಾಡಿ ಭೂಸುಧಾರಣೆ, ಕೃಷಿ ಉತ್ಫನ್ನ ಮಾರುಕಟ್ಟೆ, ಕಾರ್ಮಿಕ ಕಾನೂನುಗಳ ತಿದ್ದುಪಡಿಗಳನ್ನು ಹಿಂದೆ ಪಡೆದು ರೈತರು, ಕಾರ್ಮಿಕರು, ಬಡವರನ್ನು ರಕ್ಷಿಸಲು ಮನವಿ ಮಾಡಲಾಯಿತು.






