

: ರಾಜ್ಯಪಾಲರ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ-ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ನಡುವಿನ ಮಾತಿನ ಸಮರ ಎಂದಿನಂತೆ ಮುಂದುವರೆದಿದ್ದು, ರಾಜ್ಯಪಾಲರು ಆರ್’ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣವನ್ನು ಅನುಸರಿಸಲಿ ಎಂದು ಉದ್ಧವ್ ಠಾಕ್ರೆ ಸಲಹೆ ನೀಡಿದ್ದಾರೆ.

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ನಡುವಿನ ಮಾತಿನ ಸಮರ ಎಂದಿನಂತೆ ಮುಂದುವರೆದಿದ್ದು, ರಾಜ್ಯಪಾಲರು ಆರ್’ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣವನ್ನು ಅನುಸರಿಸಲಿ ಎಂದು ಉದ್ಧವ್ ಠಾಕ್ರೆ ಸಲಹೆ ನೀಡಿದ್ದಾರೆ.

ವಿಜಯದಶಮಿ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ವೈರಸ್ ಕಾರಣದಿಂದಾದಿ ನಾವಿನ್ನೂ ಮಂದಿರಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಹಿಂದುತ್ವದ ಬಗ್ಗೆ ನಮಗೆ ಪ್ರಶ್ನೆ ಮಾಡುತ್ತಿದ್ದಾರೆಂದು ರಾಜ್ಯಪಾಲರ ಹೆಸರನ್ನು ಉಲ್ಲೇಖಿಸದೆಯೇ ವಾಗ್ದಾಳಿ ನಡೆಸಿದ್ದಾರೆ.
ನೀವು ನಮ್ಮ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದೀರಿ. ಆದ್ದರಿಂದ ಮಹಾರಾಷ್ಟ್ರದಲ್ಲಿ ನೀವು ಗೋಮಾಂಸವನ್ನು ನಿಷೇಧಿಸುತ್ತೀರಿ. ಆದರೆ, ಗೋವಾದಲ್ಲಿ ನಿಮಗೆ ಗೋಮಾಂಸ ಏನೂ ಮಾಡುವುದಿಲ್ಲ. ಇದು ನಿಮ್ಮ ಹಿಂದುತ್ವವೇ..? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮೋಹನ್ ಭಾಗವತ್ ಅವರ ಭಾಷಣವನ್ನು ಉಲ್ಲೇಖಿಸಿರುವ ಠಾಕ್ರೆಯವರು, ಭಾಗವತ್ ಅವರು ಇಂದು ಹಿಂದುತ್ವವು ಪೂಜೆಗಳೊಂದಿಗೆ ಮಾತ್ರ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಕೆಲವರು ಕಪ್ಪು ಟೋಪಿ ಧರಿಸಿ ನಮ್ಮ ನಂಬಿಕೆಗಳನ್ನು ಪ್ರಶ್ನಿಸಿ ನಮ್ಮನ್ನು ಜಾತ್ಯಾತೀತ ಎಂದು ಕರೆಯುತ್ತಿದ್ದಾರೆ. ಅಂತವಹು ಭಾಗವತ್ ಅವರ ಭಾಷಣವನ್ನು ಕೇಳಲಿ ಎಂದು ಹೇಳಿದ್ದಾರೆ.
ಯಾರಾದರೂ ನಮಗೆ ಸವಾಲು ಹಾಕಲು ಬಯಸಿದರೆ, ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎಂದು ಇದೇ ವೇಳೆ ಎಚ್ಚರಿಸಿದ್ದಾರೆ.
ಹಿಂದುತ್ವಕ್ಕೆ ಧಾರ್ಮಿಕ ಅರ್ಥ ಸೇರಿದ ಅದನ್ನು ವಿರೂಪಗೊಳಿಸಲಾಗಿದೆ ಎಂದು ಇದೇ ವೇಳೆ ಠಾಕ್ರೆ ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದುತ್ವದ ತಪ್ಪು ಕಲ್ಪನೆಯನ್ನು ಸಂಘ ಉತ್ತೇಜಿಸುವುದಿಲ್ಲ. ಇದು ನಮ್ಮ ಗುರುತನ್ನು ವ್ಯಕ್ತಪಡಿಸುವ ಪದವಾಗಿದೆ. ಆಧ್ಯಾತ್ಮಿಕತೆ ಆಧಾರಿತ ಸಂಪ್ರದಾಯಗಳ ನಿರಂತರತೆ ಮತ್ತು ಭಾರತದ ಭೂಮಿಯಲ್ಲಿನ ಮೌಲ್ಯ ವ್ಯವಸ್ಥೆ, ಸಂಪೂರ್ಣ ಸಂಪ ತ್ತು ಎಂದು ಭಾಗವತ್ ಅವರು ಹಿಂದುತ್ವದ ಕುರಿತು ವಿವರಿಸಿದ್ದರು. (kpc)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
