

ಉತ್ತರ ಕನ್ನಡ ಜಿಲ್ಲೆ ಪ್ರತಿಶತ 70 ರಷ್ಟು ಅರಣ್ಯದಿಂದ ತುಂಬಿದೆ. ಈ ಜಿಲ್ಲೆಯ ಅರಣ್ಯ ಅತಿಕ್ರಮಣ ಸಮಸ್ಯೆಗೆ ಶತಮಾನದ ಇತಿಹಾಸವಿದೆ. ಈಗಲೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದ ತೊಂದರೆ ಮುಂದುವರಿದಿದೆ.ಸಿದ್ಧಾಪುರದ ಕ್ಯಾದಗಿ ವಲಯದಲ್ಲಿ ಅರಣ್ಯ ಅಧಿಕಾರಿಗಳ ಕಿರುಕುಳ ವಿರೋಧಿಸಿ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಅರಣ್ಯ ಅಧಿಕಾರಿಗಳು ಕಿತ್ತೆಸೆದಿದ್ದ ಅಂಗಡಿಯನ್ನು ಸ್ಥಳಿಯ ನಾಯಕರು ಪುನ: ಕಟ್ಟಿಕೊಡುವ ಮೂಲಕ ಅರಣ್ಯ ಅಧಿಕಾರಿಗಳ ದೌರ್ಜನ್ಯಕ್ಕೆ ದಿಟ್ಟ ಉತ್ತರ ನೀಡಿದರು.

