ಹೊರನಾಡ ಕನ್ನಡ ಕುಟುಂಬ

ಕನೆಟಿಕಟ್ ಕುರಿತ ಬಹಗಳಲ್ಲಿ ಇದನ್ನ ಎರಡನೇಯದಾಗಿ ಪೋಸ್ಟ್ ಮಾಡುವ ಯೋಚನೆ ಮಾಡಿದ್ದೆ. ಆದರೆ ಇಂದು ರಾಜ್ಯೋತ್ಸವವಾದ ಕಾರಣ ಇದನ್ನೇ ಮೊದಲು ಹಾಕುತ್ತಾ ಇದ್ದೇನೆ.

ಕರ್ನಾಟಕದ ಹೊರಗೆ ಇದುವರೆಗೂ ನಾನು ಸುಮಾರು ಆರು ವರ್ಷಗಳನ್ನ ಕಳೆದಿದ್ದೇನೆ. ನಾವು ಊರ ಹೊರಗಾಗಲೀ ಅಥವಾ ನಾಡ ಹೊರಗಾಗಲೀ ಇದ್ದಾಗ ಅತೀ ಹೆಚ್ಚು ನಮ್ಮನ್ನ ಕಾಡುವುದು ನಮ್ಮ ಭಾಷೆ. ಅದರಲ್ಲೂ ಹೊಸದಾಗಿ ಹೋದಾಗ ಒಂದು ರೀತಿಯ ಅನಾಥ ಪ್ರಜ್ಞೆ ನಮ್ಮನ್ನ ಕಾಡುತ್ತದೆ. ಹೀಗಿರುವಾಗ ನಮ್ಮ ನುಡಿ ಕೇಳಿದಾಗ ಆಗುವ ಸಂತೋಷವೇ ಬೇರೆ. ಕನ್ನಡವನ್ನು, ಅದರಲ್ಲೂ ಹವಿಗನ್ನಡವನ್ನೋ ಅಥವಾ ಸಿದ್ದಾಪುರದ ಸ್ಥಳೀಯ ಕನ್ನಡವನ್ನೋ ಕೇಳಿದಾಗ ನನಗೆ ಸ್ವರ್ಗ ಸಿಕ್ಕಷ್ಟೇ ಖುಷಿಯಾಗುತ್ತದೆ.

ಮುಂಬೈಯಲ್ಲಿ ದಕ್ಷಿಣ ಕನ್ನಡಿಗರನ್ನ ಬಿಟ್ಟಿರೆ, ಉಳಿದೆಡೆ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ತಮ್ಮ ಛಾಪನ್ನ ಮೂಡಿಸಿದ್ದು. ತಮ್ಮ ಅಸ್ಮಿತೆಯನ್ನ ಉಳಿಸಿಕೊಂಡು ಒಂದು ಸಮುದಾಯವಾಗಿ ರೂಪುಗೊಂಡಿದ್ದು ಕಡಿಮೆ. ಹೊರದೇಶಗಳಲ್ಲೂ ಮಲಯಾಳಿಗಳಿಗೆ, ತೆಲುಗರಿಗೆ, ಗುಜರಾತಿ ತಮಿಳು ಪಂಜಾಬಿಗಳಿಗೆ ಹೋಲಿಸಿದರೆ ಸಂಖ್ಯಾತ್ಮಕವಾಗಿ ನಾವಲ್ಲಿ ಬಹಳ ಚಿಕ್ಕವರು (ಸ್ವಲ್ಪ ಮಟ್ಟಿಗೆ ಕೊಲ್ಲಿ ದೇಶಗಳು ಇದಕ್ಕೆ ಅಪವಾದ). ಆದರೂ ಅನೇಕ ಕನ್ನಡ ಕನ್ನಡಿಗರ ಸಂಘಟನೆಗಳು ಉತ್ತಮ ಕಾರ್ಯ ಮಾಡುತ್ತಿವೆ.

ನಾಡಿನ ಹೊರಗಿದ್ದಾಗ ಕಾರಣಾಂತರಗಳಿಂದ ಅಲ್ಲಿನ ಸ್ಥಳೀಯ ಕನ್ನಡ ಕೂಟಗಳಲ್ಲಿ ಕೆಲಸ ಮಾಡೋ ಕಿಂಚಿತ್ ಅವಕಾಶವೂ ಸಿಕ್ಕಿರಲಿಲ್ಲ. ಆ ಬೇಸರವನ್ನು ನೀಗಿಸಿದ್ದು ಕನೆಟಿಕಟ್. ಅಲ್ಲಿನ ‘ಹೊಯ್ಸಳ ಕನ್ನಡ ಕೂಟ’ವು ಬಹಳ ಆಪ್ತವಾಗಿತ್ತು, ಕನಿಷ್ಟ ಒಂದು ದಿನವಾದರೂ ಚೂರು ಕೆಲಸ ಮಾಡೋ ಅವಕಾಶ ಸಿಕ್ಕಿತ್ತು.

ಇದು ಚಿಕ್ಕ ರಾಜ್ಯವಾದ ಕಾರಣ ಇಡೀ ರಾಜ್ಯಕ್ಕೆ ಇಲ್ಲಿರುವುದು ಒಂದೇ ಕನ್ನಡ ಕೂಟ. ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುವ ಕೂಟಗಳಲ್ಲಿ ಒಂದು. ಈ ರಾಜ್ಯದಲ್ಲಿ ನೆಲೆಸಿರುವ ನಮ್ಮೂರ ಅಕ್ಕನ ಮೂಲಕ ಮೊದಲ ಬಾರಿಗೆ ಕೂಟದ ಸಂಪರ್ಕವಾಯಿತು. ಯುಗಾದಿಯ ಸಂಭ್ರಮಕ್ಕೆ ಅತಿಥಿಯಾಗಿ ಬಂದವರು ಪ್ರವೀಣ್ ಗೋಡ್ಕಿಂಡಿ. ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿತ್ತು. ಸುಮಾರು ೫೦೦ ರ ಮೇಲೆ ಜನರಾಗಿದ್ದರೂ ಹೊಸಬರನ್ನ ಥಟ್ಟನೆ ಗುರುತಿಸಿ ಪರಿಚಯ ಮಾಡಿಕೊಂಡ ಕೂಟದ ನಾಯಕತ್ವದ ನಡೆ ಬಹಳ ಇಷ್ಟವಾಗಿತ್ತು.‌ ಒಂಥರಾ ಮನೆಗೆ ಹೊಸದಾಗಿ ಬಂದ ಅತಿಥಿಗಳ ಸ್ವಾಗತಿಸುವ ಹಾಗೇ. ಅಲ್ಲಿದ್ದಷ್ಟು ಕಾಲವು ಒಂದೂ ಕಾರ್ಯಕ್ರಮ ತಪ್ಪದಂತೆ ಹೋಗಲು ಕಾರಣವೂ ಕನ್ನಡ ಕೂಟದ ಪದಾಧಿಕಾರಿಗಳೇ.

ಕನ್ನಡಿಗರನ್ನ ಸಾಂಸ್ಕೃತಿಕವಾಗಿ ಒಂದಾಗಿಡಲು ಮತ್ತು ಪರಸ್ಪರ ಬೆರೆಯಲು ಯುಗಾದಿ, ದಸರಾ/ದೀಪಾವಳಿ, ಹೇಮಂತಗಾನ, ಪಿಕ್‌ನಿಕ್ ಮುಂತಾದ ಕಾರ್ಯಕ್ರಮಗಳನ್ನ ಆಯೋಜಿಸುತ್ತಾರೆ. ಕರ್ನಾಟಕದ ವಿವಿಧ ಪ್ರದೇಶ, ಸಮುದಾಯ, ಉಪಭಾಷೆಗಳಿಂದ ಬಂದ ಜನರು ಕೇವಲ ಕನ್ನಡದ ಹೆಸರಿನಲ್ಲಿ ಒಂದುಗೂಡುತ್ತಾರೆ. ಅಲ್ಲೇ ನೆಲೆ ನಿಲ್ಲುವ ಮುಂದಿನ ಪೀಳಿಗೆ ಕನ್ನಡತನದಿಂದ ದೂರ ಸರಿಯದಿರಲು ವಾರಾಂತ್ಯದ ಕನ್ನಡ ತರಗತಿಗಳ ನಡೆಸುತ್ತಾರೆ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

ನಾಳೆ ನೀವು ಕನೆಟಿಕಟ್ಟಿಗೆ ಹೋದರೆ ನೀವಾಗೆ ಅವರ ಸಂಪರ್ಕಿಸಲು ಕಾಯೋಲ್ಲ. ಅವರೇ ನಿಮ್ಮನ್ನ ಹುಡುಕಿ ಕರೆಮಾಡಿ ಏನಾದರೂ ಸಹಾಯ ಬೇಕೇ ಎಂದು ಕೇಳುತ್ತಾರೆ. ನಾವು ನಮ್ಮ ನಾಡ ಹೊರಗಿದ್ದಾಗ ಇರಬೇಕಾಗಿದ್ದು ಕೂಡಾ ಹೀಗೆಯೇ. ಕನ್ನಡಿಗರೆಲ್ಲ ಒಂದು ಕುಟುಂಬವಾಗಿ.

  • ಪಟದಲ್ಲಿರುವುದು ಇಲ್ಲಿನ ಕನ್ನಡ ಕೂಟದ ಸಾಂಸ್ಕೃತಿಕ ಕಾರ್ಯಕ್ರಮದ ಒಂದು ದೃಷ್ಯ.

ನಾನುನೋಡಿದಸ್ಟೇಟುಗಳು #ಕನೆಟಿಕಟ್

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *