ನಾಗರಿಕಾ ಸೇವಾ ಅಧಿನಿಯಮ ೨೦೨೦-ವಿರೋಧ,

Inbox

ಚಿಂತನ ಉ.ಕ ಸಹಯಾನ ಕೆರೆಕೋಣಚಿಂತನ ರಂಗ ಅಧ್ಯಯನ ಕೇಂದ್ರ
ಪತ್ರಿಕಾ ಪ್ರಕಟಣೆ 
ಇತ್ತೀಚೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದ ರಾಜ್ಯ ನಾಗರಿಕ ಸೇವಾ ಅಧಿನಿಯಮ- 202೦ ಇದು ಸಂಪೂರ್ಣವಾಗಿ  ಸರಕಾರಿ ನೌಕರರ ಸಾಹಿತ್ಯ, ಕಲೆ, ಸಾಂಸ್ಕೃತಿ ಅಭಿವ್ಯಕ್ತಿಯನ್ನೊಳಗೊಂಡ ಸೃಜನಶೀಲ ಚಟುವಟಿಕೆಯನ್ನೇ ಕಿತ್ತುಕೊಳ್ಳಲು ಮುಂದಾಗಿದೆ. ಈ ನಾಡಿನ ಎಚ್ಚೆತ್ತ ಪ್ರಜ್ಞೆ ಯಾಗಿ, ಸಂವಿಧಾನದ ಕಾವಲುಗಾರರಾಗಿ ಕೆಲಸ ಮಾಡುತ್ತಿರುವ ಈ ನಾಡಿನ ಕವಿ, ಬರಹಗಾರರ, ಕಲಾವಿದ ಮತ್ತು ನಟರ ಕೊಡುಗೆಯನ್ನು  ಗೌರವಿಸಲು ಒಪ್ಪದ ಈ ಕರಡು ಸಂವಿಧಾನ ವಿರೋಧಿಯಾದದ್ದು ಮತ್ತು ಸರ್ಕಾರಿ ನೌಕರರನ್ನು ಮತ್ತು ಅವರ ಕುಟುಂಬವನ್ನು ಸರಕಾರದ ಜೀತದಾಳಾಗಿಸುವ ಉದ್ದೇಶ ಹೊಂದಿರುವುದಾಗಿದೆ. ಹಾಗಾಗಿ ಚಿಂತನ ಉತ್ತರ ಕನ್ನಡ ಮತ್ತು ಸಹಯಾನ ಕೆರೆಕೋಣ ಮತ್ತು ಚಿಂತನ ರಂಗ ಅಧ್ಯಯನ ಕೇಂದ್ರ ಈ ಕರಡನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ ಮತ್ತು ಇದನ್ನು ಹಿಂತೆಗೆದುಕೊಳ್ಳಲು  ಆಗ್ರಹಿಸುತ್ತದೆ.
 

ಈವರೆಗೆ ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಈ ನಿಯಮಾವಳಿಯನ್ನು  ತಿದ್ದುಪಡಿ ಮಾಡಿ ನೌಕರರ ಕುಟುಂಬವನ್ನು, ಅವರ ಅವಲಂಬಿತರನ್ನು ಇದರ ವ್ಯಾಪ್ತಿಗೆ ತಂದಿದೆ. ಮತ್ತು ಅವರು ಯಾವುದೇ ಹೋರಾಟ, ಪ್ರತಿಭಟನೆ, ಬರವಣಿಗೆಯಲ್ಲಿ ತೊಡಗುವುದನ್ನು ನಿಷೇಧಿಸುತ್ತದೆ. ಹೀಗೆ ಸರ್ಕಾರಿ ನೌಕರರನ್ನು ಅವಲಂಬಿಸಿದ ಎಲ್ಲರೂ ಈ ಸೇವಾ ಅಧಿನಿಯಮದಲ್ಲಿ ಬರುವಂತೆ ಮಾಡಿರುವುದು ಕೂಡ ಹಾಸ್ಯಾಸ್ಪದವಾಗಿದೆ. 
ಭಾರತ ಸಂವಿಧಾನವು ವಿಧಿ ೧೯ರಡಿ ಭಾರತದ ಪ್ರಜೆಗಳಿಗೆ  ಕೊಡಮಾಡಿದ ಸ್ವಾತಂತ್ರ್ಯದ ಹಕ್ಕಿನಲ್ಲಿ “ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ”ವೂ ಒಂದು. ಹಾಗೆ ಅನುಚ್ಛೇದ 51 ಎ ದಲ್ಲಿ  ಪ್ರಜೆಗಳ ಕರ್ತವ್ಯದ ಬಗ್ಗೆ ಗಮನ ಸೆಳೆಯುತ್ತಾ “ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಮತ್ತು ಇತರರಲ್ಲಿ ಬೆಳೆಸುವುದು” ಅತಿಮುಖ್ಯವಾದದ್ದು ಎಂದು ಹೇಳುತ್ತದೆ. ಆದರೆ ಈ ಕರಡಿನಲ್ಲಿ “ಯಾವುದೇ ರೀತಿಯ ಸಾಹಿತ್ಯಕ ಅಥವಾ ಕಲಾತ್ಮಕ ಅಥವಾ ವೈಜ್ಞಾನಿಕ ಕಾರ್ಯದಲ್ಲಿ ರೂಢಿಗತವಾಗಿ ತನ್ನನ್ನು ತೊಡಗಿಸಿಕೊಳ್ಳತಕ್ಕದ್ದಲ್ಲ” ಎಂದೂ  ಹೇಳುತ್ತದೆ. ಇನ್ನೊಂದೆಡೆ “ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಸರ್ವೋಚ್ಛತೆಗೆ ಸ್ವತಃ ಬದ್ಧನಾಗಿರತಕ್ಕದ್ದು ಮತ್ತು ಎತ್ತಿ ಹಿಡಿಯತಕ್ಕದ್ದು” ಎಂದು ಸರಕಾರಿ ನೌಕರರ ವರ್ತನೆ ಬಗ್ಗೆ ಮೊದಲು ಹೇಳಿದ ಈ ಕರಡು ಆಳದಲ್ಲಿ ಸಂವಿಧಾನಕ್ಕೆ ವಿರೋಧಿಯಾದ, ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುವ ಅಜೆಂಡಾ ಹೊಂದಿದೆ.

ಇದೊಂದು ಸಾಂಸ್ಕೃತಿಕ ಪ್ರಶ್ನೆ ಕೂಡ ಹೌದು. ಸಾಮಾನ್ಯ ಸರಕಾರಿ ನೌಕರರ ಮತ್ತು ನೌಕರಿಯಲ್ಲಿರುವ ಸಂವೇದನಾಶೀಲ ಲೇಖಕರು, ಕಲಾವಿದರ ಸ್ವಾತಂತ್ರವನ್ನು, ಅನ್ಯಾಯವನ್ನು ವಿರೋಧಿಸಿ ಮಾಡಬಹುದಾದ ಹೋರಾಟ, ಒತ್ತಾಯದಂತಹ ಸೌಲತ್ತುಗಳನ್ನು ಕಿತ್ತುಕೊಳ್ಳುವ ಈ ಕರಡು ವಾಪಸ್ ಆಗಬೇಕೆಂದು ಚಿಂತನ ಮತ್ತು ಸಹಯಾನ ಒತ್ತಾಯಿಸುತ್ತದೆ.
 ಬದುಕಿನಲ್ಲಿ ತಾನು ಮಾಡಿದ ಸಾಧನೆಗಾಗಿ ಗೌರವ ಪ್ರಶಸ್ತಿಗಳನ್ನು ಸ್ವೀಕರಿಸುವ ಅವಕಾಶವನ್ನು ಮತ್ತು ಸಂವಿಧಾನಬದ್ಧವಾಗಿ ತನಗೆ ಸಿಗಬೇಕಾದ ಹಕ್ಕುಗಳು ಮತ್ತು ಅವಕಾಶಗಳು ಸಿಗದಿದ್ದಾಗ ಅದರ ವಿರುದ್ಧ ತಾನು ಮಾಡಬಹುದಾದ ಪ್ರತಿಭಟನೆ, ಹಕ್ಕೊತ್ತಾಯದ ಕ್ರಮವನ್ನೂ ನಿಯಂತ್ರಿಸಲು ಹೊರಟಿರುವುದು ಖೇದಕರ. ಅದರಲ್ಲೂ ಎಲ್ಲರ ಹೋರಾಟದ ಮೂಲಕ ಗಳಿಸಿದ ರಾಜ್ಯೋತ್ಸವದ ಸಂದರ್ಭದಲ್ಲಿ ಇದನ್ನು ತಂದಿರುವುದು ಇಲಾಖೆಯ  ನೌಕರ ವಿರೋಧೀ, ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧೀ     ನಿಲುವಿಗೆ ಕೈಗನ್ನಡಿಯಾಗಿದೆ.ಒಂದರ ಹಿಂದೊಂದರಂತೆ‌ ತರುತ್ತಿರುವ ಅವೈಜ್ಞಾನಿಕ ನೀತಿಗಳ ಜೊತೆ ಈಗ ಸಾಹಿತ್ಯ ಸಾಂಸ್ಕೃತಿಕ ಅಭಿವ್ಯಕ್ತಿಯ ಸ್ವಾತಂತ್ರ್ಯ ವನ್ನೂ ನಿಯಂತ್ರಿಸ ಹೊರಟಿರುವ ಕ್ರಮವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು  ಒತ್ತಾಯಿಸುತ್ತದೆ. ಮತ್ತು     ನಾಡಿನ ಸಂವೇದನಾಶೀಲ ಜನತೆ ಸರಕಾರವನ್ನು ಒತ್ತಾಯಿಸಬೇಕೆಂದು ಮನವಿ ಮಾಡುತ್ತದೆ.
 *ಶಾಂತಾರಾಮ ನಾಯಕ ಹಿಚ್ಕಡ* , ಅಧ್ಯಕ್ಷರು, ಸಹಯಾನ ಕೆರೆಕೋಣ. *ಕಿರಣ ಭಟ್* ಚಿಂ.ರಂ.ಅ.ಕೇಂದ್ರ  *ವಿಠ್ಠಲ ಭಂಡಾರಿ,*  ಸಂಚಾಲಕ, ಚಿಂತನ ಉತ್ತರ ಕನ್ನಡ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *