mahendra thaar spl- ಮಹೇಂದ್ರಾ ಥಾರ್-2020 ರ ಮೊದಲ ವಾಹನ ಮಾರಾಟವಾಗಿದ್ದು ಬರೊಬ್ಬರಿ 1.11 ಕೋಟಿ ರೂ.ಗೆ, ವಿಶೇಷತೆ ಏನು ಗೊತ್ತೇ?

ಮಹೇಂದ್ರಾ ಥಾರ್-2020 ನ ಮೊದಲ ವಾಹನ ಬರೊಬ್ಬರಿ 1.11 ಕೋಟಿಗೆ ಮಾರಾಟಗೊಂಡಿದೆ. 

First Mahindra Thar 2020 auctioned at Rs 1.11 crore; why is it so special?

ಮಹೇಂದ್ರಾ ಥಾರ್-2020 ನ ಮೊದಲ ವಾಹನ ಬರೊಬ್ಬರಿ 1.11 ಕೋಟಿಗೆ ಮಾರಾಟಗೊಂಡಿದೆ. 

ಇದೇನು ಈ ವಾಹನದಲ್ಲಿ ಅಂತಹ ವೈಶಿಷ್ಟ್ಯತೆ ಏನಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

 ಮಹೇಂದ್ರ &ಮಹೇಂದ್ರ ಸಂಸ್ಥೆ  ಕೋವಿಡ್-19 ಪರಿಹಾರ ಕಾರ್ಯಕ್ಕಾಗಿ 1.1 ಕೋಟಿ ಥಾರ್ 2020 ಯ ಮೊದಲ ಯುನಿಟ್ ನ್ನು ಆನ್ ಲೈನ್ ಹರಾಜಿಗಿಡಲಾಗಿತ್ತು.  ದೇಶಾದ್ಯಂತ 550 ಲೊಕೇಷನ್ ಗಳಿಂದ 5,500 ಎಂಟ್ರಿಗಳು ಬಂದಿತ್ತು. 

ಮೂಲ ಬೆಲೆ 25 ಲಕ್ಷಕ್ಕಿಂತ 4 ಪಟ್ಟು ಹೆಚ್ಚಿನ ಅಂದರೆ 1.11 ಕೋಟಿ ರೂಪಾಯಿಗಳಿಗೆ ದೆಹಲಿಯ ಆಕಾಶ್ ಮೈಂಡಾ ಎಂಬುವವರು ಬಿಡ್ ಮಾಡಿ ಮೊದಲ ಮಹೇಂದ್ರ ಥಾರ್ ವಾಹನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಡಿ ಬಿಡ್ಡಿಂಗ್ ನ ಆದಾಯವನ್ನು ಕೋವಿಡ್-19 ಪರಿಹಾರ ಕಾರ್ಯಕ್ರಮಗಳಿಗೆ ಬಳಕೆ ಮಾಡಲು ಸ್ವೀಕರಿಸುವುದಕ್ಕೆ ಆಕಾಶ್ ಸ್ವದೇಶ್ ಫೌಂಡೇಷನ್ ನ್ನು ಆಯ್ಕೆ ಮಾಡಿದ್ದಾರೆ ಎಂದು ಮಹೇಂದ್ರ ಸಂಸ್ಥೆ ತಿಳಿಸಿದೆ. 

ಒಟ್ಟಾರೆ ಭಾಗಿಯಾಗಿದ್ದ ಬಿಡ್ಡರ್ ಗಳ ಪೈಕಿ 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು 37 ಬಿಡ್ಡರ್ ಗಳು ಬಿಡ್ ಮಾಡಿದ್ದರು. ನಾಲ್ವರು 1 ಕೋಟಿಗೂ ಮೀರಿ ಬಿಡ್ ಮಾಡಿದ್ದರು. ಒಟ್ಟಾರೆ ಅತಿ ಹೆಚ್ಚು ಬಿಡ್ ಮಾಡಿದ ಬಿಡ್ಡರ್ ಗಳ ಒಟ್ಟಾರೆ ಮೊತ್ತ 35.70 ಕೋಟಿ ರೂಪಾಯಿಯಾಗಿದೆ. 

ಸೆ.19 ರಂದು ಆನ್ ಲೈನ್ ನೋಂದಣಿ ಪ್ರಾರಂಭವಾಗಿ ಸೆ.24 ರಂದು ಹರಾಜು ಪ್ರಕ್ರಿಯೆ ಪ್ರಾರಂಭವಾಗಿ ಸೆ.29 ರಂದು ಮುಕ್ತಾಯಗೊಂಡಿತ್ತು. ಬಿಡ್ಡರ್ ಗಳ ಪೈಕಿ ಚಿಕ್ಕಮಗಳೂರಿನ ವಿಶ್ವನಾಥ್ ಎಂಬುವವರೂ ಒಬ್ಬರಾಗಿದ್ದರು ಎಂಬುದು ವಿಶೇಷ. 

ಹರಾಜು ಪ್ರಕ್ರಿಯೆಯ ವಿಜೇತರಿಗೆ ಥಾರ್ ಆವೃತ್ತಿಗೆ ಸಂಬಂಧಿಸಿದಂತೆ ಒಂದಷ್ಟು ವಿಶೇಷ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಹರಾಜುಗೊಂಡಿರುವ ಥಾರ್ ಕಾರನ್ನು ಥಾರ್ #1 ಬ್ಯಾಡ್ಜ್ ನೊಂದಿಗೆ ಅಲಂಕರಿಸಲಾಗುತ್ತದೆ ಈ ಮೂಲಕ ಕಾರಿನ ಮಾಲಿಕರು ಥಾರ್ ನ್ನು ಖರೀದಿಸಿದ ಮೊದಲ ವ್ಯಕ್ತಿ ಎಂಬುದನ್ನು ಸೂಚಿಸಲಾಗುತ್ತದೆ. ಅಷ್ಟೇ ಅಲ್ಲದೇ ಮಾಲಿಕರ ಹೆಸರಿನ ಮೊದಲ ಅಕ್ಷರಗಳನ್ನು ಥಾರ್ #1 ಬ್ಯಾಡ್ಜ್ ನೊಂದಿಗೆ ಹಾಕಲಾಗುತ್ತದೆ.  (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಪೆಟ್ರೋಲ್‌ ಬಂಕ್‌ ಕೆಲಸಗಾರ ಗ್ರಾ.ಪಂ. ಅಧ್ಯಕ್ಷ…..! ಕಾಯಕವೇ ಕೈಲಾಸ ಎನ್ನುವುದೇ ಈತನ ಧ್ಯೇಯ.

ಭಾರತದ ಪ್ರಜಾಪ್ರಭುತ್ವ ಒಬ್ಬ ಚಾ ಮಾರುವ ಅಶಿಕ್ಷಿತನನ್ನು ಪ್ರಧಾನಿ ಮಾಡಿದೆ. ದಲಿತರೊಬ್ಬರನ್ನು ರಾಷ್ಟ್ರಪತಿಮಾಡಿದೆ, ಮಹಿಳೆಯರು ಪ್ರಧಾನಿ, ರಾಷ್ಟ್ರಪತಿಗಳಾಗಿ ವಿಜೃಂಬಿಸಿದ್ದಾರೆ. ಒಬ್ಬ ಬುಡಕಟ್ಟು ಮಹಿಳೆ ದೇಶದ...

ಎನ್.ಪಿ. ಗಾಂವ್ಕರ್‌ ಇನ್ನಿಲ್ಲ

ಉತ್ತರ ಕನ್ನಡ ಡಿ.ಸಿ.ಸಿ. ಬ್ಯಾಂಕಿನ ಮಾಜಿ ಎಂ.ಡಿ. ,ನಿರ್ಧೇಶಕ ನಾಗೇಶ್‌ ಪಿ.ಗಾಂವ್ಕರ್‌ ಮಂಗಳವಾರ ನಿಧನರಾಗಿದ್ದಾರೆ. ಕರಾವಳಿ ತೀರದಿಂದ ವಲಸೆ ಬಂದು ಶಿರಸಿಯಲ್ಲಿ ನೆಲೆನಿಂತು ಡಿ.ಸಿ.ಸಿ....

ಒಕ್ಕಲಿಗರ ಸಂಘದಿಂದ ಸರ್ಕಾರ ಬೀಳಿಸುವ ಎಚ್ಚರಿಕೆ!

ಜಾತಿ ಗಣತಿ ವರದಿ ಹಿಂಪಡೆಯದಿದ್ದರೆ ಸರ್ಕಾರ ಉಳಿಯಲ್ಲ: ಒಕ್ಕಲಿಗರ ಸಂಘ ಎಚ್ಚರಿಕೆ ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ...

yakshagana- ಕಲಾ ಸಂಸ್ಕಾರದಿಂದ ಬದುಕಿನ ಮೌಲ್ಯ ವೃದ್ಧಿ:- ಶಂಕರ ಭಟ್

ಸಿದ್ದಾಪುರ:- ಯಕ್ಷಗಾನ ಹಲವು ಕಲೆಗಳ ಸಂಗಮವಾಗಿದ್ದು ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಮುಂತಾದ ಅನೇಕ ತತ್ವ – ಸಿದ್ಧಾಂತಗಳು ಇದರಲ್ಲಿ ಅಡಕವಾಗಿವೆ. ಈ ಕಲೆಯ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *